ಕೃಷಿಗೆ ಕಾಡುವ ಕಾಡಾನೆಯ ಮುದ್ದಿಸುವ ಕೃಷಿಕರು ಇವರು…!

Advertisement

ಬಾಳುಗೋಡು : ಅದು ಕಾಡಾನೆ. ಸದಾ ಕೃಷಿಗೆ ಹಾನಿ ಮಾಡುವ ಮದ್ದಾನೆ ಅದು. ಆನೆ ದಾಳಿಗೆ ಸದಾ ಶಪಿಸುವ ಜನ ಅವರು. ಇಂದು ಕಾಡಾನೆಯನ್ನು ಮುದ್ದಿಸುತ್ತಾರೆ, ತಮ್ಮ ಮನೆಯ ಸಾಕು ಪ್ರಾಣಿಗೆ ನೋವಾದ ಸಂಕಟ ಅವರಲ್ಲಿದೆ. ಇದು ಬಾಳುಗೋಡಿನಲ್ಲಿ ನೋವಿನಿಂದ ಚಡಪಡಿಸುವ ಆನೆಯ ಕತೆ.

Advertisement

ಬಾಳುಗೋಡು ಮೀಸಲು ಅರಣ್ಯದಲ್ಲಿ ಸಲಗಗಳ ನಡುವೆ ಕಾಳಗ ನಡೆದು ಒಂದು ಆನೆಗೆ ಗಾಯವಾಗಿತ್ತು. ಗಾಯಗೊಂಡ  ಕಾಡಾನೆಗೆ ಹೇಗೂ ಬುಧವಾರ ಚಿಕಿತ್ಸೆ ನೀಡಲಾಯಿತು. ಬುಧವಾರ ಸಂಜೆ ಸ್ವಲ್ಪ ಚೇತರಿಸಿಕೊಂಡರು ಕೊಂಚ ಓಡಾಟಕ್ಕೆ ಶುರು ಮಾಡಿತು. ಭಾನುವಾರ  ಮತ್ತೆ ಕಾಡಾನೆಗಳ ಕಾದಾಟದಿಂದ ಆನೆಗೆ ಮತ್ತೆ ನೋವಾಗಿದೆ. ಈಗ ಕಾಡಿನಲ್ಲಿ  ಮತ್ತೆ ಚಡಪಡಿಸುತ್ತಿದೆ.

Advertisement

ಮಂಗಳವಾರ ಮತ್ತೆ ಇನ್ನೊಂದು ಕಾಡಾನೆ ನಾಡಿನ ಕಡೆಗೆ ಬಂದಿದೆ. ಆದರೆ  ಏನೂ ಮಾಡಿಲ್ಲ. ಗಾಯಗೊಂಡ ಆನೆಯ ಪಕ್ಕ ಬಂದಿದೆ. ಜೊತೆಗೆ ಕೃಷಿ ಭೂಮಿಗೂ ಹಾನಿ ಮಾಡಿದೆ. ಭಾನುವಾರ ತಡರಾತ್ರಿ ಬಾಳುಗೋಡು  ಭಾಗದ ಹಲವು ಮಂದಿ  ಕೃಷಿಕರ ತೋಟಗಳಿಗೆ ನುಗ್ಗಿವೆ. ಇಂತಹ ಪುಂಡಾನೆಯ ಸ್ಥಳಾಂತರ ಮಾಡಬೇಕು ಎಂದು ಅರಣ್ಯ ಇಲಾಖೆಗೆ ಕೃಷಿಕರು ಹೇಳಿದ್ದಾರೆ. ಆದರೂ ಇಲಾಖೆ ಈ ಬಗ್ಗೆ ಗಂಭೀರವಾಗಿ ಪರಿಗಣಿಸಲಿಲ್ಲ ಎಂಬ ಅಸಮಾಧಾನ ಜನರಿಗೆ ಇದೆ.

ಆದರೆ ಈ ಸಿಟ್ಟು ಆನೆಯ ಮೇಲೆ ಜನರಿಗೆ ಇಲ್ಲ. ಆನೆಯ ಮೇಲೆ ಪ್ರೀತಿ ಇದೆ. ಪೆಟ್ಟಾಗಿ ನರಳುತ್ತಿದ್ದ ಆನೆಯ ಮೇಲೆ ರಕ್ಷಣೆಗೆ   ಇಲಾಖೆಗಿಂತಲೂ ಹೆಚ್ಚು ಕಾಳಜಿ, ಪ್ರೀತಿ ಜನರಿಗೆ ಇತ್ತು. ಚಿಕಿತ್ಸೆ ಪಡೆದ ಕಾಡಾನೆಗೆ ಇನ್ನೊಂದು ಆನೆ ತಿವಿಯುವುದು  ಹಾಗೂ ಜಗಳ ಮಾಡುವ ಬಗ್ಗೆ ರಾತ್ರಿ ಸ್ಥಳೀಯರಿಗೆ ತಿಳಿಯಿತು. ಆದರೆ  ಬೆಳಗ್ಗೆ ಸ್ಥಳೀಯರು ಕಾಡಿಗೆ ತೆರಳಿದ್ದು ಈ ವೇಳೆ ಗಾಯಗೊಂಡ ಆನೆಯ ಮತ್ತು ಮತ್ತೊಂದು ಬ್ರಹತ್ ಗಾತ್ರದ ದಂತವಿರುವ ಆನೆ ಮಧ್ಯೆ ಘರ್ಷಣೆ ನಡೆಯುತ್ತಿತ್ತು. ಈ ವೇಳೆ ಸ್ಥಳಿಯರು ಆನೆಯನ್ನು ಶಬ್ಧ ಮಾಡಿ ಓಡಿಸುವ ಪ್ರಯತ್ನ ನಡೆಸಿ ಗಾಯಗೊಂಡ ಆನೆಯನ್ನು ಧಾಳಿಯಿಂದ ರಕ್ಷಿಸುವ ಪ್ರಯತ್ನಿಸಿದರು. ಈ ವೇಳೆ ಆನೆ  ಸ್ಥಳಿಯರನ್ನು ಬೆನ್ನಟ್ಟಿದೆ. ಜನರ ಈ ಪ್ರೀತಿ ಗಾಯಗೊಂಡ ಆನೆಯೂ ಕೃತಜ್ಞತೆ ಸಲ್ಲಿಸುತ್ತಿದೆ. ಆನೆಯ  ಧಾಳಿಯಿಂದ ಬೆದರಿದ ಆನೆ ಕಾಡಿನತ್ತ ತೆರಳಲು ಹಿಂದೇಟು ಹಾಕುತಿದ್ದು. ಜನವಸತಿ ಪ್ರದೇಶದತ್ತ ಬರಲು ಹವಣಿಸುತ್ತಿದೆ. ಕಳೆದ ಮೂರು ದಿನಗಳಿಂದ ಆನೆಗೆ ಆಹಾರದ ಕೊರತೆ ಆಗದಂತೆ ಬೈನೆಮರದ ಮೇವನ್ನು ಸ್ಥಳಿಯರು ಕಾಡಿಗೆ ತೆಗೆದುಕೊಂಡು ಹೋಗಿ ಆನೆಗೆ ಪೂರೈಸುತ್ತಿದ್ದಾರೆ.

Advertisement

ಇದು ಒಂದು ಆನೆಯ ಕತೆ.

ಕಾಡಾನೆ ಕೃಷಿಗೆ ತೊಂದರೆ ನೀಡುತ್ತಿದ್ದರೂ ಕೃಷಿಕರು ಆನೆಯ ರಕ್ಷಣೆಗೆ ಈಗ ಮುಂದಾಗಿದ್ದಾರೆ. ಆನೆಯ ಜೀವ ಉಳಿಯಬೇಕು ಎಂದು ಪಣ ತೊಟ್ಟಿದ್ದಾರೆ. ಅರಣ್ಯ ಇಲಾಖೆಯ ಕಾರ್ಯವೈಖರಿಗೆ ಬೇಸರ ವ್ಯಕ್ತಪಡಿಸುತ್ತಾರೆ. ಹಾಗಂತ ಇಲಾಖೆಯೂ ಸುಮ್ಮನೆ ಕುಳಿತಿಲ್ಲ. ಪ್ರಯತ್ನ ಮಾಡುತ್ತಿದೆ. ಊರ ಮಂದಿ ಮಾತ್ರಾ ದಿನವೂ ಆನೆಯ ಚಲನವಲನ ಗಮಿಸುತ್ತಾರೆ. ಆನೆಗೆ ಆಹಾರ ಕೊಡುತ್ತಾರೆ. ಈಗ ಆನೆಯನ್ನು ವರ್ಗಾವಣೆ ಮಾಡಿ ಅಂತ ಜನರೇ ಇಲಾಖೆಯನ್ನು ಒತ್ತಾಯ ಮಾಡುತ್ತಿದ್ದಾರೆ.

Advertisement

 

 

Advertisement

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಕೃಷಿಗೆ ಕಾಡುವ ಕಾಡಾನೆಯ ಮುದ್ದಿಸುವ ಕೃಷಿಕರು ಇವರು…!"

Leave a comment

Your email address will not be published.


*