ಎಸ್ ‌ಎಸ್ ‌ಎಫ್‌ ವತಿಯಿಂದ ರಕ್ತದಾನ ಶಿಬಿರ

June 21, 2019
2:30 PM

ನಿಂತಿಕಲ್ಲು : ಎಸ್ ‌ಎಸ್ ‌ಎಫ್‌ ನೆಕ್ಕಿಲ ಶಾಖೆ ಇದರ ಆಶ್ರಯದಲ್ಲಿ ಎಸ್ ಎಸ್ ಎಫ್ ದ.ಕ ಜಿಲ್ಲಾ ಬ್ಲಡ್ ಸೈಬೋ ಸಹಭಾಗಿತ್ವದಲ್ಲಿ 88ನೇಯ ‌ರಕ್ತದಾನ ಶಿಬಿರವು ಯೇನೆಪೋಯ ಮೆಡಿಕಲ್ ಕಾಲೇಜು ದೇರಳಕಟ್ಟೆ ಇವರ ಸಹಯೋಗದೊಂದಿಗೆ  ಖುವ್ವತುಲ್ ಇಸ್ಲಾಂ ಮದ್ರಸ ನೆಕ್ಕಿಲ ಸಂಭಾಗಣದಲ್ಲಿ ನಡೆಯಿತು

ಕಾರ್ಯಕ್ರಮದಲ್ಲಿ ಶಾಖಾ ಅಧ್ಯಕ್ಷರು ಅಝೀಝ್ ಪಿ ಎ ಅಧ್ಯಕ್ಷತೆ ವಹಿಸಿ ಅಧ್ಯಕ್ಷೀಯ ಭಾಷಣ ಗೈದರು. ಬದ್ರಿಯಾ ಜುಮ್ಮಾ ಮಸೀದಿ ನೆಕ್ಕಿಲ ಇದರ ಮುದರ್ರಿಸರು ಝಿಯಾದ್ ಸಖಾಫಿ ಬಾರಬೆಟ್ಟು ದುಆ ನೆರವೆರಿಸಿದರು. ಕಾರ್ಯಕ್ರಮವನ್ನು ದೇವಿಪ್ರಸಾದ್ ಜಾಕೆ ಸ್ಥಾಪಕಾಧ್ಯಕ್ಷ ರು ಜೆ ಸಿ ಐ ಪಂಜ ಉದ್ಘಾಟಿಸಿ ರಕ್ತದಾನದ ಮಹತ್ವ ಕುರಿತು ತಿಳಿಸುತ್ತಾ ರಕ್ತದಾನದಿಂದ ಪಡೆದುಕೊಳ್ಳುವುದೇ ಹೆಚ್ಚು ಕಳೆದುಕೊಳ್ಳುವುದು ಕಮ್ಮಿ ಎಂದು ಹಿತವಚನ ಗೈದರು, ಬಿ.ಜೆ.ಎಂ ಅಧ್ಯಕ್ಷರು ಉಮರ್ ಸೀಗೆಯಡಿ ಪ್ರಾಸ್ತಾವಿಕ ಭಾಷಣ ಮಾಡಿದರು.

ಎಸ್ ಎಸ್ ಎಫ್ ನಿಂತಿಕಲ್ಲು ಸೆಕ್ಟರ್ ಅಧ್ಯಕ್ಷರು ಜಬ್ಬಾರ್ ಹನೀಫಿ ,ವಾಚಣ್ಣ ಕೆರೆಮೂಲೆ, ಮಹೇಶ್ ಕೋಟೆ, ಕಾರ್ಯಕ್ರಮ ಆಶಂಸ ನೀಡಿದರು. ಎಸ್ .ಎಸ್.ಎಫ್ . ದ.ಕ ಜಿಲ್ಲಾ ಬ್ಲಡ್ ಸೈಬೋ ಉಸ್ತುವಾರಿ ಮಹಮ್ಮದ್ ಕರೀಂ ಬೋಳಂತೂರು ಅವರಿಗೆ ಮತ್ತು ಯೇನೆಪೋಯ ಮೆಡಿಕಲ್ ಕಾಲೇಜಿಗೆ ಸ್ಮರಣಿಕೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಎಸ್ ಎಸ್ ಎಫ್ ಬ್ಲಡ್ ಸೈಬೋ ಸುಳ್ಯ ಡಿವಿಷನ್ ಉಸ್ತುವಾರಿಗಳಾದ ಸಿದ್ದೀಕ್ ಗೂನಡ್ಕ , ರಿಯಾಝ್ ಪಿ ವೈ ನೆಕ್ಕಿಲ , ಅಬೂಬಕ್ಕರ್ ಪಾಂಡಿಗದ್ದೆ,ಎಸ್ ಎಸ್ ಎಫ್ ನೆಕ್ಕಿಲ ಶಾಖಾ ಕಾರ್ಯದರ್ಶಿ ರಝಾಕ್ ಕೆ ಹೆಚ್,ಎಸ್.ಎಂ.ಎ ಬೈತಡ್ಕ ರೀಜನಲ್ ಅಧ್ಯಕ್ಷರು ಅಬ್ದುರ್ರಹ್ಮಾನ್ ನೆಲ್ಲಿಕಟ್ಟೆ , ಉಪಸ್ಥಿತರಿದ್ದರು.

ಸುಮಾರು ಹತ್ತು ಗಂಟೆಯಿಂದ ಮಧ್ಯಾಹ್ನ ಎರಡು ಗಂಟೆಯವರೆಗೂ ರಕ್ತದಾನ ಶಿಬಿರವು ಮುಂದುವರೆದಿದ್ದೂ ,60 ಕ್ಕಿಂತಲೂ ಹೆಚ್ಚು ಜನರು ಪಾಲ್ಗೊಂಡು ರಕ್ತದಾನ ಮಾಡಿದರು.
ಸುಳ್ಯ ಎಸ್ಸೆಸ್ಸೆಫ್ ಡಿವಿಷನ್ ಕ್ಯಾಂಪಸ್ ಕಾರ್ಯದರ್ಶಿ ಖಲೀಲ್ ಝುಹ್ರಿ ಸ್ವಾಗತಿಸಿ ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಕೋಶಾಧಿಕಾರಿ ಹಸೈನಾರ್ ನೆಲ್ಲಿಕಟ್ಟೆ ವಂದಿಸಿದರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಸುರುಳಿ ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರದಲ್ಲಿ ಭಜನಾ ಮಂಡಳಿ ಉದ್ಘಾಟನೆ
February 24, 2026
6:51 AM
by: ಮಿರರ್‌ ಡೆಸ್ಕ್
ಸುಳ್ಯ ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಸನದುದಾನ ಮಹಾ ಸಮ್ಮೇಳನ ಹಾಗೂ ನುಸ್ರತ್ 42ನೇ ವಾರ್ಷಿಕ ಸಮಾರಂಭ
January 28, 2026
3:48 PM
by: ಮಿರರ್‌ ಡೆಸ್ಕ್
ಸುಳ್ಯದಲ್ಲಿ 265 ಅರ್ಹ ರೈತರಿಗೆ ಕೃಷಿ ಸವಲತ್ತುಗಳ ವಿತರಣೆ
January 20, 2026
6:24 AM
by: ದ ರೂರಲ್ ಮಿರರ್.ಕಾಂ
ಜನವರಿ 23 ರಿಂದ ಕದ್ರಿ ಫಲಪುಷ್ಪ ಪ್ರದರ್ಶನ
January 3, 2026
9:25 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror