ಸುಳ್ಯ: ಕೆವಿಜಿ ಪಾಲಿಟೆಕ್ನಿಕ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸುವರ್ಣ ಮಹೋತ್ಸವ ಮತ್ತು ಕಾಲೇಜು ಘಟಕದ ದಶಮಾನೋತ್ಸವ ಕಾರ್ಯಕ್ರಮದ ಅಂಗವಾಗಿ 106 ಬಾರಿ ರಕ್ತದಾನ ಮಾಡಿದ ಪಿ.ಬಿ.ಸುಧಾಕರ ರೈ ಯವರನ್ನು ಸನ್ಮಾನಿಸಲಾಯಿತು. ಕಾಲೇಜು ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ ಜತೆ ಕಾರ್ಯದರ್ಶಿ ಕೆ.ವಿ. ಹೇಮನಾಥ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಬಾಲಕೃಷ್ಣ ಗೌಡ ಬೊಳ್ಳೂರು ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿ ಚಂದ್ರಶೇಖರ ಬಿಳಿನೆಲೆ ಉಪಪ್ರಾಂಶುಪಾಲ ಜಯಪ್ರಕಾಶ್ ಕೆ, ಕಛೇರಿ ಅಧೀಕ್ಷಕ ರಾಮಚಂದ್ರ ಗೌಡ ಪಲ್ಲತಡ್ಕ, ಎನ್ನೆಸ್ಸೆಸ್ ಸೇವಾ ಸಂಗಮದ ಅಧ್ಯಕ್ಷ ವಿಜೇತ್ ಶಿರ್ಲಾಲ್, ಎನ್ನೆಸ್ಸೆಸ್ ಘಟಕ ನಾಯಕರಾದ ಭವಿಷ್ಯತ್ ಬಿ, ಸುಬ್ರಹ್ಮಣ್ಯ ಸಿ.ವಿ, ಶರಣ್ಯಾ ಎಂ.ಎಸ್ ಹಾಗೂ ಗ್ರೀಷ್ಮಾ ಉಪಸ್ಥಿತರಿದ್ದರು. ಕಾರ್ಯಕ್ರಮಾಧಿಕಾರಿ ಸುನಿಲ್‍ಕುಮಾರ್ ಎನ್ ಸ್ವಾಗತಿಸಿ ಘಟಕ ನಾಯಕಿ ಶರಣ್ಯಾ ವಂದಿಸಿದರು, ಕಿಶೋರ್ ಎ.ಪಿ ಕಾರ್ಯಕ್ರಮ ನಿರೂಪಿಸಿದರು.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement