ಪಂಜ: ಶಿವಾಜಿ ಯುವಕ ಮಂಡಲ ಕೂತ್ಕುಂಜ ಇದರ ವತಿಯಿಂದ ದೇಶ ಕಾಯುವ ಯೋಧರಿಗೆ ಸನ್ಮಾನ ಕಾರ್ಯಕ್ರಮ ಕೂತ್ಕುಂಜ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ನಡೆಯಿತು. ಈ ಸಂದರ್ಭ 17 ಮಂದಿ ಯೋಧರನ್ನು ಸನ್ಮಾನಿಸುವ ಕಾರ್ಯ ನೇರವೇರಿತು.
ಕ್ಯಾ.ಗಣೇಶ್ ಕಾರ್ಣಿಕ್ ಮಾತನಾಡಿ ಗಡಿ ಕಾಯುವ ಸಾವಿರಾರು ಯೋಧರನ್ನು ನೀಡಿದ ಸುಳ್ಯದ ಮಣ್ಣಿಗೆ ತಲೆಬಾಗಿ ನಮಿಸುವೆನೆಂದರು.
ಅಭಿನಂದನಾ ಭಾಷಣ ನೆರವೇರಿಸಿದ ಮ್ಯಾಥ್ಯೂ ಟಿ.ಜಿ. ಮಾತನಾಡಿ ದೇಶದ ಮೂರು ಮಹತ್ವಪೂರ್ಣ ಅಂಗಗಳು ಯೋಧ, ಶಿಕ್ಷಕ, ರೈತ ಇವರು ಸಂತುಷ್ಟರಾಗಿದ್ದರೆ ಆ ದೇಶವೂ ಸುಭಿಕ್ಷೆಯಾಗಿರುತ್ತದೆ ಎಂದರು.
ಈ ಶುಭ ಸಂದರ್ಭದಲ್ಲಿ ಸನ್ಮಾನಿತರಾದ ಕರ್ನಲ್ ಕೆ.ಲಕ್ಮೀನಾರಾಯಣ, ಬಿ.ಕೆ. ಮಾಧವ ಗೌಡ, ಬಿ.ಕೆ.ಕುಸುಮಾಧರ ಗೌಡ, ಚೆನ್ನಪ್ಪ ಗೌಡ ಬಪ್ಪನಮನೆ, ಸೀತಾರಾಮ ಗೌಡ ಚಿದ್ಗಲ್ಲು, ವಾಸುದೇವ ಕಕ್ಯಾನ , ಸುದರ್ಶನ್ ಕಕ್ಯಾನ, ಲಕ್ಷ್ಮ ಣ ಬೇರ್ಯ, ವಿಶ್ವನಾಥ ಬಪ್ಪನಮನೆ, ವೀರಪ್ಪ ಗೌಡ ಚಿದ್ಗಲ್ಲು, ಸುಕುಮಾರ ನಾಗತೀರ್ಥ, ರಾಮ ಭಟ್ ಪಂಜ, ರಾಮಯ್ಯ ಗೌಡ ಕುದ್ವ, ಗಂಗಾಧರ ಗೌಡ ಬಿಡಾರಕಟ್ಟೆ, ಇವರನ್ನು ಸನ್ಮಾನಿಸಲಾಯಿತು.
ಶಾಲಾ ಮಕ್ಕಳ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮವನ್ನು ಶಿವರಾಮಯ್ಯ ಕರ್ಮಾಜೆ ಉದ್ಘಾಟಿಸಿದರು. ವಿಠ್ಠಲ್‌ನಾಯಕ್ ಕಲ್ಲಡ್ಕ ಇವರ ಗೀತಾ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ನಡೆಯಿತು.
ಸಭಾಧ್ಯಕ್ಷತೆಯನ್ನು ಆಶಿತ್ ಕಲ್ಲಾಜೆ ವಹಿಸಿದ್ದರು, ಯೋಗಿಶ್ ಚಿದ್ಗಲ್ಲು, ಕಾರ್ಯಪ್ಪ ಗೌಡ ಚಿದ್ಗಲ್, ಚಂದ್ರಶೇಖರ ಕುಕ್ಕುಪುಣಿ, ಭವಾನಿಶಂಕರ ದೇರಪ್ಪಜ್ಜನಮನೆ, ಸುಬ್ಬಣ್ಣ ನಾಯಿಕ, ದೇವಿಪ್ರಸಾದ್ ಕುಳ್ಳಾಜೆ, ಉಜ್ವಲ್ ಚಿದ್ಗಲ್ ಉಪಸ್ಥಿತರಿದ್ದರು.
ಶಶಿಧರ ಪಳಂಗಾಯ ಕಾರ್ಯಕ್ರಮ ನಿರೂಪಿಸಿದರು.