ಕಾಡಿಗೆ “ಡಾಮರು” ಸುರಿತಾರಾ…..! ವ್ಯವಸ್ಥೆ ನೋಡಿದರೆ ನಿಮಗೇ ಅಚ್ಚರಿಯಾಗುತ್ತದೆ…….!

ಸುರಿಯಲಾಗಿರುವ ಡಾಮರ್-ಜಲ್ಲಿ ಮಿಕ್ಸ್
Advertisement

ಸುಳ್ಯ: ರಸ್ತೆಗೆ  ಡಾಮರು ಹಾಕುವುದು , ಕಾಡಿಗೆ ಡಾಮರು ಸುರಿಯುವುದು…!.

Advertisement

ಇದೊಂದು ಅಚ್ಚರಿ ಹಾಗೂ ಪ್ರಶ್ನಾರ್ಹ ಸಂಗತಿ. ಆದರೆ ಈ ಬಗ್ಗೆ ಮಾತನಾಡುವವರು, ಪ್ರಶ್ನೆ ಮಾಡುವವರು ಯಾರು ?. ಅಧಿಕಾರಿಗಳು ನೋಡ್ತಾರಾ , ಇಲಾಖೆಗಳು ಬರ್ತಾವಾ ? ಜನಪ್ರತಿನಿಧಿಗಳು ಕೇಳ್ತಾರಾ ? ಜನರು ಮಾತಾಡ್ತಾರಾ ?

Advertisement
Advertisement

ಹೌದು, ಸುಮಾರು ಒಂದು ಪಿಕ್ ಅಪ್ ನಲ್ಲಿ ಹಿಡಿಯಬಹುದಾದಷ್ಟು ಜಲ್ಲಿ ಮಿಶ್ರಣ ಮಾಡಿರುವ ಡಾಮರು ಕಾಡಿನಲ್ಲಿ ಸುರಿಯಲಾಗಿದೆ. ಜನ   ಓಡಾಟ ವಿರಳ ಇರುವ ಪ್ರದೇಶದವಲ್ಲಿ ಈ ಡಾಮರು ಸುರಿಯಲಾಗಿದೆ. ಹಾಗಿದ್ದರೆ ಎಲ್ಲಿ  ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.

 

Advertisement

ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರ ದೈವಸ್ಥಾನದ ಬಳಿಯ ಮೊಗ್ರ ಭಜನಾ ಮಂದಿರದಿಂದ ಕೊಂಚ ದೂರದಲ್ಲಿ  ರಬ್ಬರ್ ತೋಟವೊಂದರ ಬಳಿಯ ಕಿರಾಲ್ ಬೋಗಿ ಮರದ ಪಕ್ಕ ಮಿಕ್ಸ್ ಮಾಡಿರುವ ಡಾಮರು  ಸುರಿಯಲಾಗಿದೆ. ಕಳೆದ ಕೆಲವು ವರ್ಷಗಳ ಹಿಂದೆ ಮೊಗ್ರ -ಏರಣಗುಡ್ಡೆ -ಎಡೋಣಿ ರಸ್ತೆಗೆ ಡಾಮರು ಹಾಕಲಾಗಿತ್ತು. ಇದಕ್ಕೆ ಈ ಬಾರಿ ಅಲ್ಲಲ್ಲಿ ತೇಪೆ ಮಾಡುತ್ತಾ ಬರಲಾಗಿತ್ತು. ಕೊನೆಗೆ ಉಳಿದ ಡಾಮರು ಇಲ್ಲಿ  ಸುರಿಯಲಾಗಿದೆಯೇ ಎಂಬ ಸಂದೇಹ ಇಲ್ಲಿ ಮೂಡಿದೆ.

Advertisement

 

Advertisement

ಇಲ್ಲಿರುವ ಪ್ರಶ್ನೆ ಇದಲ್ಲ. ಇದು ಗುತ್ತಿಗೆದಾರ ಹಣವೇ ಆಗಿರಬಹುದು, ಆದರೆ ಅದು ಸರಕಾರದಿಂದ ಮಂಜೂರಾಗುವ ಹಣ. ಜನರ ತೆರಿಗೆಯ ಹಣ. ಅದನ್ನು ಹೀಗೆ ಎಸೆದು ಹೋಗುವದು ಎಷ್ಟು ಸರಿ. ಮೊಗ್ರ -ಏರಣಗುಡ್ಡೆ -ಎಡೋಣಿ ರಸ್ತೆ ಅಭಿವೃದ್ಧಿಗೆ ಹಲವು ವರ್ಷಗಳಿಂದ ಒತ್ತಾಯ ಕೇಳಿಬರುತ್ತಿದೆ. ಅಲ್ಲಲ್ಲಿ  ಹೊಂಡಗಳು ಇವೆ.  ಒಂದು ಸೇತುವೆಗೆ ಹಲವು ವರ್ಷಗಳಿಂದ ಬೇಡಿಕೆ ಇದೆ.  ಇದೇ ರಸ್ತೆಯಲ್ಲಿ ಈಗಲೂ ಕೆಲವು ಕಡೆ ಹೊಂಡಗಳು ಇವೆ. ಕನಿಷ್ಠ ಇಲ್ಲಿಗಾದರೂ ಈ ಡಾಮರು ಹಾಕಬಹುದಾಗಿತ್ತು ಎಂಬುದು ಜನರ ಒತ್ತಾಯ. ಅದೂ ಅಲ್ಲದೆ ಇದೇ ರಸ್ತೆಯನ್ನು  ಕಾಂಕ್ರೀಟ್ ರಸ್ತೆ ಮೂಲಕ ಅಭಿವೃದ್ಧಿ ಮಾಡಲಾಗಿದೆ. ಅದರ ಆರಂಭಕ್ಕೆ ಡಾಮರು ಹಾಕಬಹುದಾಗಿತ್ತು. ಅವಕಾಶಗಳು ಸಾಕಷ್ಟು ಇತ್ತು. ಅದಿಲ್ಲದೆ ಹೀಗೆ ರಸ್ತೆ ಬದಿಯ ಕಾಡಿಗೆ ಎಸೆದು ಹೋಗುವುದು  ಎಷ್ಟು ಸರಿ ಎಂಬ ಪ್ರಶ್ನೆ ಈಗ ಜನರು ಕೇಳುತ್ತಾರೆ. ಯಾವ ಜನಪ್ರತಿನಿಧಿ ಈ ಬಗ್ಗೆ ಮಾತನಾಡುತ್ತಾರೆ ? ಯಾವ ಅಧಿಕಾರಿ ಇಂತಹವರ ಬಗ್ಗೆ ಕ್ರಮ ಕೈಗೊಳ್ಳುತ್ತಾರೆ ? ಯಾರು ಚೌಕೀದಾರ್ ಆಗುತ್ತಾರೆ ?

Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಕಾಡಿಗೆ “ಡಾಮರು” ಸುರಿತಾರಾ…..! ವ್ಯವಸ್ಥೆ ನೋಡಿದರೆ ನಿಮಗೇ ಅಚ್ಚರಿಯಾಗುತ್ತದೆ…….!"

Leave a comment

Your email address will not be published.


*