ಬಳ್ಪ: ಸಾಮಾನ್ಯವಾಗಿ ಜನಪ್ರತಿನಿಧಿಗಳು ತನ್ನ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡುತ್ತಾರೆ. ನಂತರ ಅನುಷ್ಟಾನದ ಹೊತ್ತಿಗೆ ಸ್ಥಳೀಯರೇ ಮುತುವರ್ಜಿ ವಹಿಸಬೇಕಾಗುತ್ತದೆ. ಒಂದು ವೇಳೆ ಕಾಮಗಾರಿ ಕಳಪೆಯಾದರೇ ಜನರೇ ಹೋರಾಟ ಮಾಡಬೇಕಾಗುತ್ತದೆ. ಆದರೆ ತಾಲೂಕು ಪಂಚಾಯತ್ ಸದಸ್ಯ ಅಶೋಕ್ ನೆಕ್ರಾಜೆ ಅನುದಾನ ಬಿಡುಗಡೆ ಮಾತ್ರವಲ್ಲ ತಾನೇ ಖುದ್ದಾಗಿ ವೀಕ್ಷಿಸಿದರು ಹಾಗೂ ಮರುದಿನ ನೀರು ಹಾಯಿಸುವಲ್ಲೂ ಪಾತ್ರ ವಹಿಸಿದರು.
ಬಳ್ಪ ಸಂಸದರ ಆದರ್ಶ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆಗೊಂಡಿತ್ತು. ಬಳ್ಪದ, ಬಳ್ಪ- ಎಣ್ಣೆಮಜಲು ರಸ್ತೆಯ ಕಾಂಕ್ರೀಟೀಕರಣ ಕಾಮಗಾರಿಯು ಈಗ ನಡೆಯುತ್ತಿದೆ. ಇದೀಗ ವಿಶೇಷ ಕಾಳಜಿಯಿಂದ ಈ ಕಾಮಗಾರಿ ನಡೆಯುತ್ತಿದೆ.

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "ಕಾಮಗಾರಿಗೆ ಅನುದಾನ ಮಾತ್ರವಲ್ಲ ನಿರ್ವಹಣೆಯತ್ತಲೂ ಗಮನಹರಿಸಿದ ತಾಪಂ ಸದಸ್ಯ"