ಕಾಂಗ್ರೆಸ್, ಜೆಡಿಎಸ್ ನವರಿಗೆ ಇಂದು ನಾಮದ ಮಹತ್ವ ತಿಳಿಯಿತು – ಶಾಸಕ ಅಂಗಾರ

Advertisement

ಸುಳ್ಯ: ಬಿಜೆಪಿಯವರು ನಾಮ ಹಾಕುತ್ತಾರೆ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ನಾಮವನ್ನು ಗೇಲಿ ಮಾಡುತ್ತಿದ್ದರು. ಆದರೆ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ನವರಿಗೆ ಜನರೇ ನಾಮ ಹಾಕಿದ್ದಾರೆ. ಅವರಿಗೆ ಇಂದು ನಾಮದ ಮಹತ್ವ ತಿಳಿದಿರಬಹುದು ಎಂದು ಶಾಸಕ ಅಂಗಾರ ಹೇಳಿದ್ದಾರೆ.

Advertisement

ಲೋಕಸಭಾ ಚುನಾವಣೆ ಗೆಲುವಿನ ಹಿನ್ನಲೆಯಲ್ಲಿ ಸುಳ್ಯದಲ್ಲಿ ನಡೆದ ವಿಜಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇದು ಐತಿಹಾಸಿಕ ಗೆಲುವು. ನರೇಂದ್ರ ಮೋದಿಯವರ ದೇಶ ಭಕ್ತಿ, ಜನಪರ ಆಡಳಿತ ಜನರಿಗೆ ಅರ್ಥ ಆಗಿದೆ ಎಂದು ಅವರು ಹೇಳಿದರು.

Advertisement
Advertisement

ನ.ಪಂ.ಗೆಲುವು ಕಾಂಗ್ರೆಸ್ ಕನಸು- ಕಂಜಿಪಿಲಿ

Advertisement

ಜಿ.ಪಂ.ಸದಸ್ಯ ಹರೀಶ್ ಕಂಜಿಪಿಲಿ ಮಾತನಾಡಿ ಲೋಕಸಭಾ ಚುನಾವಣೆಯ ಗೆಲುವು ಸುಳ್ಯ ನಗರ ಪಂಚಾಯತ್ ಚುನಾವಣೆಗೆ ದಿಕ್ಸೂಚಿ. ಈ ಗೆಲುವಿನ ಪ್ರೇರಣೆಯಿಂದ ನ.ಪಂ.ನ 20 ವಾರ್ಡ್ ಗಳಲ್ಲಿಯೂ ಬಿಜೆಪಿ ಗೆಲ್ಲಲಿದೆ ಎಂದರು. ನಗರ ಪಂಚಾಯತ್ ಗೆಲ್ಲುವುದಾಗಿ ಕೆಲವು ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಅದು ಅವರ ಕನಸು ಮಾತ್ರ ಎಂದು ಕುಟುಕಿದರು.

Advertisement

ಎ.ವಿ.ತೀರ್ಥರಾಮ ಮಾತನಾಡಿದರು. ವಿನಯಕುಮಾರ್ ಕಂದಡ್ಕ, ನವೀನ್ ರೈ ಮೇನಾಲ, ಉದಯಕುಮಾರ್ ಆಚಾರ್, ಪಿ.ಕೆ.ಉಮೇಶ್, ದಾಮೋದರ ಮಂಚಿ, ಅಬ್ದುಲ್ ಕುಂಞಿ ನೇಲ್ಯಡ್ಕ, ವಿನುತಾ ಪಾತಿಕಲ್ಲು, ನವೀನ್ ಸಾರಕೆರೆ, ಶಂಕರ ಪೆರಾಜೆ, ಶೀನಪ್ಪ ಬಯಂಬು, ಸಂಜಯಕುಮಾರ್ ಪೈಚಾರ್, ಗಿರೀಶ್ ಕಲ್ಲುಗದ್ದೆ ಉಪಸ್ಥಿತರಿದ್ದರು.

Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಕಾಂಗ್ರೆಸ್, ಜೆಡಿಎಸ್ ನವರಿಗೆ ಇಂದು ನಾಮದ ಮಹತ್ವ ತಿಳಿಯಿತು – ಶಾಸಕ ಅಂಗಾರ"

Leave a comment

Your email address will not be published.


*