ಏನೆಕಲ್ಲು: ಸುಳ್ಯ ತಾಲೂಕಿನ ಏನೆಕಲ್ಲು ಗ್ರಾಮದ ರೈತ ಸಂಘದ ನೂತನ ಗ್ರಾಮ ಘಟಕಕ್ಕೆ ಆಧಿಕಾರ ಹಸ್ತಾಂತರ, ಪ್ರದೇಶದ ಸಮಸ್ಯೆಗಳ ಕುರಿತು ಚಿಂತನ ಸಭೆ ಮತ್ತು ಹಿರಿಯ ಸಾಧಕ ರೈತರಿಗೆ ಸನ್ಮಾನ ಏನೆಕಲ್ಲು ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ನಡೆಯಿತು. ಸಭಾಧ್ಯಕ್ಷತೆಯನ್ನು ಗ್ರಾಮ ಘಟಕದ ಅಧ್ಯಕ್ಷರಾದ ಬಾಲಕೃಷ್ಣ ಮರಮಾಲೆ ವಹಿಸಿದ್ದರು.
ಮುಖ್ಯ ಅತಿಥಿಯಾಗಿ ರಾಜ್ಯ ಕಾರ್ಯದರ್ಶಿ ರವಿಕಿರಣ್ ಪುಣಚ ಮಾತನಾಡಿ ಪ್ರಸ್ತುತ ಕಾಲಘಟ್ಟದಲ್ಲಿ ಕೃಷಿ ಕ್ಷೇತ್ರ ಹಾಗೂ ಭಾರತೀಯ ಸಂಸ್ಕೃತಿಯ ಉಳಿವಿಗಾಗಿ ರೈತರು ಒಗ್ಗಟ್ಟಾಗಬೇಕು, ದೇಶಕಟ್ಟುವಲ್ಲಿ ತ್ಯಾಗಕ್ಕೆ ಸಿದ್ದರಾಗಬೇಕೆಂದು ಕರೆನೀಡಿದರು.
ಅತಿಥಿಗಳಾಗಿ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾದ ಓಸ್ವಾಲ್ಡ್ ಪ್ರಕಾಶ್ ಪೆರ್ನಾಂಡಿಸ್, ಜಿಲ್ಲಾ ಉಪಾಧ್ಯಕ್ಷರಾದ ದಿವಾಕರ ಪೈ ಮಜಿಗುಂಡಿ,ಸುಳ್ಯ ತಾಲೂಕು ಅಧ್ಯಕ್ಷರಾದ ಲೋಲಾಜಾಕ್ಷ ಗೌಡ ಭೂತಕಲ್ಲು, ತಾಲೂಕು ಸಂಚಾಲಕರಾದ ಸೆಬಾಸ್ಟಿಯನ್, ಲೋಕಯ್ಯ ಗೌಡ ಹಾಗೂ ಐವರ್ನಾಡು ಗ್ರಾಮ ಘಟಕದ ಅಧ್ಯಕ್ಷರಾದ ನೂಜಾಲು ಪದ್ಮನಾಭ ಹಾಗೂ ಹಲವಾರು ರೈತ ಮುಖಂಡರು ಭಾಗವಹಿಸಿದ್ದರು.
ಪ್ರಾಸ್ತಾವಿಕವಾಗಿ ಸುಳ್ಯ ತಾಲೂಕು ಪ್ರಧಾನ ಕಾರ್ಯದರ್ಶಿ ತೀರ್ಥರಾಮ ನೆಡ್ಚಿಲು ಮಾತಾನಾಡಿದರು.