ಕೃತಿ ಬಿಡುಗಡೆಗೊಳಿಸಿ ವಿವಾಹವಾದ ಸಾಹಿತಿ

Advertisement

ಗುತ್ತಿಗಾರು: ಕೃತಿಯನ್ನು ಬಿಡುಗಡೆಗೊಳಿಸಿ ದಾಂಪತ್ಯ ಬದುಕಿಗೆ ಕಾಲಿರಿಸಿದ ಸಾಹಿತಿಯ ನಡೆ  ಈಗ ಮೆಚ್ಚುಗೆಗೆ ಪಾತ್ರವಾಗಿದೆ.

Advertisement

ವಿವಾಹ ಸಮಾರಂಭಗಳಲ್ಲಿ ಸಂಗೀತ ರಸಮಮಂಜರಿ, ಹಾಡು, ಸ್ಯಾಕ್ಸೋಪೋನ್ ಇತ್ಯಾದಿಗಳ ಗದ್ದಲ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಆದರೆ ಇಲ್ಲಿ ತಾಳಿ ಕಟ್ಟುವ ಶುಭವೇಳೆ ಯಾವುದೇ ಗದ್ದಲದ ಬದಲಿಗೆ  ಕವನಗಳ ವಾಚನದ ಜೊತೆಗೆ ಕೃತಿ ಬಿಡುಗಡೆ ಕಂಡಿಬಂದಿದೆ.

Advertisement
Advertisement

ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಕಿರಣ ರಂಗ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಯುವ ಸಾಹಿತಿ ಯೊಗೀಶ್ ಹೊಸೋಳಿಕೆ ಮತ್ತು ಸುಳ್ಯ ತಾಲೂಕು ಕಚೇರಿಯಲ್ಲಿ ಉದ್ಯೋಗಿಯಾಗಿರುವ ಜಯಶ್ರೀ ಮಡಪ್ಪಾಡಿ  ಅವರ ವಿವಾಹದಲ್ಲಿ ಕಂಡುಬಂದ ದೃಶ್ಯ ಇದು.
ಸಾಹಿತಿ ಯೊಗೀಶ್ ಹೊಸೋಳಿಕೆ ತಮ್ಮ ಮದುವೆಯ ಸಂದರ್ಭ ಇವರೇ ಬರೆದಿರುವ ಅರೆಭಾಷೆಯ ಪುಣ್ಯ ಕೋಟಿ ಕೃತಿಯನ್ನು ಲೋಕಾರ್ಪಣೆ ಮಾಡಿದರು.  ಕರ್ನಾಟಕ ರಾಜ್ಯ ಅರೆಭಾಷೆ ಮತ್ತು ಸಂಸ್ಕೃತಿ ಅಕಾಡೆಮಿ ಅಧ್ಯಕ್ಷ ಪಿ.ಸಿ ಜಯರಾಮ ಕೃತಿ ಬಿಡುಗಡೆಗೊಳಿಸಿದರು. ಅಕಾಡೆಮಿ ಸದಸ್ಯರಾದ ಎ,ಕೆ ಹಿಮಕರ, ದಿನೇಶ್ ಹಾಲೆಮಜಲು, ಕೆ.ಟಿ ವಿಶ್ವನಾಥ ಹಾಗೂ ಪರಶುರಾಮ ಚಿಲ್ತಡ್ಕ ಉಪಸ್ಥಿತರಿದ್ದರು.

ಬಳಿಕ ಒಂಬತ್ತು ಮಂದಿ ಹಿರಿಯ ಹಾಗೂ ಕಿರಿಯ ಸಾಹಿತಿಗಳು ತಾವು ಬರೆದ ಕೃತಿಗಳನ್ನು ವಾಚಿಸಿದರು. ವಿವಾಹ ಸಂದರ್ಭದಲ್ಲಿ ಸಾಂಪ್ರದಾಯಿಕವಾಗಿ ಬಳಕೆಯಲ್ಲಿರುವ ಸೋಭಾನೆ ಗೀತೆ, ಹೆಣ್ಣು ಇಳಿಸಿಕೊಡುವ ವೇಳೆ ಬಳಸುವ ಹಾಡು, ತಾಯಿ ಮನೆ ತೊರೆದು ಗಂಡನ ಮನೆ ಸೇರುವ ಸನ್ನಿವೇಶ ಅಲ್ಲಿ ಆಕೆ ಬದುಕಬೇಕಾರ ರೀತಿ ಜವಾಬ್ದಾರಿ ಇತ್ಯಾದಿ ಅಂಶಗಳ ಕುರಿತು ಹಾಗೂ ಆಕೆ ಗಂಡನ ಮನೆಯಲ್ಲಿ ಪತಿ ಹಾಗೂ ಅತ್ತೆಮಾವನ ಮನೆಯಲ್ಲಿ ಬಾಳಬೇಕಿರುವ ಸನ್ನಿವೇಶಗಳನ್ನು ಉಲ್ಲೇಖಿಸಿ ರಚಿಸತವಾದ ಕವಿತೆಗಳನ್ನು ಸಾಹಿತಿಗಳು ವಾಚಿಸಿದರು.

Advertisement

ಹಿರಿಯ ಸಾಹಿತಿಗಳಾದ ನಿವೃತ್ತ ಪ್ರಾಧ್ಯಾಪಕ ಬಾಬು ಮಾಸ್ತರ್ ಅಚ್ರಪ್ಪಾಡಿ, ಪ್ರಗತಿಪರ ಕೃಷಿಕ ಮತ್ತು ಸಾಹಿತಿ ಲಕ್ಷ್ಮಣ ಮಾಯಿಪನಮನೆ, ಸಂಜೀವ ಕುದ್ಪಾಜೆ, ಯು.ಸು ಗೌಡ, ದಿನೇಶ್ ಕುವೆತ್ತೋಡಿ, ಭಾಗ್ಯಶ್ರೀ ಆರ್ನೋಜಿ, ಯಶವಂತ ಕುಡೆಕಲ್ಲು ಕವನ ವಾಚಿಸಿದರು. ಸಾಹಿತಿ ಎ.ಕೆ ಹಿಮಕರ ಅವರು ಬರೆದಿರುವ ಕವನ ಸಂಕಲನಗಳನ್ನು ಯುವ ಹಾಡುಗಾರ ರಮೇಶ್ ಮೆಟ್ಟಿನಡ್ಕ ಹಾಡಿದರು. ತಬಲದಲ್ಲಿ ಹರೀಶ್ ನಾಯಕ್, ಕೀಬೋರ್ಡ್‍ನಲ್ಲಿ ಕಡ್ಯ ವಾಸುದೇವ ಭಟ್ ಸಹಕರಿಸಿದರು.

ಸಮಾರೋಪ ಭಾಷಣ ಮಾಡಿದ ನ್ಯಾಯವಾದಿ ಮತ್ತು ಸಾಹಿತಿ ಮದುವೆ ಮನೆಗಳು ಗದ್ದಲದ ಗೂಡಾಗುತ್ತಿವೆ. ಸಂಪ್ರದಾಯ ಇನ್ನಿತರ ವಿಚಾರಧಾರೆಗಳು ಯುವಜನತೆಯಲ್ಲಿ ಮರೆಯಾಗುತ್ತಿವೆ ಇಂತಹ ದಿನಗಳಲ್ಲಿ ವಿವಾಹ ಬಂಧನಕ್ಕೆ ಒಳಗಾಗುವ ವೇಳೆ ಈ ರೀತಿ ವಿಶಿಷ್ಟವಾಗಿ ಆಚರಿಸುತ್ತಿರುವುದರಿಂದ ಸಂಪ್ರದಾಯ ಉಳಿಯುತ್ತದೆ ಎಂದರು.

Advertisement

ಆಗಮಿಸಿದ ಬಂಧು ಮಿತ್ರರಿಗೆ ಮದುವೆ ಗಂಡು ಯೊಗೀಶ್ ಹೊಸೋಳಿಕೆ ರಚಿಸಿರುವ ಅರೆಭಾಷೆ ಪುಣ್ಯಕೋಟಿ ಕೃತಿಯನ್ನು ನೀಡಲಾಯಿತು. ವಿವಾಹದ ಆಮಂತ್ರಣ ಪತ್ರಿಕೆಯನ್ನು ಅರೆಭಾಷೆಯಲ್ಲೆ ಅಚ್ಚು ಹಾಕಲಾಗಿತ್ತು.

ಮದುವೆಯನ್ನು ವಿಶೇಷ ರೀತಿಯಲ್ಲಿ ಆಚರಿಸಿರುವ ಬಗ್ಗೆ ಮಾತನಾಡಿದ ಸಾಹಿತಿ ಯೊಗೀಶ್ ಹೊಸೋಳಿಕೆ , “ಭಾಷೆಯ ಉಳಿವು ಅತ್ಯಗತ್ಯ. ಮೊದಲಿನಿಂದಲೂ ಸಾಹಿತ್ಯ ಕ್ಷೇತ್ರದಲ್ಲಿ ತಾನು ಗುರುತಿಸಿಕೊಂಡಿದ್ದೆ. ತನ್ನ ವಿವಾಹ ಬಂಧನದ ಅಮೂಲ್ಯ ಕ್ಷಣವನ್ನು ವಿಶೇಷವಾಗಿ ಆಚರಿಸಿಕೊಳ್ಳಬೇಕು ಎಂದು ನಿರ್ಧರಿಸಿದ್ದೆ. ಅದಕ್ಕಾಗಿ ಕೃತಿ ರಚಿಸಿಕೊಂಡು ಈ ಘಳಿಗೆಯಲ್ಲಿ ಬಿಡುಗಡೆಗೊಳಿಸಿರುವೆ. ಅರೆಭಾಷೆ ಉಳಿವಿಗೆ ಅರೆಭಾಷೆಯಲ್ಲಿ ಕವನ ಸಂಕಲನಗಳ ರಚನೆ ಅಗತ್ಯ. ಹೀಗಾಗಿ ತನ್ನ ಮದುವೆಯಲ್ಲಿ ಕವನ ವಾಚನಕ್ಕೆ ಆದ್ಯತೆ ನೀಡಿದ್ದೇನೆ” ಎನ್ನುತ್ತಾರೆ.

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಕೃತಿ ಬಿಡುಗಡೆಗೊಳಿಸಿ ವಿವಾಹವಾದ ಸಾಹಿತಿ"

Leave a comment

Your email address will not be published.


*