ಕಲ್ಮಡ್ಕ ಗ್ರಾಮ ಪಂಚಾಯತ್ ವಿಶೇಷ ಗ್ರಾಮ ಸಭೆ

July 3, 2019
10:00 AM

ಕಲ್ಮಡ್ಕ : ಕಲ್ಮಡ್ಕ ಗ್ರಾಮ ಪಂಚಾಯತ್‍ನ 2019-20ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆ  ಪಡ್ಪಿನಂಗಡಿಯ ಶಿವಗೌರಿ ಕಲಾಮಂದಿರದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಧರ್ಮಣ್ಣ ನಾಯ್ಕ ಅಧ್ಯಕ್ಷತೆಯಲ್ಲಿ ನಡೆಯಿತು.

Advertisement
Advertisement
Advertisement
Advertisement

ತೋಟಗಾರಿಕಾ ಇಲಾಖೆಯ ವತಿಯಿಂದ  ಹವಾಮಾನದಿಂದ ಉಂಟಾಗುವ ಬೆಳೆ ನಷ್ಟಕ್ಕೆ ಸರಕಾರದಿಂದ ದೊರೆಯುವ ನಷ್ಟ ಪರಿಹಾರದ ಕುರಿತು ಮಾಹಿತಿ ನೀಡಿದರು. ಕೊಳೆ ರೋಗಕ್ಕೆ ಪರಿಹಾರೋಪಯವನ್ನು ಸಭೆಯಲ್ಲಿ ತಿಳಿಸಲಾಯಿತು. ತೋಟಗಾರಿಕಾ ಇಲಾಖೆ ವತಿಯಿಂದ ದೊರೆಯುವ ಗಿಡಗಳು, ಜೇನು ಕೃಷಿಗೆ, ಬಾಳೆ ಕೃಷಿಗೆ ಸಬ್ಸಿಡಿ ಹಾಗು ಕಾಳು ಮೆಣಸಿನ ಕೃಷಿಗೆ ದೊರೆಯುವ ಸಹಾಯ ಧನದ ಕುರಿತು ಸಮಗ್ರವಾಗಿ ಮಾಹಿತಿಯನ್ನು ಗ್ರಾಮಸ್ಥರಿಗೆ ನೀಡಲಾಯಿತು.

Advertisement

ಹಿಂದುಳಿದ ವರ್ಗಕ್ಕೆ ಸ್ವ ಉದ್ಯೊಗ ಸೃಷ್ಠಿ
ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ  ತಾಲೂಕಿನಲ್ಲಿ ಇಂದು ಪರಿಶಿಷ್ಟ ಜಾತಿ ಹಾಗು ಪರಿಶಿಷ್ಟ ಪಂಗಡ ವರ್ಗದ ವಿದ್ಯಾರ್ಥಿಗಳಿಗೆಂದೆ 11 ಹಾಸ್ಟೆಲ್‍ಗಳಿವೆ. ಒಂದನೆ ತರಗತಿಯಿಂದ ಏಳನೆ ತರಗತಿ ವಿದ್ಯಾರ್ಥಿಗಳಿಗೆ 1000 ಸಾವಿರ ರೂಪಾಯಿ ಹಾಗು 8ನೇ ತರಗತಿಯಿಂದ ದ್ವಿತೀಯ ಪಿಯುಸಿಯವರೆಗಿನ ವಿದ್ಯಾರ್ಥಿಗಳಿಗೆ 2000 ಸಾವಿರ ರೂಪಾಯಿಗಳಂತೆ ವಿದ್ಯಾರ್ಥಿ ವೇತನವನ್ನು ಇಲಾಖೆಯಿಂದ ನೀಡಲಾಗುತ್ತಿದೆ.

ಕೃಷಿ ಹೊಂಡ ನಿರ್ಮಾಣಕ್ಕೆ ಅರ್ಜಿ ನೀಡುವ ಕುರಿತು:
ಕೃಷಿ ಇಲಾಖೆ ಅಧಿಕಾರಿ ಮಾಹಿತಿ ನೀಡಿ ಕೃಷಿ ಭಾಗ್ಯ ಯೋಜನೆಗೆ ಸರಕಾರದಿಂದ 2ಲಕ್ಷ ರೂಪಾಯಿ ತಾಲೂಕಿಗೆ ದೊರೆತಿದೆ. ಸಾರ್ವಜನಿಕರು ಕೃಷಿ ಹೊಂಡ ನಿರ್ಮಾಣಕ್ಕೆ ಪಂಚಾಯತ್ ಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹಿಂದುಳಿದ ವರ್ಗದವರಿಗೆ 1ಲಕ್ಷ ರೂಪಾಯಿ ಹಾಗು ಸಾಮಾನ್ಯರಿಗೆ 50000 ಸಾವಿರ ಸಾಹಯಧನ ದೊರೆಯುವುದಾಗಿ ಅಧಿಕಾರಿ ಹೇಳಿದರು.

Advertisement

ಕಾನೂನು ಪಾಲನೆಯ ಕುರಿತು ಪೊಲೀಸರಿಂದ ಮಾಹಿತಿ:
ಕಾನೂನು ಪರಿಪಾಲನೆಯ ಕುರಿತು ಮಾತನಾಡುತ್ತಾ ಬೆಳ್ಳಾರೆ ಠಾಣೆಯ ಪ್ರೊಬೇಷನರಿ ಎಸ್.ಐ ಆಂಜನೇಯ ರೆಡ್ಡಿಯವರು ಕಾನೂನು ನಿರ್ಧರಿಸಿದಂತೆ ರಿಕ್ಷಗಳಲ್ಲಿ ನಿಗದಿಪಡಿಸಿದಂತೆ 4 ಕ್ಕಿಂತ ಹೆಚ್ಚಿನ ಜನರನ್ನು ಹೇರಿಕೊಂಡು ಚಲಾಯಿಸಿದರೆ ಅಂಥವರ ಚಾಲನಾ ಪರವಾನಿಗೆಯನ್ನು 4 ತಿಂಗಳು ಅಮಾನತಿನಲ್ಲಿಡಲಾಗುವುದು ಎಂದರು. ಅಂತಯೆ ಹಲವಾರು ಬಾರಿ ಮಾನವೀಯ ನೆಲೆಯಲ್ಲಿ ಪೊಲೀಸ್ ಇಲಾಖೆಯವರು ವಾಹನ ಸವಾರರ ಪರಿಸ್ಥಿತಿಯನ್ನು ಅರಿತು ನಡೆದುಕೊಳ್ಳುತ್ತಾರೆ ಎಂದು ಹೇಳಿದರು. ಗ್ರಾಮಸ್ಥ ಜಯರಾಮ್ ಗಾಂಜಾದಂತಹ ಪ್ರಕರಣದಲ್ಲಿ ದಯವಿಟ್ಟು ಮಾನವೀಯತೆ ತೋರದಿರಿ ಎಂದು ವಿನಂತಿಸಿದರು.

ಗ್ರಾಮ ಪಂಚಾಯತ್‍ನಲ್ಲಿಯೇ ಆಧಾರ್ ತಿದ್ದುಪಡಿ ನಡೆಸುವಂತೆ, ಕಲ್ಮಡ್ಕ ಭಾಗದಲ್ಲಿ ಎಟಿಎಂ ಅಳವಡಿಸುವಿಕೆ ಬಗ್ಗೆ, ಪಡ್ಪಿನಂಗಡಿ ಸರ್ಕಾರಿ ಶಾಲೆಗೆ ಆಮಗ್ಲ ಭಾಷೆಗೆ ಶಿಕ್ಷಕರ ನೇಮಕ ಕುರಿತು ಗ್ರಾಮಸ್ಥರು ಆಗ್ರಹಿಸಿದರು.

Advertisement

ವೇದಿಕೆಯಲ್ಲಿ ಕಲ್ಮಡ್ಕ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ವಾರಿಜ ಪಿ.ಎಸ್, ನೋಡೆಲ್ ಅಧಿಕಾರಿ ಶಿಕ್ಷಣ ಇಲಾಖೆಯ ದೈಹಿಕ ಪರಿವೀಕ್ಷಕ ಲಕ್ಷ್ಮೀಶ ರೈ ಉಪಸ್ಥಿತರಿದ್ದರು. ಪಿಡಿಒ ಪ್ರವೀಣ್‍ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಯುವಕರಲ್ಲಿ ಹೆಚ್ಚುತ್ತಿರುವ ಸ್ಥೂಲ ಕಾಯ | ಮನ್ ಕಿ ಬಾತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಕಳವಳ
February 24, 2025
12:14 PM
by: The Rural Mirror ಸುದ್ದಿಜಾಲ
ತುಮಕೂರು ಜಿಲ್ಲೆಯ ಚಿಂಕಾರ ಅರಣ್ಯ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ
February 24, 2025
12:09 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 24-02-2025 | ಫೆ.28 ರಂದು ಅಲ್ಲಲ್ಲಿ ಮಳೆಯ ಸಾಧ್ಯತೆ ಇದೆ |
February 24, 2025
12:04 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 23-02-2025 | ಇಂದು ಕೂಡಾ ಮೋಡ ಹಾಗೂ ಕೆಲವು ಕಡೆ ತುಂತುರು ಮಳೆ |
February 23, 2025
11:41 AM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror