ಮಡಿಕೇರಿ : 2018 ರಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಮಾನವ ಜೀವಹಾನಿ, ಜಾನುವಾರು ಹಾನಿ, ಬೆಳೆ ಹಾನಿ, ಮನೆ ಹಾನಿ ಹಾಗೂ ವಿವಿಧ ಹಾನಿಗಳ ಸಂಬಂಧ ಪರಿಹಾರ ಪಾವತಿಸಲಾಗಿದೆ. ಇದುವರೆಗೆ ಒಟ್ಟಾರೆ ವೈಯಕ್ತಿಕ 44,506 ಪ್ರಕರಣಗಳಿಗೆ ಎನ್‍ಡಿಆರ್ ಎಫ್/ಎಸ್‍ಡಿಆರ್ ಎಫ್, ಮುಖ್ಯಮಂತ್ರಿ ಮತ್ತು ಪ್ರಧಾನಮಂತ್ರಿಯವರ ಪರಿಹಾರ ನಿಧಿಯಿಂದ 89 ಕೋಟಿ ರೂ ಹಣವನ್ನು ನೇರವಾಗಿ ಸಂತ್ರಸ್ತರ ಬ್ಯಾಂಕ್ ಖಾತೆ ಹಾಗೂ ಚೆಕ್ ಮೂಲಕ ಪಾವತಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ಪ್ರಕೃತಿ ವಿಕೋಪದಿಂದ ಸಂಸ್ರಸ್ತರಾದವರಿಗೆ ಸರ್ಕಾರದಿಂದ ವಿವಿಧ ಪರಿಹಾರ ಪಾವತಿ ಮಾಡಿರುವ ವಿವರ ಇಂತಿದೆ,
ಮಾನವ ಜೀವ ಹಾನಿ ಅನುಕಂಪ ಭತ್ಯೆ 21 ಪ್ರಕರಣಗಳಿಗೆ ಎನ್‍ಡಿಆರ್ ಎಫ್, ಎಸ್‍ಡಿಆರ್ ಎಫ್, ಮುಖ್ಯಮಂತ್ರಿ ಮತ್ತು ಪ್ರಧಾನಮಂತ್ರಿಯವರ ಪರಿಹಾರ ನಿಧಿಯಡಿ 1.370 ಕೋಟಿ ರೂ,
ಜಾನುವಾರು ಪ್ರಾಣಹಾನಿ 127 ಪ್ರಕರಣಗಳಿಗೆ ಎನ್‍ಡಿಆರ್ ಎಫ್, ಎಸ್‍ಡಿಆರ್‍ಎಫ್ ನಡಿ 0.282 ಕೋಟಿ ರೂ,
ದಿನಬಳಕೆಯ ವಸ್ತು ಹಾನಿಗೆ ಸಂಬಂಧಿಸಿದಂತೆ (ಅನುಕಂಪ ಭತ್ಯೆ ಪ್ರತಿ ಕುಟುಂಬಕ್ಕೆ 3800 ರೂ ನಂತೆ) 4,400 ಪ್ರಕರಣಗಳಿಗೆ ಎನ್‍ಡಿಆರ್ ಎಫ್, ಎಸ್‍ಡಿಆರ್ ಎಫ್‍ನಡಿ 1.672 ಕೋಟಿ ರೂ,
ವಾಸದ ಮನೆ ಹಾನಿ 4,254 ಪ್ರಕರಣಗಳಿಗೆ ಎನ್‍ಡಿಆರ್ ಎಫ್/ಎಸ್‍ಡಿಆರ್ ಎಫ್‍ನಡಿ 15.087 ಕೋಟಿ ರೂ,
ಮನೆಹಾನಿ (ಅನುಕಂಪ ಭತ್ಯೆ ಪ್ರತಿ ಕುಟುಂಬಕ್ಕೆ 50 ಸಾವಿರ ರೂ ನಂತೆ) 1,021 ಪ್ರಕರಣಗಳಿಗೆ ಮುಖ್ಯಮಂತ್ರಿಯವರ ಪರಿಹಾರ ನಿಧಿಯಿಂದ 5.105 ಕೋಟಿ ರೂ,
ವಾಸದ ಮನೆ ಹಾನಿ 480 ಪ್ರಕರಣಗಳಿಗೆ ಮುಖ್ಯಮಂತ್ರಿಯವರ ಪರಿಹಾರ ನಿಧಿಯಿಂದ 0.480 ಕೋಟಿ ರೂ,
ವಾಸದ ಮನೆ ಹಾನಿ 415 ಪ್ರಕರಣಗಳಿಗೆ ಮುಖ್ಯಮಂತ್ರಿಯವರ ಪರಿಹಾರ ನಿಧಿಯಿಂದ 2.075 ಕೋಟಿ ರೂ,
ವಾಸದ ಮನೆ ಹಾನಿ 54 ಪ್ರಕರಣಗಳಿಗೆ ಮುಖ್ಯಮಂತ್ರಿಯವರ ಪರಿಹಾರ ನಿಧಿಯಿಂದ 1.080 ಕೋಟಿ ರೂ,
ಬೆಳೆಹಾನಿ 32,198 ಪ್ರಕರಣಗಳಿಗೆ ಎನ್‍ಡಿಆರ್ ಎಫ್/ಎಸ್‍ಡಿಆರ್ ಎಫ್ 38.050 ಕೋಟಿ ರೂ,
ಬೆಳೆಹಾನಿ 1,185 ಪ್ರಕರಣಗಳಿಗೆ ಎನ್‍ಡಿಆರ್ ಎಫ್/ ಎಸ್‍ಡಿಆರ್ ಎಫ್ 2.970 ಕೋಟಿ ರೂ,
ಬೆಳೆಹಾನಿ 351 ಪ್ರಕರಣಗಳಿಗೆ ಎನ್‍ಡಿಆರ್ ಎಫ್/ಎಸ್‍ಡಿಆರ್ ಎಎಫ್ 20.920 ಕೋಟಿ ರೂ,
ಒಟ್ಟಾರೆ ವೈಯಕ್ತಿಕ 44,506 ಪ್ರಕರಣಗಳಿಗೆ ಎನ್‍ಡಿಆರ್ ಎಫ್/ಎಸ್‍ಡಿಆರ್ ಎಫ್, ಮುಖ್ಯಮಂತ್ರಿ ಮತ್ತು ಪ್ರಧಾನಮಂತ್ರಿಯವರ ಪರಿಹಾರ ನಿಧಿಯಿಂದ 89.091 ಕೋಟಿ ರೂ ಹಣವನ್ನು ನೇರವಾಗಿ ಸಂತ್ರಸ್ತರ ಬ್ಯಾಂಕ್ ಖಾತೆ ಹಾಗೂ ಚೆಕ್ ಮೂಲಕ ಪಾವತಿ ಮಾಡಲಾಗಿದೆ .

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "ಕೊಡಗು ಪ್ರಕೃತಿ ವಿಕೋಪ : ವಿತರಣೆಯಾದ ಪರಿಹಾರದ ಮೊತ್ತ 89 ಕೋಟಿ"