ಬಳ್ಪ: ರಸ್ತೆ ಸಮಸ್ಯೆಯಿಂದ ರೋಗಿಯೊಬ್ಬರನ್ನು ಹೊತ್ತೊಯ್ದ ಘಟನೆ ಬಳ್ಪ ಆದರ್ಶ ಗ್ರಾಮದಲ್ಲಿ ನಡೆದಿತ್ತು. ಈ ಸುದ್ದಿ ರಾಜ್ಯಾದ್ಯಂತ ಸಂಚಲನ ಮೂಡಿಸಿತ್ತು. ಇದೀಗ ಶಾಸಕ ಅಂಗಾರ ಅವರು ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯರೊಂದಿಗೆ ಮಾತುಕತೆ ನಡೆಸಿದ್ದಾರೆ. ಕೊನೆಗೂ ರಸ್ತೆ ಭಾಗ್ಯ ಸಿಗುತ್ತಾ ಎಂಬ ನಿರೀಕ್ಷೆ ಇದೆ.
Advertisement
ಭಾನುವಾರ ಸಂಜೆ ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯರ ಜೊತೆ ಮಾತುಕತೆ ನಡೆಸಿದ ಶಾಸಕ ಅಂಗಾರ ಅವರು ಶಾಶ್ವತ ರಸ್ತೆ ನಿರ್ಮಾಣ ಸಂಬಂಧ ಇಲಾಖೆಯ ಅಧಿಕಾರಿಗಳ ಜತೆ ದೂರವಾಣಿಯಲ್ಲಿ ಚರ್ಚಿಸಿ ಎರಡು ದಿನಗಳ ಒಳಗೆ ಸ್ಥಳ ತನಿಖೆ ನಡೆಸಿ ಅಂದಾಜು ಪಟ್ಟಿ ಸಲ್ಲಿಸುವಂತೆ ಸೂಚಿಸಿದರು. ಬಳಿಕ ಸ್ಥಳೀಯರ ಜತೆ ಈ ರಸ್ತೆ ಅಭಿವೃದ್ದಿಗೆ ಅನುದಾನವನ್ನು ಸರಕಾರ ಮಟ್ಟದಲ್ಲಿ ಮಂಜೂರುಗೊಳಿಸಿ ಶೀಘ್ರ ರಸ್ತೆ ಅಭಿವೃದ್ದಿ ಜತೆಗೆ ಈ ಭಾಗದಿಂದ ನೇರ ಬಳ್ಪ ಮುಖ್ಯ ಪೇಟೆಗೆ ರಸ್ತೆ ಸಂಪರ್ಕ ಜೋಡಿಸಿ ಕೊಡುವುದಾಗಿ ಭರವಸೆ ಇತ್ತರು.
Advertisement
ಈ ಸಂದರ್ಭ ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ, ಗ್ರಾ.ಪಂ ಅಧ್ಯಕ್ಷ ಪ್ರಕಾಶ ಮುಡ್ನೂರು ಮೊದಲಾದವರು ಉಪಸ್ಥಿತರಿದ್ದರು.
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement