ಕುಕ್ಕೆ ಸುಬ್ರಹ್ಮಣ್ಯದ ದೇವಸ್ಥಾನದ ಆದಾಯ 92.09. ಕೋಟಿ ರೂ

Advertisement
Advertisement
Advertisement

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಈ ಸಾಲಿನ ವಾರ್ಷಿಕ ಆದಾಯ 92.09  ಕೋಟಿ  ರೂ ಆಗಿದೆ. ಕಳೆದ ವರ್ಷಕ್ಕಿಂತ ಸುಮಾರು 3.8 ಕೋಟಿ ರೂಪಾಯಿ ಕಡಿಮೆ ಇದೆ.

Advertisement

ಕಳೆದ ಆರ್ಥಿಕ ವರ್ಷ 2017-18ನೇ ಸಾಲಿನಲ್ಲಿ ದೇಗುಲವು 95.92 ಕೋಟಿ ರೂ ಸೇವಾ ರೂಪದ ಹಣ ಬಂದಿತ್ತು. ದೇಗುಲಕ್ಕೆ ಹರಕೆ ಸೇವೆ, ಕಾಣಿಕೆ ಡಬ್ಬಿ, ಛತ್ರಗಳ ಬಾಡಿಗೆ ಮತ್ತು ಕಟ್ಟಡಗಳ ಬಾಡಿಗೆ ಮತ್ತು ಕೃಷಿ ತೋಟದಿಂದ ಆದಾಯ ಬರುತ್ತದೆ. ಸರ್ಪಸಂಸ್ಕಾರ ಹರಕೆ, ಬ್ರಹ್ಮರಥ ಸೇವೆ, ಆಶ್ಲೇಷ ಬಲಿ ಸೇವೆಗಳ ಜತೆಗೆ ತುಲಾಭಾರ, ಶೇಷಸೇವೆ, ಪಂಚಾಮೃತ, ಮಹಾಭಿಷೇಕ ಇತ್ಯಾದಿ ಸೇವೆಗಳಲ್ಲಿನ ಏರಿಕೆ ಇತ್ತು.

Advertisement

ಕ್ಷೇತ್ರದಲ್ಲಿ ಸಮಗ್ರ ಅಭಿವೃದ್ಧಿಗೆ 180 ಕೋಟಿ ರೂ ವೆಚ್ಚದ ಕಾಮಗಾರಿ ಪ್ರಗತಿ ಹಂತದಲ್ಲಿದೆ. ಕ್ಷೇತ್ರದ ರಸ್ತೆ ಅಭಿವೃದ್ಧಿಗೆ 68 ಕೋಟಿ ರೂ ಹಣವನ್ನು ಲೊಕೋಪಯೋಗಿ ಇಲಾಖೆಯಲ್ಲಿ ಠೇವಣಿ ಇರಿಸಲಾಗಿದೆ. ಇದು ಸೇರಿದಂತೆ ಭಕ್ತರ ಅನುಕೂಲತೆಗಾಗಿ 73 ಕೋಟಿ ರೂ ಅನ್ನು ಆಡಳಿತ ಮಂಡಳಿ ಠೇವಣಿಯಾಗಿ ಹೊಂದಿದೆ.

ಹಿಂದಿನ ಆರ್ಥಿಕ ವರ್ಷಗಳ ಪೈಕಿ 2006-07ರಲ್ಲಿ ದೇಗುಲದ ಆದಾಯ 19.76 ಕೋಟಿ ರೂ. 2007-08ರಲ್ಲಿ 24.44 ಕೋಟಿ ರೂ, 2008-09ರಲ್ಲಿ 31 ಕೋಟಿ ರೂ, 2009-10ರಲ್ಲಿ 38.51 ಕೋಟಿ ರೂ, 2011-12ರಲ್ಲಿ 56.24 ಕೋಟಿ ರೂ. 2012-13ರಲ್ಲಿ 66.76 ಕೋಟಿ ರೂ. 2013-14ರಲ್ಲಿ 68 ಕೋಟಿ ರೂ 2014-15ರಲ್ಲಿ 77.60 ಕೋಟಿ ರೂ 2015-16ರಲ್ಲಿ 88.83 ಕೋಟಿ ರೂ. 2016-17ರಲ್ಲಿ 89.65 ಕೋಟಿ ರೂ 2017-18ರಲ್ಲಿ 94.92 ಕೋ ರೂ ಆದಾಯ ಗಳಿಸಿತ್ತು. 2000ರ ವೇಳೆ ದೇಗುಲದ ಆದಾಯವೂ 8 ಕೋಟಿ ರೂ. ಗಳಿಷ್ಟಿತ್ತು.

Advertisement
Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಕುಕ್ಕೆ ಸುಬ್ರಹ್ಮಣ್ಯದ ದೇವಸ್ಥಾನದ ಆದಾಯ 92.09. ಕೋಟಿ ರೂ"

Leave a comment

Your email address will not be published.


*