ಸುಳ್ಯ:ಮಾವಿನಕಟ್ಟೆ ಶ್ರೀ ಮಹಾವಿಷ್ಣು ಮೂರ್ತಿ ದೈವಸ್ಥಾನ ಕೆರೆಗೆ ಬಿದ್ದಿದ್ದ ಕಾಡುಕೋಣದ ಮರಿ ಶನಿವಾರ ಸಂಜೆಯ ಹೊತ್ತಿಗೆ ಕಾಡು ಸೇರಿತು. ಶನಿವಾರ ಬೆಳಗ್ಗಿನಿಂದಲೇ ಸತತ ಪ್ರಯತ್ನದ ಬಳಿಕ ಕಾಡು ಸೇರಲು ಸಾಧ್ಯವಾಯಿತು.
ಸುಳ್ಯ ತಾಲೂಕಿನ ದೇವಚಳ್ಳ ಗ್ರಾಮದ ಮಾವಿನಕಟ್ಟೆ ಶ್ರೀ ಮಹಾವಿಷ್ಣು ಮೂರ್ತಿ ದೈವಸ್ಥಾನ ಉದಯಗಿರಿ ಇಲ್ಲಿಯ ಕೆರೆಗೆ ಶುಕ್ರವಾರ ರಾತ್ರಿ ಆಯ ತಪ್ಪಿ ಕಾಡುಕೋಣ ಬಿದ್ದಿತ್ತು. ಶನಿವಾರ ಬೆಳಗ್ಗೆ ಸ್ಥಳೀಯರಿಗೆ ತಿಳಿದು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಬಳಿಕ ಸಂಜೆಯವರೆಗೆ ಕಾರ್ಯಾಚರಣೆ ನಡೆದಿತ್ತು.
ಕಾಡುಕೋಣ ಬಿದ್ದ ವಿಷಯ ತಿಳಿದು ಜನ ಸಾಗರವೇ ಕೆರೆಯ ಕಡೆಗೆ ಬಂದಿತ್ತು. ಬೆಳಗ್ಗಿನಿಂದಲೇ ಕಾಡು ಕೋಣ ರಕ್ಷಣೆ ಕಾರ್ಯ ಪ್ರಾರಂಭವಾಯಿತು. ನೀರಿಗೆ ಬಿದ್ದು ಸುಸ್ತಾಗಿದ್ದ ಕಾಡುಕೋಣವನ್ನು ಕೋಣವನ್ನು ಹೊರ ಹಾಕುವುದು ತ್ರಾಸದಾಯಕವಾಯಿತು. ಅರಣ್ಯ ಇಲಾಖೆಯ ಅಧಿಕಾರಿಗಳ ಮಾರ್ಗದರ್ಶನ ದಲ್ಲಿ ಯುವಕರ ಶ್ರಮದಿಂದ ಸಂಜೆಯ ವರೆಗೂ ಕಾರ್ಯ ಮುಂದುವರೆಯಿತು. ಕಾಡುಕೋಣವನ್ನು ರಕ್ಷಣೆ ಮಾಡುವುದು ಎಲ್ಲರ ಕಾಳಜಿಯಾಗಿತ್ತು. ಬೆಳಗ್ಗೆ ಅಡಿಕೆ ಮರದ ಪಾಲ ಹಾಕಿದ್ದರೆ ನಂತರ ಹಗ್ಗದ ಸಹಾಯದಿಂದ ಮೇಲೆಳೆದು ಓಡುವಂತೆ ಮಾಡಲಾಯಿತು. ಕೊನೆಗೂ ಸಂಜೆಯ ವೇಳೆಗೆ ಕಾಡುಕೋಣ ಕಾಡು ಸೇರಿತು.
ಈ ಕಾರ್ಯದಲ್ಲಿ ಸಹಕರಿಸಿದ ಎಲ್ಲರಿಗೂ ಅರಣ್ಯ ಇಲಾಖೆ ವಂದನೆ ಸಲ್ಲಿಸಿದೆ. ವನ್ಯ ಜೀವಿಗಳ ರಕ್ಷಣೆ ನಮ್ಮದು. ಪರಿಸರ ಉಳಿಸಿ ಎಂಬ ಘೋಷ ವಾಕ್ಯ ಮೊಳಗಿತು.

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕಲೆ, ಸಾಹಿತ್ಯ, ಧಾರ್ಮಿಕ, ಕೃಷಿ, ವಿಶೇಷ ಲೇಖನ , ಅಂಕಣ, ವಿಶೇಷ ವರದಿಗಳು , ರಾಜಕೀಯ ವಿಶ್ಲೇಷಣೆ, ದಿನದ ಫೋಕಸ್ ಸ್ಟೋರಿ, ದಿನದ ಚಿತ್ರ, ವಾರದ ವ್ಯಕ್ತಿ , ಜಿಲ್ಲೆ, ರಾಜ್ಯ, ರಾಷ್ಟ್ರೀಯ ಪ್ರಮುಖ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "ಕೆರೆಯಿಂದ ಕಾಡಿಗೆ ಓಡಿತು ಕಾಡುಕೋಣ…."