ಕೊರೊನಾ ಔಟ್ಬ್ರೇಕ್ | ಸುಳ್ಯ ತಾಲೂಕಿನಲ್ಲಿ ಯಾವುದೇ ಕೊರೊನಾ ಪಾಸಿಟಿವ್ ಇಲ್ಲ | ಅನಗತ್ಯ ಭಯ-ಸುಳ್ಳು ಸುದ್ದಿ ಹರಡದಿರಿ |

March 30, 2020
4:00 PM

ಸುಳ್ಯ: ತಾಲೂಕಿನಲ್ಲಿ  ಇದುವರೆಗೆ ಯಾವುದೇ ಕೊರೊನಾ ವೈರಸ್ ಸೋಂಕು ಇರುವುದು ಪತ್ತೆಯಾಗಿಲ್ಲ. ಆದರೆ ಇದೇ ರೀತಿಯಾಗಿ ಮುಂಜಾಗ್ರತಾ ಕ್ರಮಗಳು ಇನ್ನೂ 15 ದಿನಗಳ ಕಾಲ ಅಗತ್ಯವಿದೆ. ಅನಗತ್ಯವಾಗಿ ಸುಳ್ಳು ಸುದ್ದಿ ಹಾಗು ವದಂತಿ ಹಬ್ಬಿಸಬೇಡಿ. ಭಯದ ಬದಲಾಗಿ ಜಾಗೃತಿ ಇರಲಿ ಎಂದು ಆರೋಗ್ಯ ಇಲಾಖೆ ಹಾಗೂ ತಾಲೂಕು ಆಡಳಿತ ಹೇಳಿದೆ.

ವಿದೇಶದಿಂದ ಬಂದವರನ್ನು  ಈಗಾಗಲೆ ಕ್ವಾರಂಟೇನ್ ನಲ್ಲಿ ಇರಲು ಸೂಚಿಸಿದೆ. ವಿದೇಶದಿಂದ ಬಂದು ಅನಾರೋಗ್ಯಕ್ಕೆ ಒಳಗಾದವರ ರಕ್ತದ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. ಇದುವರಗೆ ಕೊರೊನಾ ವೈರಸ್ ಪಾಸಿಟಿವ್ ಬರಲಿಲ್ಲ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ಹೀಗಾಗಿ ತಾಲೂಕಿನಲ್ಲಿ ಮುಂಜಾಗ್ರತಾ ಕ್ರಮಗಳನ್ನು  ಇದೇ ರೀತಿ ಮುಂದುವರಿಸಿಕೊಂಡು ಕಡ್ಡಾಯವಾಗಿ ಹೊಗಬೇಕಿದೆ. ವಿದೇಶದಿಂದ ಹಾಗೂ ಹೊರಜಿಲ್ಲೆಗಳಿಂದ ಬಂದವರಿಗೆ ಯಾರಿಗಾದರೂ ಜ್ವರ, ಶೀತ, ಕಫ ಇದ್ದರೆ ತಕ್ಷಣವೇ ಸಮೀಪದ ಆಸ್ಪತ್ರೆಗೆ ಯಾವುದೇ ಭಯವಿಲ್ಲದೆ ಭೇಟಿ ನೀಡಬೇಕಿದೆ. ಸ್ಥಳೀಯರು ಈ ಬಗ್ಗೆ ನಿಗಾ ಇಡಬೇಕಿದೆ.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಡಿಕೆ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆ | ಮಾರ್ಚ್‌ ತಿಂಗಳ ಇಳಿಕೆಗೆ ಹಲವು ಕಾರಣ…
March 10, 2026
1:25 PM
by: ದ ರೂರಲ್ ಮಿರರ್.ಕಾಂ
ಪೂರ್ವ ಮುಂಗಾರು ಸಿಡಿಲು, ಗಾಳಿ ಮಳೆಗೆ ಮುನ್ನೆಚ್ಚರಿಕೆ ವಹಿಸಿ : ವಿಜಯನಗರ ಜಿಲ್ಲಾಧಿಕಾರಿ ಸೂಚನೆ
March 10, 2026
6:48 AM
by: ಮಿರರ್‌ ಡೆಸ್ಕ್
ರಾಜ್ಯದಲ್ಲಿ ಟ್ರಾನ್ಸ್ಫಾರ್ಮರ್ ಕೊರತೆ: ಕೇರಳದಿಂದ ಖರೀದಿಗೆ ಸರ್ಕಾರ ನಿರ್ಧಾರ
March 10, 2026
6:43 AM
by: ದ ರೂರಲ್ ಮಿರರ್.ಕಾಂ
ಭತ್ತದ ಗದ್ದೆಯಿಂದ ಅಡಿಕೆ ತೋಟ | ಮಣ್ಣಿನ ಆರೋಗ್ಯದ ಮೇಲೆ ಪರಿಣಾಮ ಬಿಚ್ಚಿಟ್ಟ ಸಂಶೋಧನೆ
March 9, 2026
10:09 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror