ಸುಳ್ಯ: ಕಲ್ಲಪಳ್ಳಿಯ ಪೆರುಮುಂಡ ಆದರ್ಶ ಸಾಂಸ್ಕೃತಿಕ ಹಾಗೂ ಕ್ರೀಡಾ ಸಂಘದ ನೂತನ ಆದರ್ಶ ಸಭಾಭವನ ಉದ್ಘಾಟನೆಯು ಡಿ. 8ರಂದು ನಡೆಯಿತು.
ಬೆಳಿಗ್ಗೆ ಗಣಪತಿ ಹೋಮದ ಬಳಿಕ ಸಭಾಭವನದ ಉದ್ಘಾಟನೆ ನಡೆಯಿತು. ರೋಟರಿ ಜಿಲ್ಲಾ ಅಸಿಸ್ಟೆಂಟ್ ಗವರ್ನರ್ ಡಾ.ಕೇಶವ ಪಿ.ಕೆ. ಉದ್ಘಾಟನೆ ನೆರವೇರಿಸಿದರು. ಕಲ್ಲಪಳ್ಳಿ ಕೂಟುಪಿಲಾವು ಶ್ರೀ ವಿಷ್ಣುಮೂರ್ತಿ ಸೇವಾ ಸಂಘದ ಅಧ್ಯಕ್ಷ ಎ.ಕೆ. ಸೋಮನಾಥ ಗೌಡ ಆಲುಗುಂಜ, ಅಯ್ಯಪ್ಪ ಸೇವಾ ಸಮಿತಿಯ ಬಿ.ಕೆ. ಜನಾರ್ದನ ಗುಂಡ್ಯ, ಪ್ರಗತಿಪರ ಕೃಷಿಕ ಬಿ.ಕೆ. ನಾರಾಯಣ ಪೆರುಮುಂಡ ಉಪಸ್ಥಿತರಿದ್ದರು.
ಉಪನ್ಯಾಸ, ಸನ್ಮಾನ: ಉದ್ಘಟನಾ ಸಮಾರಂಭದ ಅಂಗವಾಗಿ ಉಪನ್ಯಾಸ ಮತ್ತು ಸನ್ಮಾನ ಕಾರ್ಯಕ್ರಮ ನಡೆಯಿತು. ಪತ್ರಕರ್ತ ದುರ್ಗಾಕುಮಾರ್ ನಾಯರ್‌ಕೆರೆ ಉಪನ್ಯಾಸ ನೀಡಿದರು. ರೋಟರಿ ಜಿಲ್ಲಾ ಅಸಿಸ್ಟೆಂಟ್ ಗವರ್ನರ್ ಡಾ.ಕೇಶವ ಪಿ.ಕೆ., ಪತ್ರಕರ್ತ ಗಂಗಾಧರ ಕಲ್ಲಪಳ್ಳಿ, ಮೋಹನ್‌ಚಂದ್ರ ನಡುಬೆಟ್ಟು ಅವರನ್ನು ಸನ್ಮಾನಿಸಲಾಯಿತು.
ಆದರ್ಶ ಸಾಂಸ್ಕೃತಿಕ ಮತ್ತು ಕ್ರೀಡಾ ಸಂಘದ ಅಧ್ಯಕ್ಷ ರಾಜೇಶ್ ಪಿ.ಎ. ಅಧ್ಯಕ್ಷತೆ ವಹಿಸಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಸಂತೋಷ್‌ಕುಮಾರ್ ರೈ, ಪನತ್ತಡಿ ಗ್ರಾ.ಪಂ. ಸದಸ್ಯೆ ನಳಿನಾಕ್ಷಿ ದಾಮೋದರ ಪನೆಯಾಲ, ಶ್ರೀ.ಕ್ಷೇ.ಧ.ಗ್ರಾ.ಯೋಜನೆಯ ಕಲ್ಲಪಳ್ಳಿ ಒಕ್ಕೂಟದ ಅಧ್ಯಕ್ಷ ರಾಧಾಕೃಷ್ಣ ಪಿ.ಎ ಮುಖ್ಯ ಅತಿಥಿಗಳಾಗಿದ್ದರು. ಸಭಾಭವನ ನಿರ್ಮಾಣ ಸಮಿತಿ ಅಧ್ಯಕ್ಷ ಜಗದೀಶ ಪಿ.ವಿ., ಆದರ್ಶ ಮಹಿಳಾ ಸಂಘದ ಅಧ್ಯಕ್ಷೆ ಸಾವಿತ್ರಿ ದಾಸಪ್ಪ ಪೆರುಮುಂಡ ಉಪಸ್ಥಿತರಿದ್ದರು. ಸಂಘದ ಪದಾಧಿಕಾರಿಗಳಾದ ರವಿಕುಮಾರ್ ಸ್ವಾಗತಿಸಿ, ರಮೇಶ್ ಪೆರುಮುಂಡ ಪ್ರಸ್ತಾವನೆಗೈದು ಕಾರ್ಯಕ್ರಮ ನಿರೂಪಿಸಿದರು. ಜಯಪ್ರಕಾಶ್ ಪೆರುಮುಂಡ ವಂದಿಸಿದರು.
ಉದ್ಘಾಟನೆಯ ಅಂಗವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಸಂಪಾಜೆ ವಲಯ ಹಾಗೂ ಪ್ರಗತಿ ಬಂಧು, ಸ್ವಸಹಾಯ ಸಂಘಗಳ ಕಲ್ಲಪಳ್ಳಿ ಒಕ್ಕೂಟಗಳ ವತಿಯಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ ನೆರವೇರಿತು. ಶ್ರೀ ಮಾತಾ ಅಮೃತಾನಂದಮಯಿ ಸ್ವಸಹಾಯ ಸಂಘ ಮತ್ತು ಆದರ್ಶ ಮತ್ತು ಅಮ್ಮ ಸಂಘದ ಸದಸ್ಯರಿಂದ ಭಜನಾ ಕಾರ್ಯಕ್ರಮ ನೆರವೇರಿತು.