ಮೇ.19 : ಕರುಂಬಿತ್ತಿಲ್ ಸಂಗೀತ ಶಿಬಿರ ಸಂಪನ್ನ

Advertisement

ಕರುಂಬಿತ್ತಿಲ್(ನಿಡ್ಳೆ): ಧರ್ಮಸ್ಥಳ ಸಮೀಮಪ ನಿಡ್ಳೆ ಕರುಂಬಿತ್ತಿಲ್‍ನಲ್ಲಿ ನಡೆಯುತ್ತಿರುವ ಕರುಂಬಿತ್ತಿಲ್ ಸಂಗೀತ ಶಿಬಿರ ಮೇ.19 ರಂದು ಸಂಪನ್ನಗೊಳ್ಳಲಿದೆ.

Advertisement

ಒಂದು ವಾರಗಳ ಕಾಲ ನಡೆದ ಶಿಬಿರದಲ್ಲಿ ಸಂಗೀತದ ಸುಧೆ ಹರಿಸಿತು. ಪ್ರಸಿದ್ಧ ವಯಲಿನಿಸ್ಟ್ ವಿದ್ವಾನ್ ವಿಠಲ ರಾಮಮೂರ್ತಿ ಅವರ ಕರುಂಬಿತ್ತಿಲ್‍ನ ಮನೆಯಲ್ಲಿ ಪ್ರತಿ ವರ್ಷ ಮೇ ತಿಂಗಳಲ್ಲಿ ನಡೆಯುವ ಕರುಂಬಿತ್ತಿಲ್ ಸಂಗೀತ ಶಿಬಿರವು ಶುದ್ಧ ಸಂಗೀತದ ಅದ್ಭುತ ಲೋಕವನ್ನು ತೆರೆದಿಡುತ್ತದೆ. ಶಿಬಿರದಲ್ಲಿ ಸಂಗೀತ ಲೋಕದ ದಿಗ್ಗಜರು, ಸಂಗೀತ ವಿದ್ಯಾರ್ಥಿಗಳು, ಸಂಗೀತ ಪ್ರೇಮಿಗಳು ಒಟ್ಟಾಗಿ ಒಂದು ವಾರಗಳ ಕಾಲ ಸಂಗೀತದ ರಸಧಾರೆಯನ್ನು ಹರಿಸುತ್ತಾರೆ. ಕೇರಳ, ಕರ್ನಾಟಕ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಿಂದ ಇನ್ನೂರ ಇಪ್ಪತ್ತಕ್ಕೂ ಅಧಿಕ ಮಂದಿ ಭಾಗವಹಿಸಿದ್ದಾರೆ.

Advertisement
Advertisement

ವಿದ್ವಾನ್ ಟಿ.ವಿ.ಗೋಪಾಲಕೃಷ್ಣನ್, ವಯಲಿನ್ ಮಾಂತ್ರಿಕ ವಿದ್ವಾನ್ ವಿ.ವಿ.ಸುಬ್ರಹ್ಮಣ್ಯಂ, ವಿದ್ವಾನ್ ಉಡುಪಿ ಗೋಪಾಲಕೃಷ್ಣನ್, ಬಾಂಬೆ ಜಯಶ್ರೀ ರಾಂನಾಥ್, ವಿದ್ವಾನ್ ಅಭಿಷೇಕ್ ರಘುರಾಂ, ವಿದ್ವಾನ್ ಶ್ರೀಮುಷ್ಣಂ ವಿ.ರಾಜಾರಾವ್, ತಿರುವಾರೂರ್ ಭಕ್ತವಲ್ಸಲಂ ಹೀಗೆ ಪ್ರಮುಖರು ಈ ಬಾರಿಯ ಶಿಬಿರದಲ್ಲಿ ಭಾಗವಹಿಸಿದ್ದಾರೆ ವಿದುಷಿ ಬಾಂಬೆ ಜಯಶ್ರೀ ರಾಂನಾಥ್ ಅವರ ಸಂಗೀತ ಕಛೇರಿಯೊಂದಿಗೆ ಶಿಬಿರ ಸಮಾಪನಗೊಳ್ಳಲಿದೆ.

Advertisement

ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮುಖ್ಯ ಅತಿಥಿಗಳಾಗಿ ಭಾವಹಿಸಲಿದ್ದಾರೆ ಎಂದು ವಿದ್ವಾನ್ ವಿಠಲ ರಾಮಮೂರ್ತಿ ತಿಳಿಸಿದ್ದಾರೆ.

Advertisement

 

Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಮೇ.19 : ಕರುಂಬಿತ್ತಿಲ್ ಸಂಗೀತ ಶಿಬಿರ ಸಂಪನ್ನ"

Leave a comment

Your email address will not be published.


*