ಸುಳ್ಯ: ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು, ಯುವಕ ಮಂಡಲ ಕನಕಮಜಲು ವತಿಯಿಂದ ಸನ್ಮಾನ ಸಮಾರಂಭ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಡಿ. 28ರಂದು ಶ್ರೀ ನ. ರಾ. ಗೌ. ಸ. ಮಾ. ಹಿ. ಪ್ರಾ. ಶಾಲೆಯ ರಂಗಚಾವಡಿಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮಂಡ್ಯದ ಗುರುದೇವ ಲಲಿತಕಲಾ ಅಕಾಡೆಮಿಯ ನಿರ್ದೇಶಕಿ ಡಾ. ಚೇತನ ರಾಧಾಕೃಷ್ಣ ಮೂರ್ಜೆ ಹಾಗೂ 2018-19 ನೇ ಸಾಲಿನ ಜಿಲ್ಲಾ ಮತ್ತು ರಾಜ್ಯ ಯುವ ಪ್ರಶಸ್ತಿಗೆ ಭಾಜನರಾದ ಯುವಕ ಮಂಡಲದ ಪೂರ್ವಧ್ಯಕ್ಷರಾದ ಸಂತೋಷ್ ಕುಮಾರ್ ನೆಡಿಲು, ಹರಿಪ್ರಸಾದ್ ಮಾಣಿಕೊಡಿ ಹಾಗೂ ಕಾರ್ಯದರ್ಶಿ ರಕ್ಷಿತ್ ಅಕ್ಕಿಮಲೆ ಇವರನ್ನು ಚಲನಚಿತ್ರ ಹಾಗೂ ರಂಗಭೂಮಿ ಕಲಾವಿದ ಮಂಡ್ಯ ರಮೇಶ್ ಸನ್ಮಾನಿಸಿದರು.
ಕರ್ನಾಟಕ ಅರಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕನಕಮಜಲು ಗ್ರಾ. ಪಂ. ಅಧ್ಯಕ್ಷೆ ಜಯಲತಾ ಗಬ್ಬಲಡ್ಕ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿ. ಪಂ. ಸದಸ್ಯೆ ಪುಷ್ಪಾವತಿ ಬಾಳಿಲ, ತಾ. ಪಂ. ಸದಸ್ಯ ತೀರ್ಥರಾಮ ಬಾಲಾಜೆ, ಯುವಕ ಮಂಡಲದ ಸಂಸ್ಕೃತಿಕ ಕಾರ್ಯದರ್ಶಿ ಅಶ್ವತ್ ಅಡ್ಕಾರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಯುವಕ ಮಂಡಲದ ಅಧ್ಯಕ್ಷ ಜಯಪ್ರಸಾದ್ ಕಾರಿಂಜ ಸ್ವಾಗತಿಸಿ, ಕಾರ್ಯದರ್ಶಿ ಬಾಲಚಂದ್ರ ನೆಡಿಲು ವಂದಿಸಿ, ದಾಮೋದರ ಕಣಜಾಲು ನಿರೂಪಿಸಿದರು. ಬಳಿಕ ನಟನ ಮೈಸೂರು ದಿಶಾ ರಮೇಶ್ ಮತ್ತು ಬಳಗದವರಿಂದ ರಂಗ ಗೀತೆಗಳ ಗಾಯನ ನಂತರ ನಟನ ರಂಗಶಾಲೆ ಮೈಸುರು ಇವರಿಂದ ಮಂಡ್ಯ ರಮೇಶ್ ನಿರ್ದೇಶನದ ಚೋರ ಚರಣದಾಸ ನಾಟಕ ರಂಗ ಚಾವಡಿಯಲ್ಲಿ ಪ್ರದರ್ಶನಗೊಂಡಿತು.