ಮಂಗಳೂರು: ಸುಳ್ಯ ತಾಲೂಕಿನ ಪಂಜದಲ್ಲಿರುವ ಡಾ.ದೇವಿಪ್ರಸಾದ್ ಕಾನತ್ತೂರು ಅವರ ಪುತ್ರ ಪುನೀತ್ ಕಾನತ್ತೂರು ಅವರ ಮಾಲಕತ್ವದ ಕಾರ್ ಕಾರ್ಡಿಯಾಕ್ ಕೇರ್ ಮಂಗಳೂರಿನ ವಿಮಾನ ನಿಲ್ದಾಣ ರಸ್ತೆಯ ಮೇರಿಹಿಲ್ ಮಹಾಲಸಾ ವೈಭವ್ ನಲ್ಲಿ ಇತ್ತೀಚೆಗೆ ಶುಭಾರಂಭಗೊಂಡಿತು.
ಕಾರಿನ ಡೀ ಕಾರ್ಬನಿಂಗ್ ಸಹಿತ ಎಂಜಿನ್ ಆರೋಗ್ಯ ಕಾಪಾಡುವ, ಹೊಗೆ ಉಗುಳುವುದು ತಡೆಯುವುದು ಸೇರಿದಂತೆ ವಿವಿಧ ಸೌಲಭ್ಯಗಳು ಇಲ್ಲಿ ಲಭ್ಯವಿದೆ. 600 ಸಿಸಿಯಿಂದ 6000 ಸಿಸಿವರೆಗಿನ ವಾಹನಗಳ ಎಂಜಿನ್ ಡೀ ಕಾರ್ಬನಿಂಗ್ ಜಪಾನ್ ತಂತ್ರಜ್ಞಾನ್ ಮೂಲಕ ಶುಭ್ರಗೊಳಿಸಲಾಗುತ್ತದೆ ಎಂದು ಪುನೀತ್ ಕಾನತ್ತೂರು ತಿಳಿಸಿದ್ದಾರೆ.
ಕಾರ್ ಕಾರ್ಡಿಯಾಕ್ ಕೇರ್ ಅನ್ನು ಡಾ.ದೇವಿಪ್ರಸಾದ್ ಕಾನತ್ತೂರು ಉದ್ಘಾಟಿಸಿದರು.ಈ ಸಂದರ್ಭ ಕಾನತ್ತೂರು ನಾಲ್ವರ್ ದೈವಸ್ಥಾನದ ಆಡಳಿತ ಮೊಕ್ತೇಸರ ಕೆ.ಪಿ ಮಾಲಿಂಗು ನಾಯರ್ , ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಮಹೇಶ್ ಕುಮಾರ್ ಕರಿಕಳ, ಕಾರ್ ಡೆಕೋರ್ ಮಾಲಕ ಮುಖೇಶ್ ಹೆಗ್ಡೆ, ತಿರುವಂತನಪುರ ಕಾರ್ ಕಾರ್ಡಿಯಾಕ್ ಕೇರ್ ನ ಪ್ರಭಾಕರನ್ ಗೋಪಿನಾಥ್ ರಾಜ್ಯ ಸರಕಾರಿ ನೌಕರರ ಸಂಘದ ಕಾರ್ಯದರ್ಶಿ ಡಾ.ಜಯಕೀರ್ತಿ ಜೈನ್ ಅತಿಥಿಗಳಾಗಿ ಭಾಗವಹಿಸಿದರು.