ಮಂಗಳೂರು: ಕರೋನಾ ಭೀತಿ ಎಲ್ಲೆಡೆ ಹರಡಿದೆ. ಯುವಕರು ನಾವಾದರೆ , ವೈರಸ್ ತೊಲಗಿಸಿ ಈ ದೇಶದ ಜನರ ರಕ್ಷಣೆಯ ಜವಾಬ್ದಾರಿ ನಾವು ಹೊರುವವರಾದರೆ ಸ್ವಯಂ ಸೇವಕರಾಗಿ ಕೆಲಸ ಮಾಡಲು ಅವಕಾಶ ಇದೆ. ರೆಡ್ ಕ್ರಾಸ್, ಕರ್ನಾಟಕ ಮತ್ತು ಡಿಐಪಿಆರ್ (ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಸರಕಾರ) ಜೊತೆ ಕೈಜೋಡಿಸುವ ಮೂಲಕ ಕರೋನಾ ವಿರುದ್ಧ ಹೋರಾಡಲು ಅವಕಾಶವಿದೆ. ಇಲ್ಲಿ
ಹೇಗೆ ಸ್ವಯಂಸೇವಕನಾಗುವುದು?:
ಕರೋನಾ ವೈರಸ್ ತಡೆಯಲು ಈಗ ಭಯಗೊಳ್ಳುವುದರ ಬದಲಾಗಿ ಜಾಗೃತಿ ಅನಿವಾರ್ಯವಾಗಿದೆ. ಜನರಿಗೆ ಸೂಕ್ತ ಮಾಹಿತಿ ಹಾಗೂ ಮುಂಜಾಗ್ರತಾ ಕ್ರಮಗಳ ಬಗ್ಗೆ ತಿಳಿಸಬೇಕಿದೆ. ಜನರನ್ನು ಮಾನಸಿಕವಾಗಿ ಗಟ್ಟಿಗೊಳಿಸುವ ಕೆಲಸ ಆಗಬೇಕಿದೆ. ಭಯಗೊಳ್ಳುವುದರಿಂದ ವೈರಸ್ ಹರಡುವುದು ತಡೆಯುವುದು ಸಾದ್ಯವಿಲ್ಲ, ಬದಲಾಗಿ ಜಾಗೃತಗೊಳ್ಳುವುದು ಪರಿಹಾರ. ಹೀಗಾಗಿ ಯಾರೂ ನಾವು ಸುಮ್ಮನಿರಲು ಸಾಧ್ಯವಿಲ್ಲ. ಇದಕ್ಕಾಗಿ ಹೋರಾಟ ಅಗತ್ಯ, ನಾಯಕತ್ವ ಅಗತ್ಯ. ಇಂತಹ ನಾಯಕನಾಗುವವರು ಸರಕಾರದ ಜೊತೆ ಕೈಜೋಡಿಸಬಹುದು. ಇಂತಹ ಸೇವೆ ಸಲ್ಲಿಸಲು ಸ್ವಯಂಸೇವಕರಿಗೆ ವೇದಿಕೆ ನೀಡುವಲ್ಲಿ ಮಾಹಿತಿ ಮತ್ತು ಪ್ರಚಾರ ಇಲಾಖೆ (ಡಿಐಪಿಆರ್) ಭಾರತೀಯ ರೆಡ್‌ಕ್ರಾಸ್, ಮತ್ತು ಕರ್ನಾಟಕ ರಾಜ್ಯ ಕಾರ್ಮಿಕ ಸಂಸ್ಥೆಯೊಂದಿಗೆ ಮುಂದೆ ಬಂದಿದೆ. ಎರಡು ವಿಧದಲ್ಲಿ ಕೆಲಸ ಮಾಡಬಹುದಾಗಿದೆ. ಮನೆಯಲ್ಲಿ ಕುಳಿತು ಜಾಗೃತಿ ಮಾಡಬಹುದು, ಕಣದಲ್ಲಿ ಇಳಿದು ಕೆಲಸ ಮಾಡಬಹುದು. ಇದಕ್ಕಿಂತಲೂ ಮೊದಲು ನೋಂದಣಿ ಮಾಡಿಕೊಳ್ಳಬೇಕು. ಅದರ ಲಿಂಕ್ ಇಲ್ಲಿದೆ..
https://covid19.karnataka.gov.in/
ಮನೆಯಲ್ಲಿಯೇ ಕುಳಿತು ಇಂಟರ್ನೆಟ್ ಮೂಲಕ ಕೆಲಸ ಮಾಡಬಹುದು. ವಿವಿಧ ಗ್ರೂಪು, ಯೂಟ್ಯೂಬ್ ಮೂಲಕ ಕಳಿಸುವ ಲಿಂಕ್ ಗಳ ಮೂಲಕ ಜಾಗೃತಿಗೊಳಿಸುವ ಕೆಲಸ ಮಾಡಬಹುದು.
ಕಣದಲ್ಲಿ ಇಳಿದು ಕೆಲಸ ಮಾಡುವ ಸಂದರ್ಭ ಸ್ಥಳಗಳಿಗೆ ತೆರಳಿ ಪರಿಶೀಲನೆಯೂ ಇರುತ್ತದೆ. ಸುಳ್ಳು ಸುದ್ದಿ ಹರಡುವುದು ತಡೆಯಲಾಗುತ್ತದೆ. ನಾಗರಿಕ ವರದಿಗಾರರಾಗಿ ಅಥವಾ ಸರ್ಕಾರಿ ಅಧಿಕಾರಿಯಾಗಿ ರೀತಿಯಲ್ಲಿ ಕೆಲಸ ಮಾಡಬೇಕಾಗುತ್ತದೆ.