ಕೆಎಸ್‍ಎಸ್ ಕಾಲೇಜಿನಲ್ಲಿ ಯೋಗ ತರಬೇತಿ ಉದ್ಘಾಟನೆ

August 30, 2019
10:00 AM

ಸುಬ್ರಹ್ಮಣ್ಯ: ಪ್ರತಿ ಜೀವಿಗೂ ಬೇಕಿರುವುದು ದೈಹಿಕ ಆರೋಗ್ಯ ಇದಕ್ಕೆ ಯೋಗ ಬಹುಮುಖ್ಯ ಸಾಧನ ಎಂದು ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ಉಪಪ್ರಾಂಶುಪಾಲೆ ಡಾ. ಉಷಾ ಅಂಕೋಲೆಕರ್ ಅಭಿಪ್ರಾಯ ಪಟ್ಟರು.
ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ಮಹಿಳಾ ಸಬಲೀಕರಣ ಘಟಕ, ಅರ್ಥಶಾಸ್ತ್ರ ವಿಭಾಗ, ಪತಂಜಲಿ ಯೋಗ ಸಮಿತಿ ಬೆಳ್ಳಾರೆ ಇವುಗಳ ಅಶ್ರಯದಲ್ಲಿ ಕೆಎಸ್‍ಎಸ್ ಕಾಲೇಜಿನಲ್ಲಿ ನಡೆದ ಯೋಗ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮನಸ್ಸು ಮತ್ತು ದೇಹವನ್ನು ಸಮತೋಲನದಲ್ಲಿ ಇರಲು ಯೋಗ ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳುವುದು ಅತ್ಯವಶ್ಯ ಎಂದರು. ಮುಖ್ಯ ಅತಿಥಿಯಾಗಿದ್ದ ಇಕೋ ಕ್ಲಬ್ ಮುಖ್ಯಸ್ಥೆ ಉಪನ್ಯಾಸಕಿ ಪ್ರೋ.ತಾರಕೇಶ್ವರಿ ಮಾತನಾಡಿ ಭಾರತೀಯ ಸಂಸ್ಕೃತಿ ವೈಭವತವಾದದ್ದು ಇದರ ಹಿರಿಮೆ ಮತ್ತು ಗರಿಮೆಗಳು ಯೋಗಾನುಬಂಧದಿಂದ ಕೂಡಿದೆ. ಹೀಗಾಗಿ ಗುರಿ ತಲುಪಲು ಯೋಗ ಸಹಕಾರಿ ಎಂದರು.

Advertisement

ಅರ್ಥಶಾಸ್ತ್ರ ಉಪನ್ಯಾಸಕಿ ಶ್ರೀಲತಾ ಕಮಿಲ ಪ್ರಸ್ತಾವನೆಗೈದು ಸ್ವಾಗತಿಸಿದರು. ಮಹಿಳಾ ಸಬಲೀಕರಣ ಘಟಕದ ಪ್ರತಿನಿಧಿ ದಿವ್ಯ ವಂದಿಸಿದರು. ಅಕ್ಷತಾ ಪಿ.ಕೆ ಕಾರ್ಯಕ್ರಮ ನಿರೂಪಿಸಿದರು. ಒಂದು ವಾರಗಳ ಕಾಲ ನಡೆಯುವ ಯೋಗ ಶಿಬಿರದಲ್ಲಿ ಬೆಳ್ಳಾರೆ ಪತಂಜಲಿ ಯೋಗಗುರುಗಳಾದ ಪ್ರಸಾದ್ ಸೇವಿತಾ, ಕವಿತಾ ತರಗತಿ ನಡೆಸಿಕೊಡಲಿರುವರು. ಕಾರ್ಯಕ್ರಮದಲ್ಲಿ ಉಪನ್ಯಾಸಕಿ ಪ್ರೋ ಆರತಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ನಕಲಿ, ಕಳಪೆ ಗುಣಮಟ್ಟದ ರಸಗೊಬ್ಬರ ಪೂರೈಕೆ | ಕಠಿಣ ಕ್ರಮಕ್ಕೆ  ರಾಜ್ಯ ಸರ್ಕಾರಕ್ಕೆ ಕೇಂದ್ರದಿಂದ ನಿರ್ದೇಶನ
July 17, 2025
10:13 PM
by: The Rural Mirror ಸುದ್ದಿಜಾಲ
ಮಂಡ್ಯದಲ್ಲಿ  ಸ್ವಸಹಾಯ ಸಂಘದ ಮಹಿಳೆಯರಿಗೆ ಮೇಕೆ, ಕುರಿ, ಕೋಳಿ ಸಾಕಾಣಿಕೆ ಅವಕಾಶ
July 17, 2025
10:01 PM
by: The Rural Mirror ಸುದ್ದಿಜಾಲ
ಇಂಧನ ಆಮದು ದೇಶಗಳ ಗುಂಪು ವಿಸ್ತರಿಸಿದ ಭಾರತ – 2 ಲಕ್ಷ ಚ.ಕಿ.ಮೀ. ಪ್ರದೇಶದಲ್ಲಿ ಹೈಡ್ರೋಕಾರ್ಬನ್ ಪರಿಶೋಧನೆ
July 17, 2025
9:51 PM
by: The Rural Mirror ಸುದ್ದಿಜಾಲ
ಮುಳ್ಳಯ್ಯನಗಿರಿಗೆ 600 ವಾಹನಗಳಿಗೆ ಪ್ರವೇಶ | ವಾಹನಗಳ ದಟ್ಟಣೆ ನಿಯಂತ್ರಿಸಲು ಕ್ರಮ
July 17, 2025
9:46 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group