ಕುಕ್ಕೆ ಸುಬ್ರಹ್ಮಣ್ಯ: ನೂತನ ಬ್ರಹ್ಮರಥದ ಸ್ವಾಗತಕ್ಕಾಗಿ ರಚಿಸಿದ ವಿವಿಧ ಸಮಿತಿಗಳು ನಡೆಸಿದ ಕಾರ್ಯಸೂಚಿ

September 25, 2019
9:48 AM

ಸುಬ್ರಹ್ಮಣ್ಯ:ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಳದ ಆಡಳಿತ ಕಚೇರಿಯ ಸಭಾಂಗಣದಲ್ಲಿ  ನೂತನ ಬ್ರಹ್ಮರಥದ ಸ್ವಾಗತಕ್ಕಾಗಿ ರಚಿಸಿದ ವಿವಿಧ ಸಮಿತಿಗಳು ನಡೆಸಿದ ಕಾರ್ಯಸೂಚಿ ಬಗ್ಗೆ ಸಭೆ ನಡೆಯಿತು.

Advertisement
Advertisement
Advertisement
Advertisement

ಈ ಸಂದರ್ಭ ಮಾತನಾಡಿದ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ರಥದ ಜೊತೆ  ಶ್ರೀ ದೇವಳದ ಇಬ್ಬರು ಪುರೋಹಿತರು ಇರುತ್ತಾರೆ ಇವರು ಭಕ್ತರು ನೀಡಿದ ಆರತಿಯನ್ನು ರಥಕ್ಕೆ ಅರ್ಪಿಸಲಿದ್ದಾರೆ.20 ಜನ ದೇವಳದ ಭದ್ರತಾ ಸಿಬ್ಬಂಧಿಗಳು ರಥದ ಸುತ್ತ ಇರುತ್ತಾರೆ. ರಥವು ಹಾದು ಬರುವ ಹಾದಿಯಲ್ಲಿ ಸಿಗುವ ದೇವಸ್ಥಾನದ ಮುಂಭಾಗದಲ್ಲಿ ರಥವನ್ನು ನಿಲ್ಲಿಸಿ ತೆಂಗಿನಕಾಯಿ ಒಡೆಯಲಾಗುತ್ತದೆ. ಅಲ್ಲದೆ ರಥಕ್ಕೆ ಆರತಿ ಅರ್ಪಣೆ ಮಾಡಿದ ಭಕ್ತರಿಗೆ ಮೂಲಮೃತ್ತಿಕಾ ಪ್ರಸಾದವನ್ನು ವಿತರಿಸಲಾಗುತ್ತದೆ ಎಂದು  ಹೇಳಿದರು. ಬ್ರಹ್ಮರಥವನ್ನು ಶಿಲ್ಪಿಗಳು ವಿವಿಧ ವೈಧಿಕ ವಿದಿವಿಧಾನಗಳ ಮೂಲಕ ಸೆ.29ಕ್ಕೆ ಬಿಟ್ಟು ಕೊಡುತ್ತಾರೆ.ಸೆ.30ರಂದು ಬೆಳಗ್ಗೆ 8.30ಗೆ ರಥವು ಕೋಟೇಶ್ವರದಿಂದ ಹೊರಡುತ್ತದೆ ಎಂದರು.

Advertisement

ನಂತರ ಕೋಟದಲ್ಲಿ ಸಾರ್ವಜನಿಕರಿಂದ ಪೂಜೆ ಮತ್ತು ಕುಣಿತ ಭಜನೆ ನೆರವೇರಲಿದೆ.ಬಳಿಕ ಸಾಲಿಗ್ರಾಮ, ಉಡುಪಿ, ಕಾಪು, ಮುಲ್ಕಿ,ಬಪ್ಪನಾಡು, ಸುರತ್ಕಲ್‍ಗಳಲ್ಲಿ ಪೂಜೆ ಮೂಲಕ ಅಲ್ಲಿನ ಭಕ್ತರು ಬ್ರಹ್ಮರಥವನ್ನು ಸ್ವಾಗತಿಸಲಿದ್ದಾರೆ. ಮಂಗಳೂರಿಗೆ ಆಗಮಿಸಿ ಕದ್ರಿ ಪೋಲಿಸ್ ಠಾಣಿ ಬಳಿ ರಥ ತಂಗಲಿದೆ. ಅ.1ರಂದು ಮಂಗಳೂರಿನಿಂದ ಹೊರಟು ಬಿ.ಸಿ.ರೋಡು, ಕಲ್ಲಡ್ಕ, ಮಾಣಿ, ಉಪ್ಪಿನಂಗಡಿ, ಆಲಂಕಾರು ಮೂಲಕ ಬಲ್ಯಕ್ಕೆ ಆಗಮಿಸಿ ಬಲ್ಯ ದೇವಳದ ಸಮೀಪ ರಥವು ತಂಗಲಿದೆ.ಬಲ್ಯದಿಂದ ಬೆಳಗ್ಗೆ 10ಗಂಟೆಗೆ ಹೊರಟು ಕಡಬಕ್ಕೆ ತಲುಪಲಿದೆ. ನಂತರ ಅಲ್ಲಿಂದ ವಾಹನ ಜಾಥಾದ ಮೂಲಕ ರಥವನ್ನು ಬಿಳಿನೆಲೆ, ಕೈಕಂಬ ಮೂಲಕ ಕರೆತರಲಾಗುತ್ತದೆ.ಕುಲ್ಕುಂದದಿಂದ ಬೃಹತ್ ಮೆರವಣಿಗೆಯೊಂದಿಗೆ ಬ್ರಹ್ಮರಥವು ಕುಕ್ಕೆಸುಬ್ರಹ್ಮಣ್ಯಕ್ಕೆ ಬ್ರಹ್ಮರಥವು ಪುರಪ್ರವೇಶ ಮಾಡಲಿದೆ ಎಂದು ಸಭೆಯಲ್ಲಿ ಶ್ರೀ ದೇವಳದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಪೇರಾಲ್ ಹೇಳಿದರು.

ಕೈಕಂಬದಿಂದ ಸುಬ್ರಹ್ಮಣ್ಯದ ತನಕ ಸುಮಾರು 7 ಕಿ.ಮೀ ದೂರದ ತನಕ ರಸ್ತೆಯ ಇಕ್ಕೆಲಗಳಲ್ಲಿ ತಳಿರು ತೋರಣ, ಕೇಸರಿ ಬಂಟಿಂಗ್ಸ್ ಮತ್ತು ಭಗವಾಧ್ವಜವನ್ನು ಹಾಕಿ ಸಿಂಗರಿಸಲಾಗುವುದು.ಅಲ್ಲದೆ ಅಲ್ಲಲ್ಲಿ ವಿವಿಧ ವಿನ್ಯಾಸಗಳ ಗೋಪುರಗಳನ್ನು ರಸ್ತೆಯ ಬದಿಯಲ್ಲಿ ಅಳವಡಿಸಲಾಗುವುದು.ಕುಲ್ಕುಂದದಿಂದ ಆರಂಭವಾಗುವ ಮೆರವಣಿಗೆಗೆ 10ಕ್ಕೂ ಅಧಿಕ ಸ್ತಬ್ದಚಿತ್ರಗಳು, 40ಜನ ಕಲಾವಿದರಿಂದ ಆಕರ್ಷಕ ಸಿಂಗಾರಿ ಮೇಳ, ಚಿಲಿಪಿಲಿಗೊಂಬೆ, ಹುಲಿವೇಷ ತಂಡ, ವೀರಗಾಸೆ, 20ಕ್ಕೂ ಅಧಿಕ ತಂಡಗಳಿಂದ ಕುಣಿತ ಭಜನೆ, ವೇದಘೋಷ, ವಿಶೇಷ ಕೊಡೆಗಳು ಮೆರುಗು ನೀಡಲಿದೆ.ಎಲ್ಲಾ ಕಲಾವಿದರಿಗೆ ಉಪಹಾರ ವ್ಯವಸ್ಥೆ, ನೀರು, ಮಜ್ಜಿಗೆ ಮತ್ತು ಪಾನಕದ ವ್ಯವಸ್ಥೆಯನ್ನು ಶ್ರೀ ದೇವಳ ಮತ್ತು ಸಂಘ ಸಂಸ್ಥೆಗಳು ಮಾಡಲಿದೆ ಎಂದು ಅಲಂಕಾರ ಸಮಿತಿ ಸಂಚಾಲಕ ರಾಜೇಶ್ ಎನ್.ಎಸ್ ಸಭೆಯಲ್ಲಿ ಹೇಳಿದರು.

Advertisement

ಸಭೆಯಲ್ಲಿ ಬ್ರಹ್ಮರಥದ ಸೇವಾರ್ಥಿಗಳಲ್ಲಿ ಓರ್ವರಾದ ಯುವ ಉದ್ಯಮಿ ಅಜಿತ್ ಶೆಟ್ಟಿ, ಶ್ರೀ ದೇವಳದ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಎಂ.ಎಚ್, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಪೇರಾಲ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಕೃಷ್ಣಮೂರ್ತಿ ಭಟ್, ಬಾಲಕೃಷ್ಣ ಗೌಡ ಬಳ್ಳೇರಿ, ಪ್ರಮುಖರಾದ ಚಂದ್ರಹಾಸ ರೈ, ಪ್ರಮುಖರಾದ ರಮೇಶ್ ಕಲ್ಪುರೆ, ನಾಗರಾಜ್ ಎನ್.ಕೆ, ಅಶೋಕ್ ಕಡಬ, ಮಾಸ್ಟರ್ ಪ್ಲಾನ್ ಮೇಲುಸ್ತುವಾರಿ ಸಮಿತಿ ಸದಸ್ಯ ಶಿವರಾಮ ರೈ, ಸುಧೀರ್ ಕುಮಾರ್ ಶೆಟ್ಟಿ, ದೇವಳದ ಅಭಿಯಂತರ ಉದಯ ಕುಮಾರ್, ಅಧೀಕ್ಷಕ ಬಾಲಸುಬ್ರಹ್ಮಣ್ಯ ಭಟ್, ಶ್ರೀ ದೇವಳದ ಪದ್ಮನಾಭ ಶೆಟ್ಟಿಗಾರ್, ಮೋಹನ್ ಎಂ.ಕೆ, ಸರಸ್ವತಿ, ಅಲಂಕಾರ ಸಮಿತಿ ಸಂಚಾಲಕ ರಾಜೇಶ್ ಎನ್.ಎಸ್, ಸದಸ್ಯ ಪ್ರಶಾಂತ್ ಭಟ್ ಮಾಣಿಲ, ಆಹಾರ ಸಮಿತಿ ಸಂಚಾಲಕ ಎ.ಸುಬ್ರಹ್ಮಣ್ಯ ರಾವ್, ಪ್ರಚಾರ ಸಮಿತಿ ಸಂಚಾಲಕ ಗಿರಿಧರ್ ಸ್ಕಂಧ, ಸದಸ್ಯರಾದ ರತ್ನಾಕರ.ಎಸ್, ಹರಿಪ್ರಸಾದ್ ನಾಯರ್ ಮಲ್ಲಾಜೆ, ಭರತ್ ನೆಕ್ರಾಜೆ, ಚರಣ್ ಕಾನಡ್ಕ ಉಪಸ್ಥಿತರಿದ್ದರು.

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಧರ್ಮಸ್ಥಳದಲ್ಲಿ ಭಕ್ತರ ಗಡಣ | ಭಕ್ತರಿಂದ ಅಲಂಕಾರ ಸೇವೆ
January 1, 2025
9:22 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 30.12.2024 | ಮುಂದಿನ ಕೆಲವು ದಿನಗಳವರೆಗೆ ಮುಂದುವರಿದ ಚಳಿ, ಮೋಡದ ವಾತಾವರಣ
December 30, 2024
4:07 PM
by: ಸಾಯಿಶೇಖರ್ ಕರಿಕಳ
2025 ರಲ್ಲಿ ಗಿಡಗಳನ್ನು ಉಡುಗೊರೆಯಾಗಿ ನೀಡಿ | ಅಭಿಯಾನ ನಡೆಸಲು ಒಡಿಶಾ ಸಚಿವರ ಮನವಿ |
December 30, 2024
7:08 AM
by: The Rural Mirror ಸುದ್ದಿಜಾಲ
30 ವರ್ಷಗಳ ಬಳಿಕ ನೀರಿನ ಸಂಗ್ರಹದಲ್ಲಿ ದಾಖಲೆ ಬರೆದ ಮಂಡ್ಯದ ಕೆಆರ್‌ಎಸ್ ಜಲಾಶಯ
December 30, 2024
6:46 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror