ಸುಬ್ರಹ್ಮಣ್ಯ : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಒಳಾಂಗಣದಲ್ಲಿ ದೇಗುಲದ ಕಾಣಿಕೆ ಹುಂಡಿಯಿಂದ ಕಳ್ಳತನ ಮಾಡುತಿದ್ದ ತುಮಕೂರು ಮೂಲದ ತಿಪಟೂರು ಅಶ್ವಿನ್ (20) ಎಂಬಾತ ಶುಕ್ರವಾರ ಸಿಕ್ಕಿಬಿದ್ದಿದ್ದಾನೆ.
ಗುರುವಾರ ರಾತ್ರಿ ದೇಗುಲದ ಒಳಾಂಗಣದಲ್ಲಿ ಅನುಮಾಸ್ಪದವಾಗಿ ಓಡಾಡುತ್ತಿದ್ದ ಅಶ್ವಿನ್ ಬಗ್ಗೆ ದೇಗುಲದ ಸೆಕ್ಯೂರಿಟಿಯಲ್ಲಿದ್ದವರ ಗಮನಕ್ಕೆ ಬಂದಿದೆ. ನಂತರ ಗಮನಿಸಿದಾಗ ಕುಕ್ಕೆಲಿಂಗ ಗುಡಿಯ ಎದುರಿನ ಹುಂಡಿಗೆ ಭಕ್ತರು ಹಾಕಿದ ಕಾಣಿಕೆ ಹುಂಡಿಯ ಮೇಲ್ಭಾಗದಿಂದ ಹಣ ತೆಗೆದು ಕಿಸೆಯಲ್ಲಿ ತುಂಬಿಸಿಕೊಳ್ಳುತಿದ್ದ. ಇದೇ ರೀತಿ ಎಲ್ಲ ಕಾಣಿಕೆ ಹುಂಡಿಗಳಿಂದ ಕಳವು ಮಾಡುತ್ತಿರುವುದು ಬಳಿಕ ಸಿಸಿಟಿವಿ ದೃಶ್ಯ ಪರಿಶೀಲಿಸಿದಾಗ ಗೊತ್ತಾಗಿದೆ.
ದೇಗುಲದ ಕಾರ್ಯನಿರ್ವಾಹಣಾಧಿಕಾರಿ ಎಂ.ಎಚ್ ರವೀಂದ್ರ ಅವರು ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಿಸಿದ್ದಾರೆ. ವಿಚಾರಣೆ ವೇಳೆ ಆತ ಒಪ್ಪಿಕೊಂಡಿದ್ದು ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು. ಈಗ ನ್ಯಾಯಾಂಗ ಅಶ್ವಿನ್ ಬಂಧನದಲ್ಲಿದ್ದಾನೆ.

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "ಕುಕ್ಕೆ ಸುಬ್ಬಪ್ಪನ ಕಾಣಿಕೆ ಹುಂಡಿಗೆ ಕೈ ಹಾಕಿ ಸಿಕ್ಕಿ ಬಿದ್ದ ಭೂಪ..!"