ಕೊರೊನಾ ವೈರಸ್ ಭೀತಿ | ಲಾಕ್ ಡೌನ್ ಮಾತ್ರವೇ ಪರಿಹಾರವಲ್ಲ | ಸಾಮಾಜಿಕ ಅಂತರವೇ ಬಹುಮುಖ್ಯ ಪರಿಹಾರ | ಜನರ ಜವಾಬ್ದಾರಿ ಯಾವುದು ?|

March 23, 2020
3:15 PM

ಮಂಗಳೂರು: ಕೊರೊನಾ ವೈರಸ್ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಲ್ಲಿ ಭಯವೇ ಹೆಚ್ಚಾಗುತ್ತಿದೆಯಷ್ಟೇ. ಲಾಕ್ ಡೌನ್ ಆಗುತ್ತದೆ ಎಂದು ಖರೀದಿಗೆ ಮುಗಿಬೀಳುತ್ತಾರೆಯಷ್ಟೇ, ಜನರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಯವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಕೂಡಾ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜನತಾ ಕರ್ಫ್ಯೂ ಉದ್ದೇಶವೂ ಅದೇ ಆಗಿತ್ತು. ಆದರೆ ಸಂಜೆಯಾಗುತ್ತಿದ್ದಂತೆಯೇ ಗುಂಪು ಗುಂಪಾಗಿ ನಿಂತರೆ ಜಾಗೃತಿಯಾಗಿಲ್ಲ ಎನ್ನುವುದು  ಸ್ಪಷ್ಟವಾಗುತ್ತದೆ. ಹೀಗಾಗಿ ಈಗ ಭಯ ಹಾಗೂ ಗೊಂದಲಗಳಿಗಿಂತಲೂ ಸರಿಯಾದ ಜಾಗೃತಿಯಾಗಬೇಕು.

Advertisement
Advertisement
Advertisement
Advertisement

ಜಾಗೃತಿ ಏಕೆ ಬೇಕು ಎಂದರೆ , ಇದು ವೈರಸ್. ಜನರಿಂದ ಜನರಿಗೆ ಹರಡುತ್ತದೆ. ವೈರಸ್ ಹರಡಿದರೆ ಸಾಯುವುದಿಲ್ಲ. ಆದರೆ ಸೂಕ್ತ ಚಿಕಿತ್ಸೆ ನೀಡಲು ಆಸ್ಪತ್ರೆಗಳು ಅಗತ್ಯ.  ವೈರಸ್ ವ್ಯಾಪಕವಾಗಿ ಹರಡಿದರೆ ಚಿಕಿತ್ಸೆ ಹೇಗೆ ಎನ್ನುವುದೇ ಇರುವ ಗೊಂದಲ. ಇದಕ್ಕಾಗಿ ಜನರೇ ಸ್ವಯಂ ನಿಯಂತ್ರಣ ಮಾಡಿಕೊಳ್ಳಲೇಬೇಕಿದೆ. ಹೀಗಾಗಿಯೇ ಸರಿಯಾದ ಜಾಗೃತಿ ಬೇಕು. ಭಯ ಹಾಗೂ ಜಾಗೃತಿಗೆ ವ್ಯತ್ಯಾಸ ಇದೆ. ಇಂದು ಸಮಾಜದಲ್ಲಿ ಕೊರೊನಾ ವೈರಸ್ ಭಯ ಇದೆ. ಜಾಗೃತಿ ಸಾಕಾಗಿಲ್ಲ. ನಿರ್ಲಕ್ಷ್ಯ ಮಾಡಿದರೆ ಸಾಮಾಜಿಕವಾಗಿ ಸಮಸ್ಯೆಯಾಗುತ್ತದೆ. ಇದಕ್ಕಾಗಿಯೇ ಪ್ರತೀ ವ್ಯಕ್ತಿ ಈಗ ಸ್ವಯಂ ನಿಯಂತ್ರಣ ಹಾಕಿಕೊಳ್ಳಬೇಕಿದೆ.

Advertisement

ಶೀತ, ಕೆಮ್ಮು, ಜ್ವರ, ಗಂಟಲು ಕೆರೆತ ಇದ್ದರೆ ಕೊರೊನಾ ವೈರಸ್ ಬಾಧಿಸಿದೆ ಎಂದು ಹೇಳಲಾಗುತ್ತದೆ. ಆದರೆ 15 ದಿನಗಳ ಆ ವ್ಯಕ್ತಿಯ ಟ್ರಾಕ್ ಕೂಡಾ ಅಗತ್ಯವಾಗುತ್ತದೆ. ಹೀಗಾಗಿ ಶೀತ-ಕೆಮ್ಮು ಇದ್ದಾಕ್ಷಣವೇ ಕೊರೊನಾ ವೈರಸ್ ಬಾಧಿಸಿದೆ ಎಂದಲ್ಲ, ಸೂಕ್ತ ಮುಂಜಾಗ್ರತೆ ಬೇಕು, ಇಲ್ಲಿ ನಿರ್ಲಕ್ಷ್ಯ ಮಾಡಲೇಬಾರದು.

ಈಗ ಎಲ್ಲಾ ದೇಶಗಳೂ ಲಾಕ್ ಡೌನ್ ಮಾಡುತ್ತಿವೆ. ಇದೊಂದೇ ಪರಿಹಾರವಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ನಿಮ್ಮನ್ನು  ನೀವೇ ರಕ್ಷಣೆ ಮಾಡಿಕೊಳ್ಳಬೇಕು ಎಂದು ಹೇಳಿದೆ ವಿಶ್ವ ಆರೋಗ್ಯ ಸಂಸ್ಥೆ. ಪ್ರತೀ ದೇಶವೂ ಆರೋಗ್ಯ ರಕ್ಷಣಾ ಕ್ರಮಗಳನ್ನು  ಕೈಗೊಳ್ಳಬೇಕು ಎಂದು ಹೇಳಿರುವ ವಿಶ್ವ ಆರೋಗ್ಯ ಸಂಸ್ಥೆ, ಈಗ ಕೊರೊನಾ ವೈರಸ್ ಸೋಂಕಿತರನ್ನು ಪ್ರತ್ಯೇಕ ಮಾಡುವುದೇ ಮೊದಲ ಆದ್ಯತೆಯಾಗಬೇಕು. ಇದರ ಜೊತೆಗೇ ಸೋಂಕು ಹೊಂದಿದವರ ಜೊತೆ ಸಂಪರ್ಕ  ಇದ್ದವರ ಆರೋಗ್ಯದ ಕಡೆಗೆ ಗಮನಹರಿಸಬೇಕು. ಆಸ್ಪತ್ರೆಗಳಲ್ಲಿ ತುರ್ತು ವಿಭಾಗ ತೆರೆಯಬೇಕು, ವೆಂಟಿಲೇಟರ್ ವ್ಯವಸ್ಥೆಗಳನ್ನು ಹೆಚ್ಚಿಸಬೇಕು. ಹೀಗೆ ಮಾಡಿದರೆ 15 ದಿನಗಳಲ್ಲಿ ನಿಯಂತ್ರಣ ಮಾಡಬಹುದು. ಇದು ಮಾಡದೇ ಎಷ್ಟು ದಿನ ಲಾಕ್ ಡೌನ್ ಮಾಡಿದರೂ ಪ್ರಯೋಜನವಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಚೀನಾ, ಸಿಂಗಾಪುರ, ದಕ್ಷಿಣ ಕೊರಿಯಾದಲ್ಲಿ ಎಲ್ಲರನ್ನೂ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಹೀಗಾಗಿ ಈಗ ವೈರಸ್ ಹರಡುವುದು  ನಿಯಂತ್ರಣವಾಗಿದೆ. 

Advertisement

ಈ ನಡುವೆ ದೇಶದಲ್ಲಿ ಕೊರೊನಾ ಪೀಡಿತರದಲ್ಲಿ ಶೇಕಡ 80 ರಷ್ಟು ಜನರಿಗೆ ಅಲ್ಪ ಜ್ವರ ಮತ್ತು ನೆಗಡಿ (ಶೀತ) ಮಾತ್ರ ಕಂಡು ಬಂದಿದೆ. ಹೀಗಾಗಿ ಜನರು ಭಯ ಮತ್ತು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಸ್ಪಷ್ಟಪಡಿಸಿದೆ.

ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿರುವ ಐಸಿಎಂಆರ್ ಮಹಾ ನಿರ್ದೇಶಕ ಬಲರಾಂ ಭಾರ್ಗವ, ಕೋವಿಡ್-19 ವೈರಾಣು ಸೋಂಕು ಹಬ್ಬದಂತೆ ತಡೆಗಟ್ಟಲು ಅಗತ್ಯವಾದಎಲ್ಲ ಮುನ್ನೆಚ್ಚರಿಕೆಗಳು ಮತ್ತು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ವಿವರಿಸಿದರು.ನಾವು ಈಗಾಗಲೇ ದೇಶಾದ್ಯಂತ ಸುಮಾರು 17,000 ಪರೀಕ್ಷೆಗಳನ್ನು ನಡೆಸಿದ್ದೇವೆ. ಭಾರತದಲ್ಲಿಒಂದು ವಾರಕ್ಕೆ 50,000 ದಿಂದ 70,000 ಪರೀಕ್ಷೆಗಳನ್ನು ನಡೆಸುವ ಸಾಮರ್ಥ್ಯ ವಿದೆ. ಈಗಾಗಲೇ 100 ಕ್ಕೂ ಹೆಚ್ಚು ಸರಕಾರಿ ಪ್ರಯೋಗಾಲಯಗಳಿವೆ. ಇನ್ನೂ ಹೆಚ್ಚು ಹೆಚ್ಚು ಖಾಸಗಿ ಲ್ಯಾಬ್‍ಗಳು ಈ ಪರೀಕ್ಷೆಗಳನ್ನು ನಡೆಸಲು ನಾವು ಸಹಕಾರ ನೀಡುತ್ತಿದ್ದೇವೆ. ಇನ್ನೂ ಹೆಚ್ಚು ಮಾದರಿಗಳ ಸಂಗ್ರಹ ಮತ್ತು ಪರೀಕ್ಷೆಗಳನ್ನು ನಡೆಸಲು ಐಸಿಎಂಆರ್ ಅನುವು ಮಾಡಿಕೊಡಲಿದೆಎಂದು ಬಲರಾಂ ಭಾರ್ಗವ ತಿಳಿಸಿದರು.

Advertisement

ಕೊರೊನಾ ವೈರಸ್ ಬಗ್ಗೆ ಮಾಹಿತಿ ನೀಡಿದ ವಿಶ್ವ ಆರೋಗ್ಯ ಸಂಸ್ಥೆಯ ಡಾ.ಮಾರಿಯಾ ವ್ಯಾನ್ ಕೆರ್ಖೋವ್ , ಕೊರೊನಾ ವೈರಸ್ ಹೆಚ್ಚು ಗಂಟೆಗಳ ಕಾಲ ಗಾಳಿಯಲ್ಲಿ ಬದುಕಬಲ್ಲದು ಎಂದು ಹೊಸ ಅಧ್ಯಯನದಿಂದ ತಿಳಿದುಬಂದಿದ್ದು, ವೈದ್ಯಕೀಯ ವೃತ್ತಿಪರರು ಮುನ್ನೆಚ್ಚರಿಕೆ ತೆಗೆದುಕೊಳ್ಳುವಂತೆ ವಿಶ್ವ ಆರೋಗ್ಯ ಸಂಸ್ಥೆ ಸೂಚಿಸಿದೆ. ಸೋಂಕು ತಗುಲಿರುವ ರೋಗಿಗಳಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ವೈದ್ಯಕೀಯ ಸಿಬ್ಬಂದಿ ಹೆಚ್ಚುವರಿ ಕ್ರಮಗಳನ್ನು ತೆಗೆದುಕೊಳ್ಳುವುದು ಅನಿವಾರ್ಯ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಡಾ.ಮಾರಿಯಾ ವ್ಯಾನ್ ಕೆರ್ಖೋವ್ ತಿಳಿಸಿದ್ದಾರೆ.

( ಮಾಹಿತಿ ಮೂಲ : ಸುದ್ದಿ ಸಂಸ್ಥೆಗಳು )

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕೇಂದ್ರ ಬಜೆಟ್‌ | ರೈತರಿಗೆ ಕಿಸಾನ್ ಕಾರ್ಡ್ ನಿಂದ ಪ್ರಯೋಜನ | ಕೃಷಿ ವಲಯಕ್ಕೆ 137757 ಕೋಟಿ ಅನುದಾನ |
February 6, 2025
7:40 AM
by: The Rural Mirror ಸುದ್ದಿಜಾಲ
ಆನೆಗಳ ಚಲನ ವಲನಗಳ ಬಗ್ಗೆ ಸ್ವದೇಶಿ ನಿರ್ಮಿತ ರೇಡಿಯೊ ಕಾಲರ್ ಅಳವಡಿಕೆ | ಅರಣ್ಯ ಸಚಿವ ಈಶ್ವರ್ ಖಂಡ್ರೆ
February 6, 2025
7:33 AM
by: The Rural Mirror ಸುದ್ದಿಜಾಲ
ತುಮಕೂರು ಜಿಲ್ಲೆ | 10 ಬೆಂಬಲ ಬೆಲೆ ಖರೀದಿ ಕೇಂದ್ರಗಳಲ್ಲಿ ನೋಂದಣಿ ಪ್ರಕ್ರಿಯೆ ಆರಂಭ
February 5, 2025
6:45 AM
by: The Rural Mirror ಸುದ್ದಿಜಾಲ
ಮಕ್ಕಳ ಆರೋಗ್ಯ ಮತ್ತು ಭವಿಷ್ಯದ ಹಿತದೃಷ್ಟಿಯಿಂದ  ಬೆಳೆಗಳಿಗೆ ರಾಸಾಯನಿಕ ಬಳಸಬೇಡಿ
February 5, 2025
6:42 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror