ಕುಕ್ಕೆ ಸುಬ್ರಹ್ಮಣ್ಯದ ಸರ್ಪಸಂಸ್ಕಾರ ಸೇವೆ : ಚರ್ಚೆಗೆ ಕಾರಣವಾದ ವಿಹಿಂಪ ನಡೆ

Advertisement

ಸುಬ್ರಹ್ಮಣ್ಯ: ಕಳೆದ ಕೆಲವು ವರ್ಷಗಳಿಂದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯುತ್ತಿದ್ದ ಸರ್ಪ ಸಂಸ್ಕಾರ ಸೇವೆಯ ವಿವಾದವು ಈಗ ಮತ್ತೆ ಚರ್ಚೆಯಾಗುತ್ತಿದ್ದಂತೆಯೇ ವಿಶ್ವ ಹಿಂದೂ ಪರಿಷದ್ ನೀಡಿರುವ ಹೇಳಿಕೆಯೇ ಈಗ ಚರ್ಚೆಗೆ ಕಾರಣವಾಗಿದೆ. ತಿಳಿಹೇಳಬೇಕಾದ ವಿಶ್ವ ಹಿಂದೂ ಪರಿಷದ್ ವಾಸ್ತವವನ್ನು ಅರಿತು ಸಮಸ್ಯೆ ಬಗೆಹರಿಸಬೇಕು ಎಂಬುದು ಸಾರ್ವಜನಿಕರ ಆಶಯ.

Advertisement

ಕಳೆದ ಕೆಲವು ವರ್ಷಗಳಿಂದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸರ್ಪಸಂಸ್ಕಾರ ಸೇವೆಯ ಬಗ್ಗೆ ಚರ್ಚೆ ಇದೆ. ಸಾವಿರಾರು ವರ್ಷಗಳ ಇತಿಹಾಸ ಇರುವ ನಾಗಾರಾಧನೆಗೇ ಪ್ರಮುಖ ಹೆಸರುವಾಸಿಯಾಗಿರುವ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ. ಕ್ರಿಕೆಟ್ ತಾರೆ ಸಚಿನ್ ತೆಂಡೂಲ್ಕರ್ ಆಗಮಿಸಿ ಪೂಜೆ ಸಲ್ಲಿಸಿದ ಬಳಿಕ ಈ ಸೇವೆ ದೇಶಮಟ್ಟದಲ್ಲಿ ತಿಳಿಯಿತು. ಹೀಗಾಗಿ ಕುಕ್ಕೆ ಸುಬ್ರಹ್ಮಣ್ಯದ ದೇವರೂ ಸುಬ್ರಹ್ಮಣ್ಯನೇ ಆಗಿರುವುದರಿಂದ ಇಂದು ಚರ್ಚೆಗೆ ಪ್ರಮುಖ ಕಾರಣ. ವಿಶ್ವ ಹಿಂದೂ ಪರಿಷದ್ ಕಳೆದ ಅಷ್ಟೂ ವರ್ಷಗಳಿಂದ ಈ ಸೇವೆಯ ಬಗ್ಗೆ ಮಾತನಾಡಿರಲಿಲ್ಲ. ಈ ಹಿಂದೆ ಸಂಘ ಪರಿವಾರದ ಆಡಳಿತ ಇದ್ದ ಸಂದರ್ಭದಲ್ಲೂ ಇಂತಹದ್ದೇ ವಿವಾದಗಳು ನಡೆದಿತ್ತು. ಮೊದಲ ಬಾರಿಗೆ ಕುಮಾರಧಾರಾ ನದಿಯ ಬಳಿ ಸರ್ಪ ಸಂಸ್ಕಾರ ಸೇವೆ ನಡೆಯುತ್ತಿದ್ದಾಗ ಸಂಘ ಪರಿವಾರದ ಆಡಳಿತ ಇದ್ದ ಸಂದರ್ಭದಲ್ಲೇ ಆಡಳಿತವು ಕುಕ್ಕೆ ದೇವಸ್ಥಾನದಲ್ಲಿಯೇ ಸರ್ಪ ಸಂಸ್ಕಾರ ಆಗಬೇಕು , ಇದೊಂದು ಸೇವೆ ಇತರ ಕಡೆಗಳಲ್ಲಿ ಮಾಡಿದರೆ ಸುಬ್ರಹ್ಮಣ್ಯ ದೇವರಿಗೆ ಸಲ್ಲುವುದಿಲ್ಲ, ಇದು ಭಕ್ತರಿಗೆ ತಿಳಿಯುವುದಿಲ್ಲ, ಹೀಗಾಗಿ ಇದು ಧಾರ್ಮಿಕ ಶೋಷಣೆಯಾಗುತ್ತದೆ ಎಂದು ಹೇಳಿತ್ತು. ಹೀಗಾಗಿ ಕುಮಾರಧಾರಾ ನದಿ ಪಕ್ಕದಲ್ಲಿ ಯಾವುದೇ ಪೂಜೆ ಮಾಡಬಾರದು ಎಂದು ಸೂಚನೆಯನ್ನೂ ನೀಡಿತ್ತು. ಅದಾದ ಬಳಿಕ ಪಕ್ಕದ ಮಠದಲ್ಲಿ ಸರ್ಪ ಸಂಸ್ಕಾರ ಸೇವೆ ನಡೆಯುತ್ತಿದ್ದಾಗಲೂ ಅದೇ ಆಡಳಿತವು ಅಸಮಾಧಾನ ವ್ಯಕ್ತಪಡಿಸಿತ್ತು. ಇದೇ ಕಾರಣದಿಂದ ದೇವಸ್ಥಾನ ಹಾಗೂ ವೈಮನಸ್ಸು ಅಂದೇ ಆರಂಭವಾಗಿತ್ತು. ಆದರೆ ಅದನ್ನು ಬಗೆಹರಿಸುವಲ್ಲಿ ಸಂಘಪರಿವಾರ ಹಾಗೂ ವಿಶ್ವ ಹಿಂದೂ ಪರಿಷದ್ ಆಸಕ್ತಿ ವಹಿಸಿರಲಿಲ್ಲ.

Advertisement
Advertisement

ಈಗ ವಿಶ್ವ ಹಿಂದೂ ಪರಿಷದ್ ಇದೊಂದು ಧಾರ್ಮಿಕ ಸ್ವಾತಂತ್ರ್ಯ ಎಂದು ಹೇಳಿದೆ. ಹಾಗಿದ್ದರೆ ಅಂದು ಕುಮಾರಧಾರಾ ನದಿ ಪಕ್ಕದಲ್ಲಿ ನಡೆಸುತ್ತುದ್ದ ಪೂಜೆಯನ್ನು ಸಂಫಪರಿವಾರದ ಆಡಳಿತ ಇದ್ದಾಗ ನಿಲ್ಲಿಸಿದ್ದೇಕೆ ಹಾಗೂ ಸೂಚನೆ ನೀಡಿದ್ದೇಕೆ ಎಂದು ಈಗ ಚರ್ಚೆ ಆರಂಭವಾಗಿದೆ. ಅದೂ ಅಲ್ಲದೆ ಕಳೆದ ಬಾರಿ ಸಂಘಪರಿವಾರದ ಆಡಳಿತ ಇದ್ದ ಸಂದರ್ಭ ವ್ಯವಸ್ಥಾಪನಾ ಸಮಿತಿಯಲ್ಲಿದ್ದ ಸದಸ್ಯರೊಬ್ಬರು ನ್ಯಾಯದ ಪರವಾಗಿ ದೇವಸ್ಥಾನದ ಪರವಾಗಿ ಮಾತನಾಡಿದ್ದರು. ಅವರನ್ನೇ ಸಂಘಟನೆಯ ಜವಾಬ್ದಾರಿಯಿಂದ ಕೈಬಿಟ್ಟಿದೆ.

ಅದೂ ಅಲ್ಲದೆ ವಿಶ್ವಹಿಂದೂ ಪರಿಷದ್ ಸಂಘಪರಿವಾರದ ಅಂಗಸಂಸ್ಥೆ. ಹಿಂದೂಗಳ ನಂಬಿಕೆ, ಶ್ರದ್ಧೆಯ ಮೇಲೆ ಯಾವುದೇ ಧಕ್ಕೆಯಾದರೆ ಹಿಂದೂ ಆರಣೆಗಳಲ್ಲಿ ಲೋಪವಾಗದಂತೆ ಸಮಾಜವನ್ನೂ ಒಂದುಗೂಡಿಸುವ ಪಕ್ಷತೀತ , ಜಾತ್ಯಾತೀತವಾಗಿ ಕಾರ್ಯನಿರ್ವಹಿಸುವ ಸಂಘ ಪರಿವಾರದ ಸಂಸ್ಥೆ. ಆದರೆ ಕಳೆದ ಕೆಲವು ಸಮಯಗಳಿಂದ ಒಂದು ಸಂಸ್ಥೆಯ ಪರವಾಗಿಯೇ ಕೆಲಸ ಮಾಡುತ್ತಿರುವುದು ಮತ್ತಷ್ಟು ಚರ್ಚೆಯ ವಿಷಯವಾಗಿದೆ.

Advertisement

ಇತ್ತೀಚೆಗೆ ಸಂಘಪರಿವಾರ ವಿಶ್ವಹಿಂದೂ ಪರಿಷದ್ ಕೂಡಾ ಕೆಲವೊಂದು ವ್ಯಕ್ತಿಗಳ ಪರವಾಗಿ, ಕೆಲವೊಂದು ಮಠಗಳ ಪರವಾಗಿ ವಹಿಸಿ ಮಾತನಾಡುತ್ತಿರುವುದು ಸಂಘಟನೆಯ ಮೇಲಿನ ವಿಶ್ವಾಸಾರ್ಹತೆಯ ಬಗ್ಗೆಯೂ ಚರ್ಚೆ ನಡೆಯುತ್ತಿದೆ.

ಸರ್ಪಸಂಸ್ಕಾರ ಸೇವೆಯ ವಿಚಾರದಲ್ಲಿ ಎರಡೂ ಸಂಸ್ಥೆಗಳ ಮೇಲಿರುವ ಭಿನ್ನಾಭಿಪ್ರಾಯ ತೊಲಗಿಸಿ ಧಾರ್ಮಿಕ ನಂಬಿಕೆಗೆ ಗೌರವ ತಂದುಕೊಡುವ ಕೆಲಸ ವಿಹಿಂಪ ಮಾಡಬೇಕಿದೆ. ದೇವಸ್ಥಾನ ಹಾಗೂ ಮಠಗಳು ವ್ಯಾಪಾರೀ ಕೇಂದ್ರವಾಗದಂತೆ ವಿಹಿಂಪ ತಿಳಿಹೇಳಬೇಕಿದೆ. ಸರ್ಪಸಂಸ್ಕಾರ ಎಂಬುದು ಒಂದು ಸೇವೆ. ಈ ಸೇವೆ ವ್ಯಾಪಾರೀಕರಣವಾಗದಂತೆ ಏನು ಮಾಡಬಹುದು ಎಂಬುದನ್ನು ವಿಹಿಂಪ ಯೋಚನೆ ಮಾಡಬೇಕಿದೆ. ಇಲ್ಲಿ ಆದಾಯ ಹಾಗೂ ಲಾಭ ನಷ್ಟದ ಬಗ್ಗೆ ಚರ್ಚೆ ನಡೆಯುತ್ತದೆಯಾದರೆ ಅದು ದೇವಸ್ಥಾನ, ನಂಬಿಕೆಯ ತಾಣವಾಗಿ ಉಳಿಯುವುದು ಹೇಗೆ ? ಸರ್ಪಸಂಸ್ಕಾರ ಎಂಬ ಸೇವೆ ಅತೀ ಕಡಿಮೆಯಲ್ಲಿ ಆಗುವಂತೆ ಏನು ಮಾಡಬಹುದು ಎಂಬುದರ ಬಗ್ಗೆ ವಿಹಿಂಪ ಸಲಹೆ ಕೊಡಬೇಕಿದೆ. ಅದೊಂದು ಹೆಚ್ಚು ಶುಲ್ಕ ನೀಡಿ ಮಾಡುವ ಸೇವೆಯಾದರೆ ಅದೊಂದು ಧಾರ್ಮಿಕ ಶೋಷಣೆ ಎಂಬುದಾಗುತ್ತದೆ ಎಂದು ಜನರು ಚರ್ಚೆ ಮಾಡುತ್ತಿದ್ದಾರೆ. ಹೀಗಾಗಿ ಏಕಪಕ್ಷೀಯವಲ್ಲದ ಚರ್ಚೆ ನಡೆಯಬೇಕು. ವಿಶ್ವ ಹಿಂದೂ ಪರಿಷದ್ ನಂತಹ ಸಂಸ್ಥೆ ಈ ಕಾರ್ಯ ಮಾಡಬೇಕು. ಸೇವೆಯನ್ನು ಉಚಿತವಾಗಿ ನೀಡುವಂತೆ ಪ್ರಯತ್ನ ಮಾಡಬೇಕು ಎಂಬುದು ಸಾರ್ವಜನಿಕರ ಆಶಯ.

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಕುಕ್ಕೆ ಸುಬ್ರಹ್ಮಣ್ಯದ ಸರ್ಪಸಂಸ್ಕಾರ ಸೇವೆ : ಚರ್ಚೆಗೆ ಕಾರಣವಾದ ವಿಹಿಂಪ ನಡೆ"

Leave a comment

Your email address will not be published.


*