ಪಂಜ : ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 624 ಅಂಕಗಳೊಂದಿಗೆ ರಾಜ್ಯದಲ್ಲಿ ದ್ವಿತೀಯ ಸ್ಥಾನ ಪಡೆದ ಸುಬ್ರಹ್ಮಣ್ಯದ ಕುಮಾರಸ್ವಾಮಿ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಕೃಪಾ ಕೆ ಆರ್ ಮನೆಯಲ್ಲಿ ಹೆತ್ತವರಿಗೆ ಸಂಭ್ರಮ ಹಾಗೂ ಸಂತಸ. ಕೃಪಾಗೆ ಈಗ ಎಲ್ಲೆಡೆಯಿಂದ ಅಭಿನಂದನೆಗಳ ಮಹಾಪೂರವೇ ಹರಿದಿದೆ.
ಕಡಬ ತಾಲೂಕಿನ ಬಳ್ಪ ಸಮೀಪದ ಕಣ್ಕಲ್ ರವಿ ಅಮ್ಮಣ್ಣಾಯ ಅವರ ಪುತ್ರಿ ಕೃಪಾ ಕೆ ಆರ್ ನಿರಂತರ ಅಭ್ಯಾಸದ ಮೂಲಕ ಉತ್ತಮ ಅಂಕ ಪಡೆದಿದ್ದಾರೆ. ಗ್ರಾಮೀಣ ಭಾಗದ ಈ ವಿದ್ಯಾರ್ಥಿನಿ ಯಾವುದೇ ಕೋಚಿಂಗ್ ಗೆ ತೆರಳದದೆ ಸತತ ಅಭ್ಯಾಸದ ಮೂಲಕ ಈ ಸಾಧನೆ ಮಾಡಿದ್ದಾರೆ. ಕೃಪಾ ಈ ಸಾಧನೆಗೆ ಕುಮಾರಸ್ವಾಮಿ ಆಂಗ್ಲಮಾದ್ಯಮ ಶಾಲೆಯ ಸಂಚಾಲಕ ಗಣೇಶ್ ಪ್ರಸಾದ್ , ಚಂದ್ರಶೇಖರ್ ಹಾಗೂ ಶಾಲಾ ಮುಖ್ಯೋಪಾಧ್ಯಾಯಿನಿ ವಿದ್ಯಾರತ್ನ ಅಭಿನಂದನೆ ಸಲ್ಲಿಸಿದ್ದಾರೆ.
ಉತ್ತಮ ಅಂಕದ ನಿರೀಕ್ಷೆ ಇತ್ತು ಎನ್ನುವ ಕೃಪಾ , ವಿಜ್ಞಾನ ವಿಭಾಗದಲ್ಲಿ ಒಂದು ಅಂಕ ಕಡಿಮೆಯಾಗುವ ನಿರೀಕ್ಷೆ ಇತ್ತು, ಆದರೆ ಆಂಗ್ಲ ವಿಭಾಗದಲ್ಲಿ ಒಂದು ಅಂಕ ಕಡಿಮೆಯಾಗಿದೆ ಎನ್ನುತ್ತಾರೆ. ಈ ಸಾಧನೆಗೆ ಹೆತ್ತವರು ಹಾಗೂ ಶಾಲೆಯ ಸಹಕಾರವೇ ಕಾರಣ ಎನ್ನುತ್ತಾರೆ.