ಸುಳ್ಯ: ಇಲ್ಲಿನ ಶ್ರೀ ಗುರು ರಾಘವೇಂದ್ರ ಮಠದ ಪ್ರಥಮ ಪ್ರತಿಷ್ಠಾ ವಾರ್ಷಿಕ ಮಹೋತ್ಸವ ಎ.22 ರಂದು ವೇದಮೂರ್ತಿ ಹರಿ ಎಳಚಿತ್ತಾಯ ನೇತೃತ್ವದಲ್ಲಿ ನಡೆಯಲಿದೆ ಎಂದು ಬೃಂದಾವನ ಸೇವಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಶ್ರೀಕೃಷ್ಣ ಸೋಮಯಾಗಿ ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 9.00 ರಿಂದ ಶ್ರೀ ರಾಘವೇಂದ್ರ ಅಷ್ಟಾಕ್ಷರಿ ಮಂತ್ರ ಹೋಮ, ಮಧ್ಯಾಹ್ನ ಅಲಂಕಾರ ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 5.00 ಗಂಟೆಗೆ ಆಶ್ಲೇಷಾ ಬಲಿ ಪೂಜೆ, ರಂಗಪೂಜೆ ನೆರವೆರಲಿರುವುದು. ಬಳಿಕ ಮಂತ್ರಾಕ್ಷತೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.
ಭಜನೆ ಕಾರ್ಯಕ್ರಮ, ಕುಂಟಾರು ವಾಸುದೇವ ತಂತ್ರಿ ಮತ್ತು ಬಳಗದವರಿಂದ ಭಕ್ತಿಗಾನ ಹಾಗೂ ರಾತ್ರಿ ಧಾರ್ಮಿಕ ಸಭೆ ನಡೆಯಲಿದೆ. ಡಾ. ಕೆ.ವಿ.ಚಿದಾನಂದ ಅಧ್ಯಕ್ಷತೆ ವಹಿಸಿಲಿದ್ದಾರೆ. ಕೆಮ್ಮಿಂಜೆ ಕಾರ್ತಿಕ್ ತಂತ್ರಿ ಉಪ್ಪಳ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಡಾ.ಕಿರಣ್ ಕುಮಾರ್, ಕೃಷ್ಣ ಕಾಮತ್ ಅರಂಬೂರು, ಶ್ರೀಕೃಷ್ಣ ಸೋಮಯಾಗಿ, ಶ್ರೀಧರ ಭಾಗವತ ಹರಿಹರ, ಸುಂದರ ಸರಳಾಯ, ಸುಮಾ ಸುಬ್ಬರಾವ್ ಉಪಸ್ಥಿತರಿರಲಿದ್ದಾರೆ. ಬಳಿಕ ಶಿಕ್ಷಕರ ಯಕ್ಷಗಾನ ಒಕ್ಕೂಟದವರಿಂದ ರತಿ ಕಲ್ಯಾಣ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.
ಪತ್ರಿಕಾಗೋಷ್ಟಿಯಲ್ಲಿ ಮಠ ನಿರ್ಮಾಣ ಸಮಿತಿ ಕಾರ್ಯಾಧ್ಯಕ್ಷ ಮುರಳಿಕೃಷ್ಣ ಎಂ.ಆರ್., ಟ್ರಸ್ಟಿನ ಕಾರ್ಯದರ್ಶಿ ಗಿರೀಶ್ ಕೇಕುಣ್ಣಾಯ, ಟ್ರಸ್ಟಿಗಳಾದ ರಾಮ್ ಕುಮಾರ್, ಅಖಿಲ್ ಸೋಮಯಾಗಿ ಉಪಸ್ಥಿತರಿದ್ದರು.
ಎ.22 : ಶ್ರೀ ಗುರು ರಾಘವೇಂದ್ರ ಮಠದ ಪ್ರತಿಷ್ಠಾ ವಾರ್ಷಿಕ ಮಹೋತ್ಸವ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
ಇಷ್ಟವಾದರೆ Subscribe ಮಾಡಿ
Be the first to comment on "ಎ.22 : ಶ್ರೀ ಗುರು ರಾಘವೇಂದ್ರ ಮಠದ ಪ್ರತಿಷ್ಠಾ ವಾರ್ಷಿಕ ಮಹೋತ್ಸವ"