‘ಕಾಂಗ್ರೆಸ್ ಸಭೆ ಅಂಗಡಿಯಲ್ಲಿ ನಡೆಯುತ್ತಿದೆ’- ಎಂಬ ಹೇಳಿಕೆ ಭಿನ್ನಮತ ಸ್ಫೋಟಕ್ಕೆ ಕಾರಣವಾಯಿತು…!

Advertisement

ಸುಳ್ಯ: ‘ಸುಳ್ಯದ ಕಾಂಗ್ರೆಸ್ ಕಚೇರಿ ತೆರೆಯುತ್ತಿಲ್ಲ. ಪಕ್ಷದ ಸಭೆಗಳು ಅಂಗಡಿಯಲ್ಲಿ ನಡೆಯುತ್ತಿದೆ’ ಎಂಬ ಕಾಂಗ್ರೆಸ್ ನಾಯಕರೋರ್ವರ ಟೀಕೆ ರಾಜ್ಯ ನಾಯಕರ ಎದುರಿನಲ್ಲೇ ಕಾಂಗ್ರೆಸ್ ಎರಡು ಬಣಗಳ ನಡುವೆ ಭಿನ್ನಮತ ಒಮ್ಮಿಂದೊಮ್ಮೆಲೆ ಸ್ಪೋಟಗೊಳ್ಳಲು ಕಾರಣವಾಯಿತು‌…!

Advertisement

ವಿಧಾನ ಪರಿಷತ್ ಸದಸ್ಯ ಹಾಗು ಕಂದಾಯ ಸಚಿವರ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ ಉಪಸ್ಥಿತಿಯಲ್ಲಿ ಮಂಗಳವಾರ ಸಂಜೆ ಖಾಸಗೀ ಹೋಟೆಲ್ ನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಭಿನ್ನಮತ ಸ್ಪೋಟಗೊಂಡು ಸಭೆ ಅರ್ಧಕ್ಕೆ ಮೊಟಕುಗೊಂಡಿತು.

Advertisement
Advertisement

ಬೂಡು ವಾರ್ಡ್ ನಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದು ಟಿಕೆಟ್ ಸಿಗದ ಹಿನ್ನಲೆಯಲ್ಲಿ ಬಂಡಾಯವಾಗಿ ಪಕ್ಷೇತರನಾಗಿ ಸ್ಪರ್ಧಿಸಿ ಗೆದ್ದ ರಿಯಾಝ್ ಕಟ್ಟೆಕ್ಕಾರ್ ಸಭೆಗೆ ಆಗಮಿಸಿದಾಗ ಒಂದು ಬಣದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ ಇದನ್ನು ಪ್ರಶ್ನಿಸಿದ್ದರು. ಬಳಿಕ ರಿಯಾಝ್ ಅವರನ್ನು ಸಭೆಯಿಂದ ಹೊರಹೋಗುವಂತೆ ನಾಯಕರು ಸೂಚಿಸಿದ್ದರು. ಹೊರ ಕಳಿಸಿದರ ಬಗ್ಗೆ ಕೆಲವರು ಅಸಮಾಧಾನ ವ್ಯಕ್ತಪಡಿಸಿದರು. ಇದು ಒಮ್ಮೆಗೆ ಶಾಂತವಾದರೂ ‘ಕಾಂಗ್ರೆಸ್ ಸಭೆ ಅಂಗಡಿಯಲ್ಲಿ ನಡೆಯುತಿದೆ’ ಎಂಬ ನಾಯಕರ ಹೇಳಿಕೆ ಸಭೆಯಲ್ಲಿ ಮತ್ತೆ ಭಾರೀ ಗದ್ದಲಕ್ಕೆ, ವಾಗ್ವಾದಕ್ಕೆ ಕಾರಣವಾಯಿತು. ಬಂಡಾಯ ಪಕ್ಷೇತರ ಅಭ್ಯರ್ಥಿಯನ್ನು ಪಕ್ಷದವರೇ ಆದ ಕೆಲವು ನಾಯಕರು ಬೆಂಬಲಿಸಿದ್ದಾರೆ. ಇದು ಕಾಂಗ್ರೆಸ್ ನ ಅಧಿಕೃತ ಅಭ್ಯರ್ಥಿಯ ಸೋಲಿಗೆ ಕಾರಣವಯಿತು. ಇಂತಹಾ ನಾಯಕರನ್ನು ಪಕ್ಷದಿಂದ ಹೊರ ಹಾಕಬೇಕು ಎಂದು ಇನ್ನೊಂದು ಬಣ ತಿರುಗೇಟು ನೀಡಿದಾಗ ಸಭೆಯಲ್ಲಿ ನಾಯಕರ ಮಾತಿನ ಸಮರ ಆರಂಭಗೊಂಡಿತು. ಬಳಿಕ ಬಹಳ ಹೊತ್ತು ಮಾತಿನ ಜಟಾಪಟಿಯೇ ನಡೆದುಹೋಯಿತು. ಆರೋಪ ಪ್ರತ್ಯಾರೋಪಗಳು ಮಿತಿ ಮೀರಿ ತೀರಾ ವೈಯುಕ್ತಿಕ ಟೀಕೆಯ ಮಟ್ಟಕ್ಕೆ ಇಳಿದು ನಿಯಂತ್ರಣ ತಪ್ಪುತ್ತದೆ ಎಂದಾಗ ಐವನ್ ಡಿಸೋಜ ಮತ್ತು ಇತರ ನಾಯಕರು ಮಧ್ಯ ಪ್ರವೇಶಿಸಿ ಸಮಾಧಾನ ಪಡಿಸಿ ಸಭೆಯಿಂದ ತೆರಳಿದರು ಎಂದು ತಿಳಿದು ಬಂದಿದೆ. ಕಾಂಗ್ರೆಸ್ ನ ಎರಡು ಬಣಗಳ ಮಧ್ಯೆ ಕಳೆದ ಕೆಲವು ಸಮಯಗಳಿಂದ ಹೊಗೆಯಾಡುತ್ತಿದ್ದ ಭಿನ್ನಮತ ಒಮ್ಮೆಲೇ ಸ್ಪೋಟಗೊಂಡು ಹೊರ ಬಂತು. ನಾಯಕರ ಮಧ್ಯೆ ಇದ್ದ ಅಸಮಾಧಾನ, ಆಕ್ರೋಶ, ಅಸಹಿಷ್ಣುತೆಗಳು ತೆರೆಮರೆಯಿಂದ ಹೊರ ಬಂದು ಸ್ಪೋಟಗೊಂಡಿತು.

ಸತತ ಚುನಾವಣಾ ಸೋಲು, ಅಧ್ಯಕ್ಷರ ರಾಜಿನಾಮೆಯಿಂದ ಕಂಗೆಟ್ಟಿದ್ದ ಸುಳ್ಯ ಕಾಂಗ್ರೆಸ್ ಗೆ ಇದೀಗ ಉಂಟಾದ ಭಿನ್ನಮತ ಸ್ಪೋಟ ಗಾಯದ ಮೇಲೆ ಬರೆ ಎಳೆದಂತಾಗಿದೆ.

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "‘ಕಾಂಗ್ರೆಸ್ ಸಭೆ ಅಂಗಡಿಯಲ್ಲಿ ನಡೆಯುತ್ತಿದೆ’- ಎಂಬ ಹೇಳಿಕೆ ಭಿನ್ನಮತ ಸ್ಫೋಟಕ್ಕೆ ಕಾರಣವಾಯಿತು…!"

Leave a comment

Your email address will not be published.


*