ಕಾಣಿಯೂರು: ಕಾಲೇಜಿನ ಪಕ್ಕದ ಇಂಗು ಗುಂಡಿಯಲ್ಲಿ ಶಾಲಾ ಬಾಲಕನ ಶವ ಪತ್ತೆ

September 6, 2019
10:23 AM

ಕಾಣಿಯೂರು : ಕಡಬ ತಾಲೂಕಿನ ಕಾಣಿಯೂರು ಗ್ರಾಮದ ಕಾಣಿಯೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಹೈಸ್ಕೂಲು ವಿಭಾಗದ ಹತ್ತನೇ ತರಗತಿಯ ವಿದ್ಯಾರ್ಥಿ ಗೌತಮ್ (15)  ಶವ ಕಾಲೇಜಿನ ಪಕ್ಕದ ದೊಡ್ಡದಾದ ಇಂಗು ಗುಂಡಿಯಲ್ಲಿ ಗುರುವಾರ ರಾತ್ರಿ ಪತ್ತೆಯಾಗಿದೆ.

ಚಾರ್ವಾಕ ಗ್ರಾಮದ ಬೊಮ್ಮೊಳಿಕೆ ನಿವಾಸಿ ಲಕ್ಷ್ಮಣ ಗೌಡರ ಪುತ್ರ ಗೌತಮ್ ನೀರಿಗೆ ಸ್ನಾನಕ್ಕೆ ಇಳಿದು ಈ ದುರ್ಘಟನೆ ನಡೆದಿರಬಹುದೆಂದು ಶಂಕಿಸಲಾಗಿದೆ. ಶಾಲೆಯಲ್ಲಿ ಗುರುವಾರ ಶಿಕ್ಷಕರ ದಿನಾಚರಣೆ ಹಾಗೂ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭ ಕಾರ್ಯಕ್ರಮವಿತ್ತು. ಬೆಳಿಗ್ಗೆಯಿಂದ ಸಂಜೆ 3.30 ರ ತನಕ ಕಾರ್ಯಕ್ರಮ ನಡೆದಿತ್ತು ಈ ಮಧ್ಯೆ ಈತ ಹೊರ ಬಂದು ವಿಶಾಲ ಹಾಗೂ ಆಳವಿರುವ ಇಂಗು ಗುಂಡಿಗೆ ಇಳಿದಿರಬಹುದೆಂದು ಶಂಕಿಸಲಾಗಿದೆ. ಈತ ಸಂಜೆ ಮನೆಗೆ ಬಾರದೆ ಇರುವುದನ್ನು ಗಮನಿಸಿದ ಮನೆಯವರು ಹಾಗೂ ನೆರೆಹೊರೆಯವರು ಹುಡುಕಾಟ ಶುರು ಮಾಡಿಕೊಂಡಿದ್ದಾರೆ.

ನೆರೆಯ ಗಣೇಶ್ ಉದನಡ್ಕ ಹಾಗೂ ಇತರರು ಕಾಲೇಜಿಗೆ ಬಂದು ಸುತ್ತ ಹುಡುಕಾಟ ನಡೆಸಿದ್ದಾರೆ. ಇಂಗು ಗುಂಡಿಯ ಬಳಿ ಬಂದಾಗ ಬಾಲಕನ ಪ್ಯಾಂಟ್, ಶರ್ಟ್ ಚಪ್ಪಲಿ ಕಂಡು ಬಂತು, ಪ್ಯಾಂಟ್ ಜೇಬಿನಲ್ಲಿ ಆತನ ಬಸ್ ಪಾಸ್ ಪತ್ತೆಯಾಯಿತು. ತಕ್ಷಣ ಬೆಳ್ಳಾರೆ ಪೋಲೀಸ್ ಠಾಣೆಗೆ ಮಾಹಿತಿ ನೀಡಿದ ಗ್ರಾಮಸ್ಥರು , ಪೋಲೀಸರ ಆಗಮನದ ಬಳಿಕ ಸ್ಥಳೀಯರೊಬ್ಬರು ಇಂಗು ಗುಂಡಿಗೆ ಇಳಿದು ಜಾಲಾಡಿದಾಗ ಬಾಲಕನ ಶವ ಪತ್ತೆಯಾಗಿದೆ.  ಹೆಚ್ಚಿನ ಮಾಹಿತಿ ಪೋಲೀಸ್ ತನಿಖೆಯಿಂದ ತಿಳಿದು ಬರಬೇಕಾಗಿದೆ. ಬೆಳ್ಳಾರೆ ಪೋಲೀಸರು ತನಿಖೆ ನಡೆಸುತ್ತಿದ್ದಾರೆ.

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಸೈಬರ್ ಅಪರಾಧ ತಡೆಗೆ ಪೊಲೀಸ್ ಇಲಾಖೆಯಿಂದ ನೂತನ ತಂತ್ರಜ್ಞಾನ ಬಳಕೆ
December 9, 2024
7:15 AM
by: The Rural Mirror ಸುದ್ದಿಜಾಲ
ಹೆಚ್ಚುತ್ತಿರುವ ಆನ್‌ಲೈನ್ ವಂಚನೆ ಪ್ರಕರಣಗಳು | ಸಾರ್ವಜನಿಕರ ಜಾಗೃತಿಗಾಗಿ ಅರಿವು ಕಾರ್ಯಕ್ರಮ
November 15, 2024
10:56 PM
by: The Rural Mirror ಸುದ್ದಿಜಾಲ
ನಕಲಿ ದಾಖಲೆ ಕೊಟ್ಟು ಪಡಿತರ ಚೀಟಿ ಮಾಡಿಸಿದರೆ ಜೋಕೆ : ರಾಜ್ಯದಲ್ಲಿ ಬರೋಬ್ಬರಿ 12 ಲಕ್ಷ ರೇಷನ್ ಕಾರ್ಡ್ ರದ್ದು : ಕಾರಣ ಏನು..?
August 2, 2024
2:13 PM
by: The Rural Mirror ಸುದ್ದಿಜಾಲ
ಕೀನ್ಯಾದಲ್ಲಿ ಕಾಗೆಗಳನ್ನು ಕೊಲ್ಲಲು ಆದೇಶ | ಈಗ ಅಮೇರಿಕಾದಲ್ಲಿ ನಾಲ್ಕೂವರೆ ಲಕ್ಷ ಗೂಬೆಗಳನ್ನು ಕೊಲ್ಲಲು ಆದೇಶ..! | ಕಾರಣ ಏನು ಗೊತ್ತಾ..?
July 6, 2024
12:06 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror