ಮಂಗಳೂರು: ಕೊರೊನಾ ವೈರಸ್ ಹರಡುತ್ತಿರುವ ಪ್ರಕೆರಣಕ್ಕೆ ಸಂಬಂಧಿಸಿದಂತೆ ಭಾನುವಾರ ಯಾವುದೇ ಪಾಸಿಟಿವ್ ಪ್ರಕರಣ ಪತ್ತೆಯಾಗದೆ ನೆಮ್ಮದಿ ಉಂಟು ಮಾಡಿದೆ. ಭಾನುವಾರದ 5 ಪರೀಕ್ಷಾ ವರದಿಯಲ್ಲಿ ಯಾವುದೂ ಪಾಸಿಟಿವ್ ಕಂಡುಬರಲಿಲ್ಲ. ಆದರೆ ಉಡುಪಿಯಲ್ಲಿ ಮತ್ತೆ ಎರಡು ಕೊರೊನಾ ಪ್ರಕರಣ ದೃಢಪಟ್ಟಿದೆ.
ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಭಾರತ ಲಾಕ್ಡೌನ್ ಮಾಡಲಾಗಿದೆ. ಹೀಗಿದ್ದರೂ ಜನರು ಮನೆಯಿಂದ ಹೊರಬರುತ್ತಿರುವ ಹಿನ್ನೆಲೆಯಲ್ಲಿ ಇದೀಗ ದ ಕ ಜಿಲ್ಲೆ ಸಂಪೂರ್ಣ ಬಂದ್ ಮಾಡಲಾಗುತ್ತಿದೆ. ಹೀಗಾಗಿ ಭಾನುವಾರ ದ ಕ ಜಿಲ್ಲೆಯಲ್ಲಿ ಒಂದೇ ಒಂದು ಪಾಸಿಟಿವ್ ಪ್ರಕರಣ ಕಂಡುಬಾರದೆ ನೆಮ್ಮದಿ ಕಂಡುಬಂದಿತ್ತು. ಇಲ್ಲಿಯವರೆಗೆ ದ ಕ ಜಿಲ್ಲೆಯಲ್ಲಿ ಇದುವರೆಗೆ ಶೇ. 80 ರಷ್ಟು ನೆಗೆಟಿವ್ ವರದಿಗಳೇ ಬಂದಿದೆ. ಆದರೆ ಉಡುಪಿ ಜಿಲ್ಲೆಯಲ್ಲಿ 2 ಪ್ರಕರಣ ಪತ್ತೆಯಾಗಿದೆ.
ಮಾ. 17 ರಂದು ದುಬೈನಿಂದ ಆಗಮಿಸಿದ ಉಡುಪಿಯ 35 ವರ್ಷದ ವ್ಯಕ್ತಿ ಕೊರೊನಾ ಲಕ್ಷಣ ಕಂಡು ಬಂದ ಹಿನ್ನಲೆಯಲ್ಲಿ ಮಾ.27 ರಂದು ಕಾರ್ಕಳದ ಆಸ್ಪತ್ರೆಗೆ ದಾಖಲಾಗಿದ್ದು ಆತನ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿತ್ತು. ಇಂದು ವರದಿ ಬಂದಿದ್ದು ಆತನಿಗೆ ಸೋಂಕು ತಗುಲಿರುವುದು ತಿಳಿದು ಬಂದಿದೆ.
ತಿರುವನಂತಪುರ ತೆರಳಿದ್ದ ಉಡುಪಿಯ 29 ವರ್ಷದ ವ್ಯಕ್ತಿ, ಕೊರೊನಾ ಲಕ್ಷಣ ಪತ್ತೆಯಾದ ಕಾರಣ ಮಾ.26 ರಂದು ಆಸ್ಪತ್ರೆಗೆ ದಾಖಲಾಗಿದ್ದ ಇಂದು ಆತನ ದ್ರವದ ಮಾದರಿಯ ವರದಿ ಪಾಸಿಟಿವ್ ಬಂದಿದೆ.ಇಬ್ಬರು ರೋಗಿಗಳನ್ನು ಕೆಎಂಸಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿ ತಿಳಿಸಿದ್ದಾರೆ.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement