ಎ.20 : ಬೆಳ್ಳಾರೆಯಲ್ಲಿ ಪುಸ್ತಕ ವಿತರಣೆ, ಸಾಧಕರಿಗೆ ಸಮ್ಮಾನ ಹಾಗೂ ಕಬಡ್ಡಿ ಪಂದ್ಯಾಟ

Advertisement

ಸುಳ್ಯ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ, ಸುಳ್ಯ, ಪುತ್ತೂರು, ಕಡಬ ತಾ.ಸಮಿತಿ ಮತ್ತು ದ.ಕ.ಜಿಲ್ಲಾ ಸಮಿತಿ ಆಶ್ರಯದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ 128 ಜನ್ಮ ದಿನಾಚರಣೆ ಪ್ರಯುಕ್ತ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ, ಸಾಧಕರಿಗೆ ಸಮ್ಮಾನ ಹಾಗೂ ಅಮೆಚೂರು ಕಬಡ್ಡಿ ಅಸೋಸಿಯೇಶನ್ ಇದರ ಸಹಭಾಗಿತ್ವದಲ್ಲಿ 13 ನೇ ವರ್ಷದ ಮಹಿಳಾ ಮತ್ತು ಪುರುಷರ ಮ್ಯಾಟ್ ಅಂಕಣದ ಕಬಡ್ಡಿ ಪಂದ್ಯಾಟವು ಎ.20 ರಂದು ಬೆಳ್ಳಾರೆ ಜ್ಞಾನಗಂಗಾ ಪಬ್ಲಿಕ್ ಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ದ.ಸಂ.ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಆನಂದ ಬೆಳ್ಳಾರೆ ಹೇಳಿದ್ದಾರೆ.
ಸುಳ್ಯದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜೇಶ್ವರಿ ಆರ್.ಭಟ್ ಬಾಳಿಲ ಉದ್ಘಾಟಿಸಲಿದ್ದಾರೆ. ಪುತ್ತೂರು ತಾಲೂಕು ಸಂಚಾಲಕ ದಿನೇಶ್ ವೀರಮಂಗಲ ಅಧ್ಯಕ್ಷತೆ ವಹಿಸಲಿದ್ದಾರೆ. ಮಂಜಪ್ಪ ರೈ ಬೆಳ್ಳಾರೆ, ಶಕುಂತಳಾ, ನಳಿನಾಕ್ಷಿ, ಜಯಪ್ರಕಾಶ್ ರೈ, ಸುನಿಲ್ ರೈ ಪೆರುವಾಜೆ, ಕುಂಬ್ರ ದಯಾಕರ ಆಳ್ವ ಮೊದಲಾದವರು ಭಾಗವಹಿಸಲಿದ್ದಾರೆ. ಸಂಜೆ ಸಭಾ ಕಾರ್ಯಕ್ರಮದಲ್ಲಿ ಜಿಲ್ಲಾ ಸಂಚಾಲಕ ಯು.ಕೆ.ಗಿರೀಶ್ ಕುಮಾರ್ ಅಧ್ಯಕ್ಷತೆ ವಹಿಸಲಿದ್ದು, ಮೋಹನ ಗೌಡ ಇಡ್ಯಡ್ಕ ಉದ್ಘಾಟಿಸಲಿದ್ದಾರೆ. ಅಜಯ್ ಬಿ.ಸಿ.ರೋಡು ಸಹಿತ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ. ಎ.21 ರಂದು ಸಮಾರೋಪ ಸಮಾರಂಭ ನಡೆಯಲಿದೆ ಎಂದರು.
ಈ ಸಂದರ್ಭದಲ್ಲಿ ಸಮಾಜ ಸೇವೆಗಾಗಿ ಬಾಬು ಭಂಡಾರಿ, ಅಂತಾರಾಷ್ಟ್ರೀಯ ಕ್ರೀಡಾಪಟು ಸುನಂದ ರೈ, ಎಂಜಿನಿಯರ್ ಮಹಮ್ಮದ್ ಬೆಳ್ಳಾರೆ, ಸಮಾಜ ಸೇವೆಗಾಗಿ ಹನೀಫ್ ಸಾಹೇಬ್ ಪಾಜಪಳ್ಳ, ಚಲನಚಿತ್ರ ನಟ ಮೋಹನ್ ಶೇಣಿ ಮೊದಲಾದವರು ಸಮ್ಮಾನಿಸಲಾಗುವುದು ಎಂದು ಹೇಳಿದರು.
ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ
ಬೆಳಗ್ಗೆ ಉದ್ಘಾಟನಾ ಸಮಾರಂಭದ ಬಳಿಕ ಮಹಿಳಾ ವಿಭಾಗದ 6 ತಂಡಗಳ ಮಧ್ಯೆ ಕಬಡ್ಡಿ ಪಂದ್ಯಾಟ ನಡೆಯಲಿದೆ. ಸುಳ್ಯ ಮತ್ತು ಪುತ್ತೂರು ತಾಲೂಕಿನ ತಂಡಗಳು ಭಾಗವಹಿಸಲಿವೆ. ರಾತ್ರಿ ನಡೆಯುವ ಪುರುಷರ ವಿಭಾಗದ ಕಬಡ್ಡಿ ಪಂದ್ಯಾಟದಲ್ಲಿ ಪುತ್ತೂರು, ಸುಳ್ಯ, ಕಡಬ ತಾಲೂಕಿನ 16 ತಂಡಗಳು ಭಾಗವಹಿಸಲಿವೆ. ಪಂದ್ಯಾಟವು ಲೀಗ್ ಮಾದರಿಯಲ್ಲಿ ನಡೆಯಲಿದ್ದು, ಮ್ಯಾಟ್ ಅಂಕಣದ ವ್ಯವಸ್ಥೆ ಮಾಡಲಾಗುವುದು. ವಿಜೇತರಿಗೆ ನಗದು ಸಹಿತ ಟ್ರೋಫಿ ಬಹುಮಾನವಿದೆ ಎಂದು ಅವರು ವಿವರಿಸಿದರು. ಪತ್ರಿಕಾಗೋಷ್ಟಿಯಲ್ಲಿ ದ.ಸಂ.ಸ.ತಾಲೂಕು ಸಂಚಾಲಕ ಅಚ್ಚುತ ಮಲ್ಕಜೆ ಉಪಸ್ಥಿತರಿದ್ದರು.

Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಎ.20 : ಬೆಳ್ಳಾರೆಯಲ್ಲಿ ಪುಸ್ತಕ ವಿತರಣೆ, ಸಾಧಕರಿಗೆ ಸಮ್ಮಾನ ಹಾಗೂ ಕಬಡ್ಡಿ ಪಂದ್ಯಾಟ"

Leave a comment

Your email address will not be published.


*