ಸುಳ್ಯ: ಅಂಬೇಡ್ಕರ್ ಸೇವಾ ಸಮಿತಿ ವತಿಯಿಂದ ಅಜ್ಜಾವರ ಗ್ರಾಮದ ಕಾಂತಮಂಗಲ ಶಾಲೆ ಮತ್ತು ಅಂಗನವಾಡಿ ಸಮೀಪ ಇರುವ ಸಾರ್ವಜನಿಕ ಬಾವಿಯ ಅಕ್ಕಪಕ್ಕದಲ್ಲಿ ಶೌಚಾಲಯಗುಂಡಿ,ಕೊಳಚೆ ನೀರಿನ ಇಂಗುಗುಂಡಿಯಿದ್ದು ಇದರ ಪರಿಣಾಮವಾಗಿ ಬಾವಿ ನೀರು ಹಾಳಾಗಿ ದುರ್ವಾಸನೆ ಮತ್ತು ನೀರಿನ ಬಣ್ಣ ಬದಲಾಗಿ ಸಾರ್ವಜನಿಕರಿಗೆ ಅದರ ಉಪಯೋಗಕ್ಕೆ ಬಾರದಂತಾಗಿದ್ದು ,ನೀರಿನ ಸಮಸ್ಯೆ ಎದುರಿಸುತ್ತಿರುವ ಆ ಭಾಗದ ಜನರಿಗೆ ಮತ್ತೆ ಅದರ ಸದುಪಯೋಗಕ್ಕೆ ಬರುವಂತೆ ಮಾಡಲು ಈ ಬಗ್ಗೆ ಸೂಕ್ತ ಕ್ರಮಕ್ಕಾಗಿ ಸುಳ್ಯ ತಾಹಶೀಲ್ದಾರರಿಗೆ ಮನವಿ ನೀಡಲಾಯಿತು.
ಮನವಿ ಸ್ವೀಕರಿಸಿದ ತಹಶೀಲ್ದಾರರು ತಕ್ಷಣ ಕ್ರಮಕೈಗೊಳ್ಳಲಾಗುವುದೆಂದು ಭರವಸೆ ನೀಡಿದರು.ಈ ಸಂದರ್ಭದಲ್ಲಿ ಸುಳ್ಯ ಸಮಿತಿಯ ತಾಲೂಕು ಅಧ್ಯಕ್ಷರಾದ ಸತೀಶ್ ಬೂಡುಮಕ್ಕಿ,ಜಿಲ್ಲಾಧ್ಯಕ್ಷರಾದ ಚಂದ್ರಶೇಖರ್ ಪಲ್ಲತ್ತಡ್ಕ ,ಕಾಂತಮಂಗಲ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಗೀತಾಕಾಟಿಪಳ್ಳ,ಹಾಗೂ ಸಮಿತಿಯ ಕಾರ್ಯಕರ್ತರಾದ ಕಾಂತಮಂಗಲದ ಸುನೀಲ್ ,ದಯಾನಂದ,ಶಶಿಧರ, ವಸಂತ ಬಸವನಪಾದೆ,ಸುನೀಲ್ ,ದೀಕ್ಷೀತ್,ಉಮೇಶ್,ರಾಜೇಶ್,ಕುಮಾರ ಗಂಧದಗುಡ್ಡೆ ಮೆದಲಾದವರು ಹಾಜರಿದ್ದರು.