ಕರಾವಳಿಯಲ್ಲಿ “ಕ್ಯಾರ್” ಚಂಡಮಾರುತಕ್ಕೆ “ಕೇರ್” : ಬೆನ್ನುಬೆನ್ನಿಗೇ 3 ಚಂಡಮಾರುತದ ಸುಳಿಯಲ್ಲಿ ಕರಾವಳಿ…!

October 24, 2019
9:20 PM

ಮಂಗಳೂರು: ಅರಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಉದ್ಭವಿಸಿದ “ಕ್ಯಾರ್” ಚಂಡ ಮಾರುತ ಕರಾವಳಿ ಕಡೆಗೆ ಅಪ್ಪಳಿಸುತ್ತಿದೆ. ಹೀಗಾಗಿ ಇಡೀ ಕರಾವಳಿ ತೀರದಲ್ಲಿ ರೆಡ್ ಎಲರ್ಟ್ ಘೋಷಣೆ ಮಾಡಲಾಗಿದ್ದು ಮುಂಬಯಿ, ಗೋವಾ, ಕಾರವಾರ, ಉಡುಪಿ, ಮಂಗಳೂರು ಕರಾವಳಿ ತೀರಕ್ಕೆ ಅಪ್ಪಳಿಸಲಿದೆ. ಹೀಗಾಗಿ ಮುಂದಿನ 24 ಗಂಟೆಗಳಲ್ಲಿ ಗಾಳಿ ಸಹಿತ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಈ ಕಾರಣದಿಂದ ಕರಾವಳಿ ಪ್ರದೇಶದಲ್ಲಿ ಎಚ್ಚರಿಕೆ ವಹಿಸಲಾಗಿದೆ.  ಕ್ಯಾರ್ ಬೆನ್ನಿಗೇ ಇನ್ನೆರಡು  3 ಚಂಡಮಾರುತ ಬೀಳುವ ಸಾಧ್ಯತೆ ಇದೆ. ಸದ್ಯದ ಹವಾಮಾನದ ಪ್ರಕಾರ  “ಕ್ಯಾರ್” ಬಳಿಕ “ಮಹಾ” ನಂತರ “ಬುಲ್ ಬುಲ್”  ಚಂಡಮಾರುತವೂ ಸಿದ್ಧವಾಗಿದೆ.

Advertisement

ಕರ್ನಾಟಕದಲ್ಲಿ ‘ಕ್ಯಾರ್’ ಚಂಡಮಾರುತ ಅಬ್ಬರಿಸಲಿದೆ. ಮುಂದಿನ ಮೂರು ದಿನಗಳ ಕಾಲ ಭರ್ಜರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ಕರಾವಳಿ ಭಾಗದಲ್ಲಿ ರೆಡ್ ಅಲರ್ಟ್ ಘೋಸಿಲಾಗಿದೆ. ಅರಬ್ಬಿ ಸಮುದ್ರ ಮತ್ತು ಲಕ್ಷದ್ವೀಪಗಳಲ್ಲಿ ವಾಯುಭಾರ ಕುಸಿತದ ಪ್ರಭಾವದಿಂದ ರಾಜ್ಯದ ಅನೇಕ ಕಡೆ ಭಾರಿ ಮಳೆಯಾಗುತ್ತಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ  ಜಿಲ್ಲಾಮಟ್ಟದ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿಯೇ ಇರಬೇಕು. ಸಾರ್ವಜನಿಕರ ದೂರುಗಳಿಗೆ ತಕ್ಷಣ ಸ್ಪಂದಿಸುವಂತೆ ಆದೇಶಿಸಲಾಗಿದೆ. ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿದ್ದಲ್ಲಿ 1077 ಸಂಖ್ಯೆಗೆ ಕರೆ ಮಾಡುವಂತೆ ಎರಡೂ ಜಿಲ್ಲೆಯ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದ್ದಾರೆ.

ಇದರ ಬೆನ್ನಿಗೇ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತಗೊಳ್ಳುತ್ತಿದ್ದು “ಮಹಾ” ಹೆಸರಿನ ಚಂಡಮಾರುತ  ಅ.25 ರ ಹೊತ್ತಿಗೆ ಕಾಣಿಸಲಿದೆ. ಅ.26 ರಂದು ಮತ್ತಷ್ಟು ವಾಯುಭಾರ ಕುಸಿತದೊಂದಿಗೆ ತಮಿಳುನಾಡು ಕರಾವಳಿ ತೀರ, ಪಾಂಡಿಚೇರಿ ಮೊದಲಾದ ಕಡೆಗಳಲ್ಲಿ  ಅಪ್ಪಳಿಸಿ ಶ್ರೀಲಂಕಾದಲ್ಲೂ ಕಾಣಿಸಿಕೊಂಡು ಕೇರಳದ ಪ್ರವೇಶಿಸುವ ವೇಳೆ ದುರ್ಬಲವಾಗಲಿದೆ ಎಂದು ಅಂದಾಜಿಸಲಾಗಿದೆ.

ಕ್ಯಾರ್ ಹಾಗೂ ಮಹಾ ಚಂಡಮಾರುತದ ಕಾರಣದಿಂದಾಗಿ ಇನ್ನೊಂದು ಚಂಡಮಾರುತ “ಬುಲ್ ಬುಲ್ ”  ಕಾಣಿಸಬಹುದು ಎಂದು ಅಂದಾಜಿಸಲಾಗಿದೆ ಇದು ಅ.27 ರ ಹೊತ್ತಿಗೆ ಫಿಲಿಫೈನ್ ನಲ್ಲಿ ಅಪ್ಪಳಿಸಿ ನಂತರ  ಎರಡು ದಿನಗಳಲ್ಲಿ ದಕ್ಷಿಣ ಚೀನಾದ ಸಮುದ್ರದಲ್ಲಿ  ಕಾಣಿಸಿಕೊಂಡು ಭಾರತದಲ್ಲೂ ಕಾಣಿಸಬಹುದು.

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮನೆಗೆ ಇಡುವ ಹೆಸರನ್ನು ಯಾವ ಅಕ್ಷರದಿಂದ ಆರಂಭಿಸಿದರೆ ಉತ್ತಮ..?
July 18, 2025
6:28 AM
by: ದ ರೂರಲ್ ಮಿರರ್.ಕಾಂ
ನಕಲಿ, ಕಳಪೆ ಗುಣಮಟ್ಟದ ರಸಗೊಬ್ಬರ ಪೂರೈಕೆ | ಕಠಿಣ ಕ್ರಮಕ್ಕೆ  ರಾಜ್ಯ ಸರ್ಕಾರಕ್ಕೆ ಕೇಂದ್ರದಿಂದ ನಿರ್ದೇಶನ
July 17, 2025
10:13 PM
by: The Rural Mirror ಸುದ್ದಿಜಾಲ
ಮಂಡ್ಯದಲ್ಲಿ  ಸ್ವಸಹಾಯ ಸಂಘದ ಮಹಿಳೆಯರಿಗೆ ಮೇಕೆ, ಕುರಿ, ಕೋಳಿ ಸಾಕಾಣಿಕೆ ಅವಕಾಶ
July 17, 2025
10:01 PM
by: The Rural Mirror ಸುದ್ದಿಜಾಲ
ಇಂಧನ ಆಮದು ದೇಶಗಳ ಗುಂಪು ವಿಸ್ತರಿಸಿದ ಭಾರತ – 2 ಲಕ್ಷ ಚ.ಕಿ.ಮೀ. ಪ್ರದೇಶದಲ್ಲಿ ಹೈಡ್ರೋಕಾರ್ಬನ್ ಪರಿಶೋಧನೆ
July 17, 2025
9:51 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group