ಕೊಡಗಿನಲ್ಲಿ ಪರಿಹಾರ ಅದಾಲತ್ : ಮತ್ತೆ ಹರಿದು ಬರುತ್ತಲೇ ಇದೆ ಸಂತ್ರಸ್ತರ ಅರ್ಜಿ

ಮಡಿಕೇರಿ: ಕೊಡಗು ಜಿಲ್ಲಾಡಳಿತ ವತಿಯಿಂದ ನೆರೆ ಸಂತೃಸ್ತರಿಗಾಗಿ ಏರ್ಪಡಿಸಲಾಗಿರುವ ಮೂರು ದಿನಗಳ ಪರಿಹಾರ ಅದಾಲತ್‍ನಲ್ಲಿ ಎರಡನೇ ದಿನವಾದ ಮಂಗಳವಾರ ಕೂಡ  ಸಂತ್ರಸ್ತರು ಪಾಲ್ಗೊಂಡು ತಮ್ಮ ಹೆಸರು ನೋಂದಾಯಿಸಿಕೊಂಡು ಸಮಸ್ಯೆಗಳ ಬಗ್ಗೆ ಮನವಿ ಮಾಡಿದರು.

Advertisement

ಬೆಳೆ ಹಾಗೂ ಮನೆ ಹಾನಿ ಮತ್ತಿತರ ಬಗ್ಗೆ ಪರಿಹಾರಕ್ಕಾಗಿ ಮನವಿ ಮಾಡಿದರು. ಪರಿಹಾರ ಅದಾಲತ್ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು  ಪರಿಶೀಲಿಸಿದರು. ಪ್ರಕೃತಿ ವಿಕೋಪದಿಂದಾಗಿ ವಾಸದ ಮನೆ ಅಥವಾ ಬೆಳೆ ಹಾನಿ ಸಂಬಂಧಿಸಿದಂತೆ ಯಾವುದಾದರೂ ಕುಟುಂಬಕ್ಕೆ ಪರಿಹಾರ ನೀಡಲು ಬಿಟ್ಟು ಹೋಗಿದ್ದಲ್ಲಿ ಪರಿಹಾರ ಒದಗಿಸಲು ಪರಿಹಾರ ಅದಲಾತ್ ಹಮ್ಮಿಕೊಳ್ಳಲಾಗಿದ್ದು, ಮೇ, 29 ಕ್ಕೆ ಕೊನೆಗೊಳ್ಳಲಿದೆ.

Advertisement

ಮೇ 29 ರಂದು ನಗರದ ಜಿಲ್ಲಾಡಳಿತ ಭವನದ 2ನೇ ಮಹಡಿಯ ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಪರಿಹಾರ ಅದಾಲತ್‍ಗೆ ಹಾಜರಾಗಿ ಸಮಸ್ಯೆ ಪರಿಹರಿಸಿಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

Advertisement

ಉಪ ವಿಭಾಗಾಧಿಕಾರಿ ಟಿ.ಜವರೇಗೌಡ, ತಹಶೀಲ್ದಾರ್ ನಟೇಶ್, ಗೋವಿಂದರಾಜು ಮತ್ತಿತರರು ಹಾಜರಿದ್ದರು.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ
Advertisement

Be the first to comment on "ಕೊಡಗಿನಲ್ಲಿ ಪರಿಹಾರ ಅದಾಲತ್ : ಮತ್ತೆ ಹರಿದು ಬರುತ್ತಲೇ ಇದೆ ಸಂತ್ರಸ್ತರ ಅರ್ಜಿ"

Leave a comment

Your email address will not be published.


*