Advertisement
ನರಿಮೊಗರು: ಪ್ರಖ್ಯಾತಿ ಯುವತಿ ಮಂಡಲ ನರಿಮೊಗರು (ರಿ) ಪುರುಷರಕಟ್ಟೆ ಇದರ ಅಂಗಸಂಸ್ಥೆಯಾದ ಪುರುಷರಕಟ್ಟೆಯ ಗುರುಕುಲ ಕಲಾಕೇಂದ್ರ(ರಿ) ಇದರ ನೂತನ ನೃತ್ಯ ತರಬೇತಿ ಶಾಲೆಯ ಉದ್ಘಾಟನಾ ಸಮಾರಂಭವು ಎ.೧೪ರಂದು ಪುರುಷರಕಟ್ಟೆಯಲ್ಲಿ ನಡೆಯಲಿದೆ.
ಪ್ರಖ್ಯಾತಿ ಯುವತಿ ಮಂಡಲದ ಗೌರವಾಧ್ಯಕ್ಷೆ ವಿದ್ಯಾ ನಾಯಕ್ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದು, ಯುವ ಮುಂದಾಳು ಅರುಣ್ ಕುಮಾರ್ ಪುತ್ತಿಲ ಉದ್ಘಾಟಿಸಲಿರುವರು. ಅತಿಥಿಗಳಾಗಿ ಜಯಂತ್ ನಡುಬೈಲು, ವೇದನಾಥ ಸುವರ್ಣ ಉಪಸ್ಥಿತರಿರುವರು.
ಈ ಸಮಾರಂಭಕ್ಕೆ ಗಣ್ಯ ಉಪಸ್ಥಿತಿ- ಕನ್ನಡ,ತುಳು ಚಲನಚಿತ್ರದಲ್ಲಿ ನಟಿಸುತ್ತಿರುವ ಪ್ರಕಾಶ್ ಕೆ ತುಮಿನಾಡು, ನಾಯಕ ನಟ ಪೃಥ್ವಿ ಅಂಬರ್, ನಾಯಕ ನಟಿ ನಿರೀಕ್ಷಾ ಶೆಟ್ಟಿ, ರಾಷ್ಟ್ರ ಮಟ್ಟದಲ್ಲಿ ಖ್ಯಾತಿಯನ್ನುಪಡೆದಿರುವ ನೃತ್ಯಗಾರ್ತಿ,ಜಾದುಗಾರ್ತಿ ಶಮಾ ಪರ್ವಿನ್ ತಾಜ್ ಇವರು ಭಾಗವಹಿಸಲಿರುವರು.
Advertisement
ಇದು ನಮ್ಮ YouTube ಚಾನೆಲ್ -
ಇಷ್ಟವಾದರೆ Subscribe ಮಾಡಿ
Advertisement
Be the first to comment on "ಎ.14 – ಪುರುಷರಕಟ್ಟೆಯಲ್ಲಿ ನೂತನ ನೃತ್ಯ ತರಬೇತಿ ಶಾಲೆ ಉದ್ಘಾಟನೆ"