ಕುಕ್ಕೆ ಭಕ್ತರೇ, ಕುಕ್ಕೆಯನ್ನು ಸ್ವಲ್ಪ ಕ್ಲೀನ್ ಇರಿಸಿಕೊಳ್ಳಿ…. ಪ್ಲೀಸ್…

Advertisement

ಸುಬ್ರಹ್ಮಣ್ಯ: ಮೊನ್ನೆ ಮೊನ್ನೆ ಯುವಬ್ರಿಗೆಡ್ ವತಿಯಿಂದ ಕುಕ್ಕೆ ಸುಬ್ರಹ್ಮಣ್ಯದ ಪುಣ್ಯ ನದಿ ಕುಮಾರಧಾರಾ ಸ್ವಚ್ಛತಾ ಕಾರ್ಯ ನಡೆಯಿತು. ಸುಮಾರು 10 ಟನ್ ತ್ಯಾಜ್ಯ ನದಿಯಿಂದ ಹಾಗೂ ಆಸುಪಾಸಿನಿಂದ ತೆಗೆಯಲಾಯಿತು. ಆದರೆ ಈಗ ಮತ್ತದೇ ಸ್ಥಿತಿ ನಿರ್ಮಾಣವಾಗುವ ಮುನ್ನ ಎಚ್ಚೆತ್ತುಕೊಳ್ಳಬೇಕು. ಕುಕ್ಕೆ ಭಕ್ತರೇ ಪ್ಲೀಸ್, ನದಿಯನ್ನು ಸ್ವಚ್ಛವಾಗಿರಿಸಿ, ಪುಣ್ಯ ಕ್ಷೇತ್ರದಲ್ಲಿ ತ್ಯಾಜ್ಯ ಎಲ್ಲೆಂದರಲ್ಲಿ ಎಸೆಯಬೇಡಿ. ಇದು ನಮ್ಮ ರಿಕ್ವೆಸ್ಟ್….

Advertisement

Advertisement
Advertisement

ಕಳೆದ ವಾರ ಯುವಬ್ರಿಗೆಡ್ನ ಸುಮಾರು 300 ಯುವಕರು ಸುಬ್ರಹ್ಮಣ್ಯದ ಪವಿತ್ರ ನದಿಗಳಿಂದ ಸುಮಾರು 8-10 ಟನ್ ನಷ್ಟು ಬಟ್ಟೆ, ಬಾಟಲಿ ಹಾಗೂ ಪ್ಲಾಸ್ಟಿಕ್ ಗಳನ್ನು ತೆಗೆದು ಪುನರುಜ್ಜೀವ ನೀಡಿದ್ದರು. ಆದರೆ ಇಲ್ಲಿಗೆ ಬರುವ ಕೆಲವು ಬೇಜವಾಬ್ದಾರಿ ಪ್ರವಾಸಿಗರು ತಮ್ಮ ಹಳೇ ಚಾಳಿಯನ್ನು ಮುಂದುವರಿಸಿದ್ದಾರೆ. ತ್ಯಾಜ್ಯವನ್ನು ರಸ್ತೆ ಬದಿ ಮಾತ್ರವಲ್ಲ ಎಲ್ಲೆಂದರಲ್ಲಿ ಎಸೆಯುತ್ತಾರೆ. ಇದರ ಬಗ್ಗೆ ನಿಗಾ ಬೇಕಿದೆ.

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಆಡಳಿತ, ಸ್ಥಳಿಯ ಪಂಚಾಯತ್ ಸ್ವಚ್ಛತೆಗೆ ಆದ್ಯತೆ ನೀಡಿದರೂ ಭಕ್ತಾದಿಗಳಲ್ಲಿ ಜಾಗೃತಿ ಮೂಡಬೇಕು, ಸ್ಥಳೀಯ ವರ್ತಕರು ಎಚ್ಚರಿಸಬೇಕು. ಹೀಗಾಗಿ ಸ್ವಚ್ಛ ಕುಮಾರಧಾರಾ, ಸ್ವಚ್ಘ ಕುಕ್ಕೆ ಸುಬ್ರಹ್ಮಣ್ಯ ಕಾಣಲು ಸಾಧ್ಯವಿದೆ.

Advertisement

ನಾಗಾರಾಧನೆಗೆ ಜಗತ್ ಪ್ರಸಿದ್ಧವಾದ ಪುಣ್ಯ ಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರು., ಸುತ್ತಮುತ್ತಲಿನ ಪರಿಸರಕ್ಕೆ ಮತ್ತು ನದಿಗಳಿಗೆ ಕಸ ಎಸೆಯುವವರಿಗೆ ತಕ್ಕ ಪಾಠ ಕಲಿಸಲಿ ಎಂದು ಪ್ರಾರ್ಥನೆ ಮಾಡಿಕೊಳ್ಳುತ್ತೇವೆ ಎಂದು “ನಮ್ಮ ಸುಬ್ರಹ್ಮಣ್ಯ” ದ ತಂಡ ಆಗಾಗ ಪ್ರಾರ್ಥನೆ ಮಾಡುತ್ತದೆ.

Advertisement

 

ಯುವಬ್ರಿಗೇಡ್ , ನಮ್ಮಸುಬ್ರಹ್ಮಣ್ಯ, ಕುಕ್ಕೆಸುಬ್ರಹ್ಮಣ್ಯ ದೇವಸ್ಥಾನ, ಪಂಚಾಯತ್ ಸೇರಿದಂತೆ ವಿವಿಧ ಸಂಘಟನೆಗಳು ಸ್ವಚ್ಛತೆಗೆ ನಿರಂತರ ಕೆಲಸ ಮಾಡುತ್ತಿದೆ. ಇದನ್ನು ಗಮನಿಸಿ ದಯವಿಟ್ಟು  ಸ್ವಚ್ಛತೆಗೆ ಎಲ್ಲಾ ಭಕ್ತರು, ಎಲ್ಲ ಸಾರ್ವಜನಿಕರು  ಕೈಜೋಡಿಸಿ ಎಂಬುದು “ಸುಳ್ಯನ್ಯೂಸ್.ಕಾಂ” ಆಶಯವೂ ಆಗಿದೆ.

Advertisement

 

Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಕುಕ್ಕೆ ಭಕ್ತರೇ, ಕುಕ್ಕೆಯನ್ನು ಸ್ವಲ್ಪ ಕ್ಲೀನ್ ಇರಿಸಿಕೊಳ್ಳಿ…. ಪ್ಲೀಸ್…"

Leave a comment

Your email address will not be published.


*