ಸುಳ್ಯ: ದ.ಕ ಜಿಲ್ಲೆ ಹಾಗೂ ಕೊಡಗು ಜಿಲ್ಲೆಯ ಭಾಗದಲ್ಲಿ ಕೆಂಪುಕಲ್ಲು ಕೋರೆಯನ್ನು ನಡೆಸಲಾಗುತ್ತಿದ್ದು ಇದು ಅನಧಿಕೃತವಾಗಿದ್ದರು ಇದರ ಅವಶ್ಯಕತೆ ಸಾರ್ವಜನಿಕರಿಗೆ ಬಹಳಷ್ಟು ಇರುವುದರಿಂದ ಈ ಎಲ್ಲಾ ವಿಷಯವನ್ನು ಪರಿಗಣಿಸಿ ಈಗ ಇರುವ ಕಾನೂನನ್ನು ಸರಳೀಕರಣ ಮಾಡಿ ಆಯಾ ಪಂಚಾಯತ್ ಮಟ್ಟದಲ್ಲಿ ಪರವಾನಿಗೆ ಕೊಡುವ ವ್ಯವಸ್ಥೆ ಮಾಡಬೇಕು ಎಂದು ಮುಖ್ಯಮಂತ್ರಿಗಳಿಗೆ ಹಾಗೂ ಗಣಿ ಮತ್ತು ಭೂವಿಜ್ಞಾನ ಸಚಿವರಿಗೆ ಮನವಿ ಮಾಡಲಾಯಿತು.
Advertisement
ಹೊಸ ನಿಯಮವನ್ನು ಮಾಡಿ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಗೆ ಹಾಗೂ ಪಂಚಾಯತ್ ಗೆ ಆದಾಯ ಬರುವ ನಿಟ್ಟಿನಲ್ಲಿ ಕಾನೂನು ರೂಪಿಸಿ ಅನುಷ್ಠಾನ ಗೊಳಿಸಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ. ಬಂದರು ಮತ್ತು ಮೀನುಗಾರಿಕೆ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಇವರ ಮುಖಾಂತರ ಮನವಿ ಪತ್ರವನ್ನು ನೀಡಲಾಯಿತು.
Advertisement
ಈ ಸಂದರ್ಭದಲ್ಲಿ ಕೆಂಪು ಕಲ್ಲಿನ ಚಾಲಕ ಮತ್ತು ಮಾಲಕರಾದ ವಿಜಯಕುಮಾರ್ ನಿಡ್ಯಮಲೆ , ನವೀನ್ ರೈ ಮೇನಾಲ, ಪ್ರಕಾಶ್ ಗೌಡ ಅಡ್ಕಾರ್ ಮತ್ತು ಕಿಟ್ಟಣ್ಣ ರೈ ಮೇನಾಲ ಉಪಸ್ಥಿತರಿದ್ದರು.
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement