ಸುಳ್ಯ: ಸುಳ್ಯದ ಕೆ.ವಿ.ಜಿ. ದಂತ ಮಹಾವಿದ್ಯಾಲಯದ 2019-20ನೇ ಸಾಲಿನ ವಿದ್ಯಾರ್ಥಿ ಸಂಘದ ಪದಗ್ರಹಣ ಸಮಾರಂಭ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಕೆ.ವಿ.ಜಿ. ದಂತ ಮಹಾವಿದ್ಯಾಲಯದ ಪ್ರಾಂಶುಪಾಲೆ ಡಾ.ಮೋಕ್ಷ ನಾಯಕ್ ಕಾರ್ಯಕ್ರಮ ಉದ್ಘಾಟಿಸಿ ನೂತನ ಪದಾಧಿಕಾರಿಗಳನ್ನು ಘೋಷಿಸಿ ವಿದ್ಯಾರ್ಥಿ ಸಂಘದ ಸದಸ್ಯರುಗಳು ಕಾಲೇಜಿನ ಎಲ್ಲಾ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಬೇಕೆಂದು ಕರೆಯಿತ್ತರು.
Advertisement
ಡಾ. ದಯಾಕರ್ ಎಮ್.ಎಮ್., ಡಾ. ಕೃಷ್ಣಪ್ರಸಾದ್.ಎಲ್.ಕೆ., ಡಾ.ರಾಮರಾಜ್ ಪಿ.ಯನ್, ಸ್ನಾತಕೋತ್ತರ ಅಧ್ಯಯನ ವಿಭಾಗ ಮುಖ್ಯಸ್ಥರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ.ಮಹಾಬಲೇಶ್ವರ ಸಿ.ಯಚ್. ಪ್ರಮಾಣ ವಚನ ಬೋಧಿಸಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ರಜತ್ ಅಪ್ಪಣ್ಣ, ಉಪಾಧ್ಯಕ್ಷರಾಗಿ ಆರ್ಯರಾಜ್, ಕಾರ್ಯದರ್ಶಿ ಅಮೇಯ ಶಾಬು ಮತ್ತು ಖಜಾಂಜಿಯಾಗಿ ಪ್ರಭು ಯಸ್.ಅಧಿಕಾರ ಸ್ವೀಕರಿಸಿದರು.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement