ಮಡಿಕೇರಿ :ಸುಂಟಿಕೊಪ್ಪದ ಟಾಟಾ ಕಾಫಿ ತೋಟದಲ್ಲಿದ್ದ ಕಾಡುಕುರಿ ಮರಿಯನ್ನು ಸ್ಥಳೀಯರು ಶ್ವಾನಗಳಿಂದ ರಕ್ಷಿಸಿ ಅರಣ್ಯ ಇಲಾಖೆಗೆ ಹಸ್ತಾಂತರಿಸಿದ್ದಾರೆ. ಕಾಡುಕುರಿ ಮರಿ ಮೇಲೆ ಶ್ವಾನಗಳು ದಾಳಿ ನಡೆಸುತ್ತಿರುವುದನ್ನು ಕಂಡ ತೋಟದ ವ್ಯವಸ್ಥಾಪಕರು, ಸಿಬ್ಬಂದಿ ವರ್ಗ ಹಾಗೂ ಕಾರ್ಮಿಕರು ಶ್ವಾನಗಳ ದಾಳಿಯಿಂದ ಮರಿಯನ್ನು ರಕ್ಷಿಸಿದರು.
Advertisement
ಶ್ವಾನ ದಾಳಿಯ ಸಂದರ್ಭ ಕಾಡುಕುರಿಯ ತಾಯಿ ಸ್ಥಳದಿಂದ ತಪ್ಪಿಸಿಕೊಂಡಿದ್ದು, ಮರಿ ಮಾತ್ರ ಅಸಹಾಯಕವಾಗಿತ್ತು. ಗಾಯಗೊಂಡ ಕಾಡುಕುರಿಗೆ ಸುಂಟಿಕೊಪ್ಪ ಪಶು ವೈದ್ಯಕೀಯ ಕೇಂದ್ರದಲ್ಲಿ ಚಿಕಿತ್ಸೆ ನೀಡಿ ಅರಣ್ಯಾಧಿಕಾರಿಗಳಿಗೆ ಹಸ್ತಾಂತರಿಸಲಾಯಿತು.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement