ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಸಂಸತ್ ಪ್ರವೇಶಿಸಿದ ಪ್ರತಾಪ್ ಸಿಂಹ

June 18, 2019
3:00 PM

ಮಡಿಕೇರಿ : ಎರಡನೇ ಬಾರಿಗೆ ಕೊಡಗು, ಮೈಸೂರು ಲೋಕಸಭಾ ಕ್ಷೇತ್ರದ ಸಂಸದರಾಗಿ ಆಯ್ಕೆಯಾದ ಪ್ರತಾಪ್ ಸಿಂಹ ಅವರು ಇಂದು ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಸಂಸತ್ ಪ್ರವೇಶಿಸುವ ಮೂಲಕ ಗಮನ ಸೆಳೆದರು.

17ನೇ ಲೋಕಸಭೆಯ ಮೊದಲ ಸಂಸತ್ ಅಧಿವೇಶನಕ್ಕೆ ಕೊಡವ ಉಡುಪಾದ ಕುಪ್ಯಚಾಲೆ, ದಟ್ಟಿ, ಪೀಚೆಕತ್ತಿಯೊಂದಿಗೆ ಲೋಕಸಭೆಯಲ್ಲಿ ಕಾಣಿಸಿಕೊಂಡು ಕೊಡಗಿನ ವೀರಪರಂಪರೆಯನ್ನು ಸಾಕ್ಷೀಕರಿಸಿದರು. ಅತ್ಯಧಿಕ ಮತಗಳನ್ನು ನೀಡಿ ತಮ್ಮ ಗೆಲುವಿಗೆ ಕಾರಣವಾದ ಕೊಡಗಿನ ಬಗ್ಗೆ ಅಪಾರ ಅಭಿಮಾನವನ್ನು ವ್ಯಕ್ತಪಡಿಸಿರುವ ಪ್ರತಾಪ್‍ಸಿಂಹ, ಜಿಲ್ಲೆಯ ಜನರ ನಿರೀಕ್ಷೆಗಳನ್ನು ಹುಸಿ ಮಾಡುವುದಿಲ್ಲವೆಂದು ಈಗಾಗಲೇ ಭರವಸೆ ನೀಡಿದ್ದಾರೆ.

ಮತ್ತೊಂದೆಡೆ ಯುವ ಸಂಸದರ ಪೈಕಿ ಒಬ್ಬರಾಗಿರುವ ಬೆಂಗಳೂರು ದಕ್ಷಿಣ ಕ್ಷೇತ್ರದ ತೇಜಸ್ವಿ ಸೂರ್ಯ ಮೈಸೂರು ಶೈಲಿಯ ಪಂಚೆ, ಶಲ್ಯ ಧರಿಸಿ ಸಂಸತ್ ಪ್ರವೇಶಿಸುವ ಮೂಲಕ ವಿಶಿಷ್ಟತೆ ಮೆರೆದರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮಂಗಳೂರಿನಲ್ಲಿ ಉದ್ಯೋಗಾವಕಾಶ : ಮೇ 30ರಂದು ಕಸ್ಟಮರ್ ಸಪೋರ್ಟ್ ಹಾಗೂ ಟೆಲಿಕಾಲರ್ ಹುದ್ದೆಗಳಿಗೆ ನೇರ ಸಂದರ್ಶನ
May 27, 2026
8:15 PM
by: ಮಿರರ್‌ ಡೆಸ್ಕ್
ಬ್ಲಿಂಕಿಟ್‌ನಲ್ಲಿ ಉದ್ಯೋಗಾವಕಾಶ : ಜೂನ್ 1ರಂದು ಮಂಗಳೂರಿನಲ್ಲಿ ನೇರ ಸಂದರ್ಶನ
May 27, 2026
8:07 PM
by: ಮಿರರ್‌ ಡೆಸ್ಕ್
ಹವಾಮಾನ ಬದಲಾವಣೆ ಈಗ ಭವಿಷ್ಯದ ಸಮಸ್ಯೆಯಲ್ಲ- ಸ್ಥಳೀಯ ಮಟ್ಟದಲ್ಲೇ ಆರಂಭವಾಗುತ್ತಿದೆ ಕ್ರಿಯಾ ಯೋಜನೆ
May 27, 2026
12:11 PM
by: ದ ರೂರಲ್ ಮಿರರ್.ಕಾಂ
ಮಳೆಗಾಲ ಆರಂಭ- ಜೂನ್‌ 1ರಿಂದ ರಸ್ತೆ, ಗುಡ್ಡ, ಮಣ್ಣು ಅಗೆತ ಕಾಮಗಾರಿಗೆ ನಿರ್ಬಂಧ – ನಗರಪಾಲಿಕೆ ಎಚ್ಚರಿಕೆ
May 23, 2026
6:45 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror