ಕೆಎಸ್‍ಎಸ್ ಕಾಲೇಜು ಸಂಸ್ಕೃತಿ ಸೌರಭ ತಂಡದಿಂದ ದೆಹಲಿಯಲ್ಲಿ ಸಾಂಸ್ಕೃತಿಕ ಪ್ರದರ್ಶನ

Advertisement

ಸುಬ್ರಹ್ಮಣ್ಯ: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ದೆಹಲಿ ಕರ್ನಾಟಕ ಸಂಘ ನವದೆಹಲಿಯಲ್ಲಿ ಆಯೋಜಿಸಿದ್ದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ಕೆಎಸ್‍ಎಸ್ ಕಾಲೇಜಿನ ಸಂಸ್ಕøತಿ ಸೌರಭ ಕಲಾವಿದರ ತಂಡ ಭಾಗವಹಿಸಿ ಅತ್ಯುತ್ತಮ ಪ್ರದರ್ಶನ ನೀಡಿ ಜನ ಮೆಚ್ಚುಗೆಗೆ ಪಾತ್ರವಾಗಿದೆ.
ತಂಡವು ದೇಶದ ವಿವಿಧ ರಾಜ್ಯಗಳ ಜಾನಪದ ನೃತ್ಯಗಳನ್ನು ಪ್ರಸ್ತುತ ಪಡಿಸಿತು. ತಂಡದ ಸಂಯೋಜಕರಾದ ಪ್ರೊ.ಬಾಲಕೃಷ್ಣ ಪೈ ಅವರ ಮಾರ್ಗದರ್ಶನದಲ್ಲಿ ನೃತ್ಯಗುರು ಪ್ರಮೋದ್ ಕುಮಾರ್ ರೈ ಬೆಳ್ಳಾರೆ ನಿರ್ದೇಶನದಲ್ಲಿ ಅದಿತಿ ರೈ ಅವರ ನಾಯಕತ್ವದಲ್ಲಿ 45 ಮಂದಿ ಸದಸ್ಯರಿರುವ ಕಲಾವಿದರ ತಂಡವು ವಿವಿಧ ಕಾರ್ಯಕ್ರಮ ನೀಡಿತು.

Advertisement

Advertisement

ಭರತನಾಟ್ಯ, ಕರಾವಳಿಯ ಗಂಡುಕಲೆ ಯಕ್ಷಗಾನ, ಶ್ರೀಲಂಕಾದ ನವಿಲು ನೃತ್ಯ, ಗಣೇಶ ಸ್ತುತಿ, ಕುವೆಂಪು ಗೀತೆಗಳ ನೃತ್ಯ, ಪಾಶ್ಚಾತ್ಯ ನೃತ್ಯಗಳನ್ನು ಪ್ರಸ್ತುತ ಪಡಿಸಿ ಯಶಸ್ವಿ ಕಲಾವಿದರ ತಂಡ ಎಂದೆನಿಸಿಕೊಂಡಿತು. ಕಲಾವಿದ ಸುಜಿತ್ ಅವರು ಕುವೆಂಪು ಹಾಡಿಗೆ ರಚಿಸಿದ ಕುವೆಂಪುರವರ ಚಿತ್ರ ದೆಹಲಿ ಕರ್ನಾಟಕ ಸಂಘಕ್ಕೆ ಕೊಡುಗೆಯಾಗಿ ನೀಡಲಾಯಿತು.
ಸಂಸ್ಕøತಿ ಸೌರಭವ ತಂಡದ ಸಂಯೋಜಕ ಪ್ರೊ ಬಾಲಕೃಷ್ಣ ಪೈ ಅವರನ್ನು ದೆಹಲಿ ಕರ್ನಾಟಕ ಸಂಘದ ಪರವಾಗಿ ಸಮ್ಮಾನಿಸಿ ಗೌರವಿಸಲಾಯಿತು. ಭಾಗವಹಿಸಿದ ಎಲ್ಲ ಕಲಾವಿದರಿಗೆ ಪ್ರಶಸ್ತಿ ಪತ್ರಗಳನ್ನು ನೀಡಿ ಗೌವಿಸಲಾಯಿತು. ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ಡಾ. ವೆಂಕಟಾಚಲ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಸಿ.ಎಂ ನಾಗರಾಜ್, ಜತೆ ಕಾರ್ಯದರ್ಶಿ ಪೂಜಾ ಪ್ರದೀಪ್ ರಾವ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಮೋಹನದಾಸ್ ರೈ, ಸೌಮ್ಯ ಬಿ ಪೈ ಮೊದಲಾದವರು ಉಪಸ್ಥಿತರಿದ್ದರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಕೆಎಸ್‍ಎಸ್ ಕಾಲೇಜು ಸಂಸ್ಕೃತಿ ಸೌರಭ ತಂಡದಿಂದ ದೆಹಲಿಯಲ್ಲಿ ಸಾಂಸ್ಕೃತಿಕ ಪ್ರದರ್ಶನ"

Leave a comment

Your email address will not be published.


*