ಸಂಪಾಜೆ: ಕನ್ನಡ ಸಾಹಿತ್ಯ ಪರಿಷತ್ ಸಂಪಾಜೆ ಹೋಬಳಿ ಘಟಕದ ಪದಗ್ರಹಣ ಮತ್ತು ಕೊಡಗು ಸಂಪಾಜೆ ಗ್ರಾ.ಪಂ.ಮಾಜಿ ಅಧ್ಯಕ್ಷ ಬಾಲಚಂದ್ರ ಕಳಗಿ ಸಂಸ್ಮರಣಾ ಕಾರ್ಯಕ್ರಮ ಸಂಪಾಜೆ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸಭಾ ಭವನದಲ್ಲಿ ನಡೆಯಿತು. ಕಸಾಪ ಹೋಬಳಿ ಘಟಕದ ನೂತನ ಅಧ್ಯಕ್ಷ ಎನ್.ಸಿ.ಅನಂತ ಊರುಬೈಲು ಮತ್ತು ತಂಡಕ್ಕೆ ಕನ್ನಡ ಭುವನೇಶ್ವರಿಯ ಧ್ವಜವನ್ನು ಹಸ್ತಾಂತರಿಸುವ ಮೂಲಕ ಪದಗ್ರಹಣ ನೆರವೇರಿಸಲಾಯಿತು.
ಕಸಾಪ ಕೊಡಗು ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್, ಪತ್ರಕರ್ತ ಸಂತೋಷ್ ಕುಡೆಕಲ್ಲು, ಕಸಾಪ ನಿಕಟಪೂರ್ವ ಅಧ್ಯಕ್ಷ ಕುಮಾರ್, ಹೋಬಳಿ ಕಸಾಪ ಮಾಜಿ ಅಧ್ಯಕ್ಷ ಲೋಕನಾಥ್ ಅಮೆಚೂರು, ಗೌರವ ಸಲಹೆಗಾರ ವೆಂಕಪ್ಪ ಕಡಂಬಡ್ಕ ಉಪಸ್ಥಿತರಿದ್ದರು. ಕಸಾಪ ಕಾರ್ಯದರ್ಶಿ ಬಿ.ಜೆ.ಯಶೋಧರ, ಸಂಪಾಜೆ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಮುಖ್ಯ ಶಿಕ್ಷಕ ಕುಮಾರ್ ರವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಂಪಾಜೆ ಗ್ತಾಮದ ಅಭಿವೃದ್ಧಿಯ ಹರಿಕಾರ ಮಾಜಿ ಅಧ್ಯಕ್ಷ ಬಾಲಚಂದ್ರ ಕಳಗಿ ಅವರ ಸಂಸ್ಮರಣೆ ಮತ್ತು ನುಡಿನಮನ ಕಾರ್ಯಕ್ರಮ ನಡೆಯಿತು. ದಿವಂಗತ ಬಾಲಚಂದ್ರ ಕಳಗಿಯವರ ತಂದೆ ವೆಂಕಪ್ಪ ಕಳಗಿ, ಕಳಗಿಯವರ ಪತ್ನಿ ಪಂಚಾಯತ್ ಸದಸ್ಯೆ ರಮಾದೇವಿ ಕಳಗಿ, ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಕುಮಾರ್ ಚೆದ್ಕಾರ್, ಉಪಾಧ್ಯಕ್ಷ ಸುಂದರ ಬಿಸಿಲುಮನೆ, ಸಹನಾ ಕಾಂತಬೈಲು, ಜಾನಪದ ಕಲಾವಿದ ದೇವಪ್ಪ ಕೊಯನಾಡು, ಶ್ರೀ ದೇವತಾರಾಧನ ಸಮಿತಿ ಸಂಪಾಜೆ ಗೌರವಾಧ್ಯಕ್ಷ ಬಿ. ಆರ್. ಶಿವರಾಮ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ‘ಬಿ’ ಒಕ್ಕೂಟದ ಅಧ್ಯಕ್ಷೆ ಭಾರತಿ ಚಂದ್ರಶೇಖರ್, ಹಿರಿಯರಾದ ಮಾಯಿಲಪ್ಪ ಮೂಲ್ಯ, ಸಂಪಾಜೆ ಸರಕಾರಿ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಶ್ರೀಧರ್ ಪಡ್ಪು, ಭರತ್ ಕೇನಾಜೆ, ಬಬಿನ್ ಹನಿಯಡ್ಕ, ರವಿರಾಜ್ ಹೊಸೂರು, ಪುರುಷೋತ್ತಮ ಬಂಗಾರಕೋಡಿ, ಅಮೃತರಾಜ ಮತ್ತಿತರರು ಉಪಸ್ಥಿತರಿದ್ದರು.