ಮಂಗಳೂರು: ಈ ಸುದ್ದಿ ನಮಗೆಲ್ಲರಿಗೂ ಸಂಬಂಧಿಸಿದ್ದು. ಇಂತಹ ಮನಸ್ಸುಗಳು ಹೆಚ್ಚಾಗಬೇಕು. ಕಾರಣ ಏಕೆ ಗೊತ್ತಾ ?
ಕಳೆದ ಕೆಲವು ಸಮಯಗಳ ಹಿಂದೆ ಮಂಗಳೂರು ಎಂದಾಕ್ಷಣ ಎಲ್ಲರೂ ನೋಡುವ ದೃಷ್ಠಿ ಬೇರೆಯೇ ಇತ್ತು. ಉದ್ದಿಮೆಗಳೂ ದೂರ ಹೋಗುತ್ತಿದ್ದವು. ಕಾರಣ ” ಮಂಗಳೂರು ಕೋಮು ಸಂಘರ್ಷದ ಊರು” ಅಂತ ಬೊಬ್ಬೆ ಹೊಡೆಯುತ್ತಿದ್ದರು.
ಆದರೆ ಇಲ್ಲಿಯ ಮನಸ್ಸುಗಳು ಹಾಗಿಲ್ಲ. ಕೆಲವೇ ಕೆಲವು ಮಂದಿಯ ಮಾತುಗಳು ರಾಜ್ಯವನ್ನು, ಜಿಲ್ಲೆಯನ್ನು ಪ್ರತಿನಿಧಿಸುತ್ತದೆ. ಆದರೆ ವಾಸ್ತವ ಸ್ಥಿತಿ ಹಾಗಿಲ್ಲ. ಅದಕ್ಕೊಂದು ಉದಾಹರಣೆ ಬಂಟ್ವಾಳ ತಾಲೂಕಿನ ಮುಡಿಪು ಸಮೀಪದ ಸಂಬಾರ ತೋಟ ಎಂಬಲ್ಲಿ ನಡೆದ ಹಿಂದೂ ಯುವಕರ ಮದುವೆಯ ಕಾರ್ಯಕ್ರಮ. ಈ ಮದುವೆಯಲ್ಲಿ ಹಿಂದೂ ಯುವಕ ತನ್ನ ಮದುವೆಯ ಔತಣಕೂಟದ ಸಲುವಾಗಿ, ಮಸೀದಿಯಲ್ಲಿ ಮುಸ್ಲಿಮರಿಗೆ ಇಫ್ತಾರ್ ಕೂಟವನ್ನು ಏರ್ಪಡಿಸುವ ಮೂಲಕ ಸೌಹಾರ್ದ ಮೆರೆದಿದ್ದಾರೆ. ಆ ಯುವಕನ ಹೆಸರು ಶೈಲೇಶ್.
ಶೈಲೇಶ್ ಇರಾ ವ್ಯಾಪ್ತಿಯಲ್ಲಿ ನೆಲೆಸಿ,, ತನ್ನ ಉದ್ಯೋಗ ವೃತ್ತಿಯನ್ನು ಮುಡಿಪು ಪರಿಸರದ ಸಂಬಾರ ತೋಟದಲ್ಲಿ “ಅಮ್ಮ ಎಂಟರ್ಪ್ರೈಸಸ್ “ಎಂಬ ಎಲೆಕ್ಟ್ರಾನಿಕ್ಸ್ ಸಾಮಗ್ರಿಗಳನ್ನು ಮಾರಾಟ ಮಾಡುವ ತನ್ನದೇ ಆದ ಸ್ವಂತ ಕೇಂದ್ರದಲ್ಲಿ ಉದ್ಯೋಗವನ್ನು ಮಾಡುತ್ತಿದ್ದಾರೆ. ಸರ್ವಧರ್ಮಿಯರು ಕೇವಲ ವ್ಯಾಪಾರಕ್ಕೆ ಮಾತ್ರ ಸೀಮಿತ ಅಲ್ಲ, ನನ್ನ ಜೀವನದ ಎಲ್ಲ ಕಷ್ಟ ಸುಖಗಳಿಗೂ ಸೀಮಿತ ಎನ್ನುವ ನಿಟ್ಟಿನಲ್ಲಿ, ಶೈಲೇಶ್ ಅವರು ಮದುವೆಯ ಕಾರ್ಯಕ್ರಮದ ಪ್ರಯುಕ್ತ ಸುತ್ತಮುತ್ತಲಿನ ಎಲ್ಲಾ ಮುಸಲ್ಮಾನ ಬಂಧುಗಳಿಗೆ ರಾತ್ರಿಯ ಔತಣಕೂಟಕ್ಕೆ ಕರೆದರು. ಅದಕ್ಕಾಗಿಯೇ ನೂರಾನಿಯ ಜುಮಾ ಮಸೀದಿ ಸಂಬಾರ ತೋಟದಲ್ಲಿ ಇಫ್ತಾರ್ ಕೂಟ ಏರ್ಪಡಿಸಿ ಸೌಹಾರ್ದತೆ ಮೆರೆದರು. ಇದಿಷ್ಟೇ ಅಲ್ಲ, ಇತ್ತೀಚೆಗೆ ಕನ್ಯಾನ ಬಳಿಯಲ್ಲಿ ನಡೆದ ವಿವಾಹ ಸಮಾರಂಭದಲಲ್ಲಿ ರಾಧಾ ಎಂಬವರ ವಿವಾಹ ಕಾರ್ಯಕ್ರಮದಲ್ಲೂ ಇಫ್ತಾರ್ ಕೂಟ ನಡೆಯಿತು.
ಇಂತಹ ಮನಸ್ಸುಗಳು ಹೆಚ್ಚಾಗುವುದರ ಜೊತೆಗೆ ಹಿಂದೂ-ಮುಸ್ಲಿಂ ಎರಡೂ ಕಡೆಗಳಿಂದಲೂ ಸೌಹಾರ್ದೆತೆಯ ಚಿಂತನೆ ಎಲ್ಲೆಡೆ ನಡೆಯಲಿದೆ. ಮಂಗಳೂರು ಎಂದೆಂದಿಗೂ ಶಾಂತವಾಗಿರಲಿ.

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "ಕರಾವಳಿ ಜಿಲ್ಲೆಯ ಸೌಹಾರ್ದ ಮನಸ್ಸುಗಳು"