ಕಲ್ಮಡ್ಕ: ಸುಳ್ಯ ತಾಲೂಕಿನ ಕಲ್ಮಡ್ಕದ ಕೈಲಾರು ಈಶ್ವರ ಭಟ್ ಅವರ ತೋಟದಲ್ಲಿ ಒಂದೇ ಸಮನೆ ನಾಯಿ ಬೊಗಳುತ್ತಿತ್ತು. ಹೋಗಿ ನೋಡಿದಾಗ ಅವರ ಸಾಕು ನಾಯಿಯೊಂದನ್ನು ಹೆಬ್ಬಾವು ಹಿಡಿದು ತಿನ್ನುವ ಸ್ಥಿತಿಯಲ್ಲಿತ್ತು, ನಾಯಿ ಬದುಕಿಗಾಗಿ ಹೋರಾಟ ಮಾಡುತ್ತಿತ್ತು. ಇತರ ನಾಯಿಗಳು ಬೊಗಳುತ್ತಾ ರಕ್ಷಣೆಗೆ ಮುಂದಾಗುತ್ತಾ ಸಹಾಯಕ್ಕಾಗಿ ಯಜಮಾನನ್ನು ಕರೆಯುತ್ತಿತ್ತು.
ಏನಿದು ನಾಯಿ ವಿಪರೀತ ಬೊಗಳುತ್ತದೆ ಎಂದು ಈಶ್ವರ ಭಟ್ಟರು ತೋಟಕ್ಕೆ ಹೋದಾಗ ಹೆಬ್ಬಾವು ನಾಯಿಯನ್ನು ಕಾಡುತ್ತಿತ್ತು, ಹೋರಾಟ ನಡೆಯುತ್ತಿತ್ತು. ಈಶ್ವರ ಭಟ್ ಸ್ಥಳಕ್ಕೆ ಬಂದಾಗ ಹೆಬ್ಬಾವು ನಾಯಿಯನ್ನು ಬಿಟ್ಟು ತೆಂಗಿನ ಮರದ ಬುಡದ ಕಸದೆಡೆಯಲ್ಲಿ ಅವಿತು ಕುಳಿತಿತ್ತು. ಇದನ್ನು ಅರಿತ ಈಶ್ವರ ಭಟ್ ಹೆಬ್ಬಾವನ್ನು ಕಾರ್ಮಿಕರೊಂದಿಗೆ ಸೇರಿ ಹಿಡಿದು ಗೋಣಿ ಚೀಲದಲ್ಲಿ ತುಂಬಿ ಕಲ್ಮಡ್ಕದ ಬಂಟಮಲೆ ತಪ್ಪಲಿನ ಕಾಡಿಗೆ ಸುರಕ್ಷಿತವಾಗಿ ಬಿಟ್ಟು ತನ್ನ ಪರಿಸರ ಪ್ರೇಮವನ್ನು ಮತ್ತು ಪ್ರಾಣಿ ದಯೆಯನ್ನು ಮೆರೆದರು. ಈಗ ಎರಡೂ ಪ್ರಾಣಿಗಳು ಸೇಫ್ ಮೋಡ್ ನಲ್ಲಿ…!. ಈಶ್ವರ ಭಟ್ಟದ ಪರಿಸರ ಪ್ರೇಮ, ಹಾವು ಹಿಡಿಯುವ ಧೈರ್ಯ ಮೆಚ್ಚುಗೆಗೆ ಕಾರಣವಾಯಿತು.
(Photo : ಸುರೇಶ್ಚಂದ್ರ ಕಲ್ಮಡ್ಕ)