ಪುತ್ತೂರು: ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ವತಿಯಿಂದ ಬೆಳಗಾವಿಯಲ್ಲಿ ನ.18 ರಿಂದ 20ರ ತನಕ ನಡೆದ ರಾಜ್ಯಮಟ್ಟದ ಪ್ರಾಥಮಿಕ ಹಾಗು ಪ್ರೌಢ ಶಾಲಾ ವಿದ್ಯಾರ್ಥಿಗಳ ಕರಾಟೆ ಪಂದ್ಯಾವಳಿಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿನಿ ಸಂಹಿತಾ ಶರ್ಮ ಪ್ರಾಥಮಿಕ ಶಾಲಾ ಬಾಲಕಿಯರ -46 ಕೆಜಿ ಕುಮಿಟೆಯಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದು ಮುಂದೆ ಮಧ್ಯಪ್ರದೇಶದ ಜಬಲ್ ಪುರದಲ್ಲಿ ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ ಆಯೋಜಿಸಲಿರುವ 65ನೇ ರಾಷ್ಟ್ರೀಯ ಪಂದ್ಯಾಟದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಲು ಆಯ್ಕೆಯಾಗಿರುತ್ತಾರೆ.
Advertisement
ಇವರು ಇನ್ಸ್ಟಿಟ್ಯೂಟ್ ಆಫ್ ಕರಾಟೆ ಆ್ಯಂಡ್ ಮಾರ್ಷಲ್ ಆರ್ಟ್ಸ್-ಐಕೆಎಂಎಸಂಸ್ಥೆಯ ಮುಖ್ಯ ತರಬೇತುದಾರರಾದ ಸೆನ್ಸಾಯಿ ನಿತಿನ್ ಎನ್ ಸುವರ್ಣ ಹಾಗು ತರಬೇತುದಾರರಾದ ಸಂಪತ್ ಕುಮಾರ್ ರವರಿಂದ ತರಬೇತಿಯನ್ನು ಪಡೆಯುತಿದ್ದಾರೆ. ಸಾಲ್ಮರ ನಿವಾಸಿ ರಾಜೇಶ್ ಶರ್ಮ ಹಾಗು ಸೀಮಾ ದಂಪತಿ ಪುತ್ರಿ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement