ಸುಳ್ಯ: ಕುಕ್ಕೆ ಸುಬ್ರಹ್ಮಣ್ಯ ಭೇಟಿ ನೀಡಿದ ಪುತ್ತೂರು ಸಹಾಯಕ ಕಮೀಷನರ್ ಹಾಗು ಕುಕ್ಕೆ ದೇಗುಲದ ಪ್ರಭಾರ ಕಾರ್ಯನಿರ್ವಾಹಣಾಧಿಕಾರಿ ಹೆಚ್.ಕೆ.ಕೃಷ್ಣಮೂರ್ತಿ ಅಭಿವೃದ್ಧಿ ಕಾಮಗಾರಿಗಳ ಮತ್ತು ಷಷ್ಠಿ ಮಹೋತ್ಸವದ ಪೂರ್ವ ತಯಾರಿಗಳ ಬಗ್ಗೆ ಪ್ರಗತಿ ಪರಿಶೀಲನೆ ನಡೆಸಿದರು. ಕುಮಾರಧಾರ ಬಳಿ ಇದ್ದ ಲಗೇಜು ಕೊಠಡಿಗೆ ಕುಡಿಯುವ ನೀರಿನ ವ್ಯವಸ್ಥೆ ಗೆ ಎ.ಸಿ ಯವರು ಸೂಚಿಸಿದರು.
ಸ್ನಾನ ಘಟ್ಟದ ಬಳಿ ಇದ್ದ ಕಾರ್ಯನಿರ್ವಹಿಸುವ ಸೆಕ್ಯುರಿಟಿಗಳಿಗೆ ತಾತ್ಕಾಲಿಕ ವಿಶ್ರಾಂತಿಗೆ ವ್ಯವಸ್ಥೆ ಮಾಡುವಂತೆ, ಕುಮಾರಧಾರ ಸ್ನಾನ ಘಟ್ಟದ ವ್ಯಾಪ್ತಿಯಲ್ಲಿ ವ್ಯವಸ್ಥಿತ ಸಿ.ಸಿ ಕ್ಯಾಮರ ಹಾಕುವಂತೆ ತಿಳಿಸಿದರು. ಕುಮಾರಧಾರ ಸ್ನಾನ ಘಟ್ಟದ ಬಳಿಯ ಕಿಂಡಿ ಅಣೆಕಟ್ಟಿನಲ್ಲಿ ಸಿಲುಕಿಕೊಂಡು ಮರಗಳನ್ನು ತೆರವುಗೊಳಿಸಲು ಸೂಚಿಸಿದರು. ಕುಮಾರಧಾರ ಪ್ರವೇಶ ದ್ವಾರದ ಆಸುಪಾಸಿನ ಮರಗಳನ್ನು ತೆರವುಗೊಳಿಸಿ ರಸ್ತೆಯ ಕೆಲಸಗಳನ್ನು ತ್ವರಿತವಾಗಿ ಮಾಡುವಂತೆ ಸೂಚಿಸಿದರು. ಈ ಸಂದರ್ಭ ದೇವಾಲಯದ ಸಹಾಯಕ ಉಪಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಪೇರಾಲು, ಪಿ.ಡಬ್ಯೂ.ಡಿ ಯ ಹನುಮಂತ ರಾಯಪ್ಪ, ಶ್ರೀನಿವಾಸ್, ದೇವಾಲಯದ ಇಂಜಿನಿಯರ್ ಉದಯಕುಮಾರ್ ಮತ್ತಿತರರು ಉಪಸ್ಥಿತರಿದ್ದರು.