ಕುಸಿಯುವ ಭೀತಿಯಲ್ಲಿದೆ ಬೆಳ್ಳಾರೆ ಅಂಬೇಡ್ಕರ್ ಭವನ

July 8, 2019
10:00 AM

ಬೆಳ್ಳಾರೆ : ಕಾಯಕಲ್ಪಕ್ಕಾಗಿ ಕಾಯುತ್ತಿರುವ ಬೆಳ್ಳಾರೆ ಅಂಬೇಡ್ಕರ್ ಭವನಕ್ಕೆ ಮಾತ್ರ ಇನ್ನೂ ದುರಸ್ಥಿ ಭಾಗ್ಯ ಕೂಡಿ ಬಂದಿಲ್ಲ. ಭವನದ ಮೇಲ್ಛಾವಣಿ ಕುಸಿದು ನಿಂತಿದ್ದು, ಮಳೆಗಾಲದಲ್ಲಿ ಭವನದೊಳಗೆ ಹೊಳೆಯಂತಾಗಿತ್ತಿದೆ. ರೀಪು, ಪಕ್ಕಾಸು, ಕಿಟಕಿ ಬಾಗಿಲುಗಳು ಗೆದ್ದಲು ಹಿಡಿದು ಮುರಿದು ಹೋಗಿದೆ.ಕುಸಿಯುವ ಭೀತಿಯಲ್ಲಿದೆ.

Advertisement
Advertisement
Advertisement

ತಾಲೂಕಿನಲ್ಲಿ ಎರಡನೇ ದೊಡ್ಡ ಪಟ್ಟಣವಾದ ಬೆಳ್ಳಾರೆಯಲ್ಲಿ ಸಾರ್ವಜನಿಕ ಸಮಾರಂಭಗಳಿಗೆ ಇಂದಿಗೂ ಸಮುದಾಯ ಭವನವಿಲ್ಲ. ಹಲವು ವರ್ಷಗಳ ಹಿಂದೆ ಬೆಳ್ಳಾರೆ ಸುಳ್ಯ ರಸ್ತೆಯ ಪೊಲೀಸ್ ಠಾಣೆಯ ಬಳಿ ನಿರ್ಮಾಣಗೊಂಡಿದ ಅಂಬೇಡ್ಕರ್ ಭವನ ಸಾರ್ವಜನಿಕ ಸಭೆ ಸಮಾರಂಭಗಳಿಗೆ ಅನುಕೂಲಕರವಾಗಿತ್ತು.  ಕಳೆದ ಕೆಲವು ವರ್ಷಗಳಿಂದ ಇಲ್ಲಿ ಯಾವುದೇ ಕಾರ್ಯಕ್ರಮಗಳು ನಡೆಯುತ್ತಲೇ ಇಲ್ಲ.  ಮೇಲ್ಛಾವಣಿಯೊಂದನ್ನು ಮಾತ್ರ ಆಗಾಗ ನಡೆಸಲಾಗುತ್ತಿದ್ದರೂ ಈಗ ಮಾತ್ರ ಬೀಳುವ ಸ್ಥಿತಿಯಲ್ಲಿದೆ.

Advertisement

ಗ್ರಾಮ ಪಂಚಾಯತ್ ನಿರ್ವಹಣೆ:
ಅಂಬೇಡ್ಕರ್ ಭವನದ ನಿರ್ವಹಣೆಯನ್ನು ಬೆಳ್ಳಾರೆ ಗ್ರಾಮ ಪಂಚಾಯತ್ ನಿರ್ವಹಣೆ ಮಾಡುತ್ತಿದೆ. ಹಲವು ಸಾರ್ವಜನಿಕ ಸಮಾರಂಭಗಳು ಸಭೆಗಳು ಇಲ್ಲೆ ನಡೆಯುತ್ತಿತ್ತು. ರಾಜೀವ್ ಗಾಂಧಿ ಸೇವಾ ಕೇಂದ್ರವಾದ ಬಳಿಕ ಸಂಘ ಸಂಸ್ತೆಗಳಿಗೆ, ವಿವಿಧ ಸರ್ಕಾರಿ ಇಲಾಖೆಗಳ ಕಾರ್ಯಕ್ರಮಗಳಿಗೆ ಸೇವಾ ಕೇಂದ್ರದಲ್ಲಿ ಕಾರ್ಯಕ್ರಮ ನಡೆಸಲು ಅವಕಾಶ ನೀಡಲಾಗುತ್ತಿತ್ತು.
ಆದರೆ ಅಂಬೇಡ್ಕರ್ ಭವನದಷ್ಟು ಸ್ಥಳಾವಕಾಶವಾಗಲಿ, ಶೌಚಾಲಯವಾಗಲಿ, ಇಲ್ಲ. ಸಾರ್ವಜನಿಕರು ಸಂಘ ಸಂಸ್ಥೆಗಳು ಈ ಕಾರಣಕ್ಕಾಗಿಯೇ ಖಾಸಗಿ ಹಾಲನ್ನು ಅವಲಂಬಿಸಬೇಕಾದ ಅನಿವಾರ್ಯತೆ ಎದುರಾಗಿದೆ.

10 ಲಕ್ಷ ಅನುದಾನ ವ್ಯರ್ಥ
ಅಂಬೇಡ್ಕರ್ ಭವನದ ದುರಸ್ಥಿಗೆ ಸಮಾಜ ಕಲ್ಯಾಣ ಇಲಾಖೆಯಿಂದ 10 ಲಜಕ್ಷ ರೂಪಾಯಿ ಬಿಡುಗಡೆಯಾಗಿತ್ತು. ಆ ಸಂದರ್ಭದಲ್ಲಿ ಕೆಲವರು ದುರಸ್ಥಿಗೆ ಒತ್ತಾಯಿಸಿ ನೂತನ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಒತ್ತಾಯಿಸಿದರು. ಇದರಿಂದ ದುರಸ್ಥಿ ಕಾರ್ಯವೂ ಸ್ಥಗಿತಗೊಂಡಿತು. ನೂತನ ಭವನಕ್ಕೆ ಸಮಾಜ ಕಲ್ಯಾಣ ಇಲಾಖೆಗೆ ಪತ್ರ ಬರೆಯಲಾಗಿತ್ತಾದರೂ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.

Advertisement

ಭವನಕ್ಕೆ ತಹಶೀಲ್ದಾರ್  ಭೇಟಿ
ಬೆಳ್ಳಾರೆಯ ಗ್ರಾಮ ಲೆಕ್ಕಾಧಿಕರಿಗಳ ಕಚೇರಿ ಉದ್ಘಾಟನೆಗೆ  ಬೆಳ್ಳಾರೆಗೆ ಸುಳ್ಯ ತಹಶೀಲ್ದಾರ ಕುಂಞ ಅಹಮ್ಮದ್ ಆಗಮಿಸಿದಾಗ ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆ ಹಾಗು ಬೆಳ್ಳಾರೆಯ ಪಕ್ಷಾತೀತ ಮುಖಂಡರು ಸೇರಿ ನೂತನ ಅಂಬೇಡ್ಕರ್ ಭವನದ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರ ಕುರಿತು ನೆನಪಿಸಿದರು. ತ್ವರಿತವಾಗಿ ಬೆಳ್ಳಾರೆ ಅಂಬೇಡ್ಕರ್ ಭವನ ಸ್ಥಿತಿಗತಿ ವೀಕ್ಷಿಸಿ ನೂತನ ಭವನದ ನಿರ್ಮಾಣಕ್ಕೆ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಅಂಬೇಡ್ಕರ್ ಭವನ ಹಲವು ವರ್ಷಗಳಿಂದ ಶಿಥಿಲಾವಸ್ಥೆಯಲ್ಲಿದ್ದರೂ ದುರಸ್ಥಿ ಕಾರ್ಯ ನಡೆಸಿಲ್ಲ. ಬೆಳ್ಳಾರೆಯಲ್ಲಿ ಬಡ ಕುಟುಂಬಳಿಗೆ ಸಮಾರಂಭ ನಡೆಸಲು ಸಮುದಾಯ ಭವನವಿಲ್ಲದಿರುವುದು ವಿಪರ್ಯಾಸ. ಆದುದರಿಂದ ನೂತನ ಅಂಬೇಡ್ಕರ್ ಭವನವನ್ನು ಶೀಘ್ರವೇ ನಿರ್ಮಿಸಿಕೊಟ್ಟರೆ ಅನೇಕ ಬಡ ಕುಟುಂಬಗಳಿಗೆ ಉಪಕಾರವಾಗುತ್ತದೆ ಎಂದು
 ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ಸುಂದರ ಪಾಟಾಜೆ ಹೇಳುತ್ತಾರೆ.

Advertisement

ಬೆಳ್ಳಾರೆ ಅಂಬೇಡ್ಕರ್ ಭವನದ ಸಂಪೂರ್ಣ ಶಿಥಿಲಾವಸ್ತೆಯಲ್ಲಿರುವುದನ್ನು ಕಣ್ಣಾರೆ ನೋಡಿದ್ದೇನೆ. ಶೀಘ್ರವೇ ಬೆಳ್ಳಾರೆಯಲ್ಲಿ ಅಂಬೇಡ್ಕರ್ ಭವನವನ್ನು ನೂತನವಾಗಿ ನಿರ್ಮಿಸಿಕೊಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸಮಾಜ ಕಲ್ಯಾಣ ಇಲಾಖೆಗೆ ಸೂಚಿಸಿದ್ದೇನೆ – ಕುಂಞ ಅಹಮ್ಮದ್,  ಸುಳ್ಯ ತಾಲೂಕು ತಹಶೀಲ್ದಾರರು

 

Advertisement

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಅಡಿಕೆ ಕ್ಯಾನ್ಸರ್‌ಕಾರಕ | ತಿರುಚಿದ ವರದಿ ಪ್ರಕಟಿಸಿದ WHO | ಕೇಂದ್ರ ಸರ್ಕಾರ ಮಧ್ಯಪ್ರವೇಶಕ್ಕೆ ಕ್ಯಾಂಪ್ಕೊ ಒತ್ತಾಯ |
November 26, 2024
7:05 PM
by: ದ ರೂರಲ್ ಮಿರರ್.ಕಾಂ
ಅಡಿಕೆಯ ಔಷಧೀಯ ಗುಣ | “we made” ಅಡಿಕೆಯ ಲಿಕ್ವಿಡ್‌ ಸೋಪು | ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ |
November 26, 2024
7:11 AM
by: ಮಹೇಶ್ ಪುಚ್ಚಪ್ಪಾಡಿ
ಇಂಡಿಯನ್ ಅಕಾಡೆಮಿ ಆಫ್ ಓರಲ್ ಮೆಡಿಸಿನ್ ಅಂಡ್ ರೇಡಿಯಾಲಜಿಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಡಾ.ಜಯಪ್ರಸಾದ ಆನೆಕಾರ
November 26, 2024
5:53 AM
by: ದ ರೂರಲ್ ಮಿರರ್.ಕಾಂ
ನೀರಿಗಾಗಿ ಏಕಾಂಗಿಯಾಗಿ ಸುರಂಗ ತೋಡಿದ ಕೃಷಿಕ | ಹಸಿರಾದ ಕೃಷಿ |
November 25, 2024
8:44 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror