ಕೊಚ್ಚಿ: ಎರಡನೇ ಬಾರಿ ಪ್ರಧಾನಿಯಾಗಿ ಅಧಿಕಾರ ವಹಿಸಿದ ಬಳಿಕ ನರೇಂದ್ರ ಮೋದಿಯವರು ಗಿ ಕೇರಳಕ್ಕೆ ಮೊದಲ ಆಗಮಿಸಿದ್ದಾರೆ. ಶುಕ್ರವಾರ ರಾತ್ರಿ 11.45ಕ್ಕೆ ವಿಶೇಷ ವಿಮಾನದಲ್ಲಿ ಕೊಚ್ಚಿಗೆ ಆಗಮಿಸಿದ ಪ್ರಧಾನಿಯವರನ್ನು ಕೇರಳ ರಾಜ್ಯಪಾಲ ಪಿ.ಸದಾಶಿವಂ, ಕೇಂದ್ರ ಸಚಿವ ವಿ.ಮುರಳೀಧರನ್, ಕೇರಳ ರಾಜ್ಯ ಸಚಿವ ಕಡಗಂಪಳ್ಳಿ ಸುರೇಂದ್ರನ್, ರಾಜ್ಯ ಸಭಾ ಸದಸ್ಯ ಸುರೇಶ್ ಗೋಪಿ ಮತ್ತಿತರರು ಸ್ವಾಗತಿಸಿದರು. ಬಳಿಕ ಪ್ರಧಾನಿ ಎರ್ನಾಕುಲಂ ಸರಕಾರಿ ಅತಿಥಿ ಗೃಹದಲ್ಲಿ ವಾಸ್ತವ್ಯ ಹೂಡಿದರು.
ಶನಿವರ ಬೆಳಿಗ್ಗೆ 8.45ಕ್ಕೆ ಹೆಲಿಕಾಪ್ಟರ್ ಮೂಲಕ ಗುರುವಾಯೂರಿಗೆ ತೆರಳುವರು. 10.10ಕ್ಕೆ ಗುರುವಾಯೂರು ಶ್ರೀಕೃಷ್ಣ ದೇವಸ್ಥಾನದಲ್ಲಿ ದರ್ಶನ ಪಡೆಯುವರು. ಈ ಸಂದರ್ಭ ತಾವರೆ ಹೂವಿನಲ್ಲಿ ತುಲಾಭಾರ ಸೇವೆ ನಡೆಸಲಿದ್ದಾರೆ. ಬಳಿಕ 11.15ಕ್ಕೆ ಗುರುವಾಯೂರು ಶ್ರೀಕೃಷ್ಣ ಹಯರ್ ಸೆಕೆಂಡರಿ ಕಾಲೇಜು ಗ್ರೌಂಡ್ ನಲ್ಲಿ ಬಿಜೆಪಿ ವತಿಯಿಂದ ನಡೆಯುವ ಅಭಿನಂದನಾ ಸಮ್ಮೇಳನದಲ್ಲಿ ಭಾಗವಹಿಸುವರು.

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "ಕೇರಳಕ್ಕೆ ಆಗಮಿಸಿದ ಪ್ರಧಾನಿ ಮೋದಿ : ಇಂದು ಗುರುವಾಯೂರಲ್ಲಿ ತಾವರೆ ಹೂವಿನಲ್ಲಿ ತುಲಾಭಾರ"