ಕೊಡಗು ಮಳೆಹಾನಿ ವೈಯಕ್ತಿಕ ಪ್ರಕರಣ : 92.79 ಕೋಟಿ ರೂ. ಪರಿಹಾರ ವಿತರಣೆ

Advertisement

ಮಡಿಕೇರಿ : ಕಳೆದ ವರ್ಷ ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಅನೇಕ ಮನೆಗಳ ಹಾನಿ ಮತ್ತು ಭೂಕುಸಿತ ಇತ್ಯಾದಿಗಳಿಂ  ಫಸಲು ಕೊಳೆತು ಹೋಗಿ ಅಪಾರ ಬೆಳೆಹಾನಿ ಸಂಭವಿಸಿದ ಪ್ರಕರಣಗಳಲ್ಲಿ ಸರಕಾರವು ಆದ್ಯತೆ ಮೇರೆಗೆ ಪರಿಹಾರವನ್ನು ನೇರ ಪಾವತಿ ಮೂಲಕ ಸಂತ್ರ್ರಸ್ತರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗಿತ್ತು. ಹಾಗಿದ್ದರೂ  ಬಹಳಷ್ಟು ಸಾರ್ವಜನಿಕರು ಪರಿಹಾರ ಪಾವತಿಯಾಗದಿರುವ ಬಗ್ಗೆ ಪದೇ ಪದೇ ಜಿಲ್ಲಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ ವಿಚಾರಿಸುತ್ತಿದ್ದರಿಂದ ಇದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಡಳಿತವು ಈ ಸಮಸ್ಯೆಯನ್ನು ಪರಿಹರಿಸಲು ಮೇ 27 ರಿಂದ ಮೇ 29 ರವರೆಗೆ ಮೂರು ದಿನಗಳ ಕಾಲ ನಗರದ ಜಿಲ್ಲಾಡಳಿತ ಭವನದಲ್ಲಿ ಪರಿಹಾರ ಅದಾಲತ್‍ನ್ನು ಹಮ್ಮಿಕೊಳ್ಳಲಾಗಿತ್ತು.

Advertisement

ಈ ಪರಿಹಾರ ಅದಾಲತ್‍ಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸುಮಾರು 3,148 ಜನರು ಪರಿಹಾರ ಅದಾಲತ್‍ಗೆ ಬಂದು ತಮ್ಮ ಅಹವಾಲುಗಳನ್ನು ಸಲ್ಲಿಸಿದ್ದು, ಈ ಪೈಕಿ 1577 ಪ್ರಕರಣಗಳನ್ನು ಸ್ಥಳದಲ್ಲೇ ಇತ್ಯರ್ಥ ಪಡಿಸಲಾದ ಪ್ರಕರಣ ಹೊರತುಪಡಿಸಿ, ಒಟ್ಟು 1571 ಅರ್ಜಿ ಸ್ವೀಕರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

Advertisement
Advertisement

ಪರಿಹಾರ ಅದಾಲತ್‍ನಲ್ಲಿ ಸ್ವೀಕೃತವಾದ ಅಹವಾಲುಗಳನ್ವಯ ಶೀಘ್ರವಾಗಿ ಕ್ರಮ ಕೈಗೊಂಡು ಭಾಗಶಃ ಬೆಳೆ ಪರಿಹಾರ ಪಾವತಿಯಾದ 4,487 ಪ್ರಕರಣಗಳಲ್ಲಿ ಸುಮಾರು 3.70 ಕೋಟಿ ಪರಿಹಾರವನ್ನು ಸಂಭಂದಪಟ್ಟ ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಯಿಸಲಾಗಿದೆ.  ಇದು ಸೇರಿದಂತೆ ಪ್ರಸ್ತುತ ವೈಯಕ್ತಿಕ ಪ್ರಕರಣಗಳಲ್ಲಿ ಪರಿಹಾರ ವಿತರಿಸಿರುವ ಒಟ್ಟು ಮೊತ್ತ  92.79 ಕೋಟಿ ರೂ. ಆಗಿದೆ. ಉಳಿಕೆ ಒಟ್ಟು 1571 ಅರ್ಜಿಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಂದ ಕ್ಷೇತ್ರ ಪರಿಶೀಲನೆ ಮಾಡಿಸಿ ನಂತರ ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಕೊಡಗು ಮಳೆಹಾನಿ ವೈಯಕ್ತಿಕ ಪ್ರಕರಣ : 92.79 ಕೋಟಿ ರೂ. ಪರಿಹಾರ ವಿತರಣೆ"

Leave a comment

Your email address will not be published.


*