ಕೊರೊನಾ ವೈರಸ್ | ಸುಳ್ಯದ ಸ್ಥಿತಿ ಹೀಗಿದೆ | ಅಗತ್ಯ ಸೇವೆ ಇದೆ | ದಿನಸಿ ಅಂಗಡಿ ಸ್ವಲ್ಪ ಹೊತ್ತು ಬೇಕಿದೆ | ಜನಸಂದಣಿಗೆ ಕಡಿವಾಣ ಬೇಕಿದೆ

March 24, 2020
12:31 PM

ಸುಳ್ಯ: ಕರೋನ್ ವೈರಸ್ ಹರಡುವುದನ್ನು  ತಡೆಯಲು ಸರಕಾರ ಹಲವು ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಅದರ ಭಾಗವಾಗಿ ಮಾ.31 ರವರೆಗೆ ಬಂದ್ ಆಚರಣೆ ಮಾಡಲಾಗುತ್ತಿದೆ. ಪೆಟ್ರೋಲ್, ಮೆಡಿಕಲ್, ಹಾಲು ಸೇರಿದಂತೆ ಅಗತ್ಯ ಸೇವೆಗಳು ಇರಲಿದೆ. ಆದರೆ ಹಾಲು ಬೆಳಗ್ಗೆ ಮಾತ್ರವೇ ಲಭ್ಯ ಇರುತ್ತದೆ.  ಸುಳ್ಯದಲ್ಲಿ  ಕೂಡಾ ಇದೇ ನಿಯಮ ಪಾಲನೆಯಾಗುತ್ತಿದೆ.

Advertisement

ದಿನಸಿ ಅಂಗಡಿ ತರಕಾರಿ ಅಂಗಡಿ ಮಧ್ಯಾಹ್ನದವರೆಗೆ ತೆರೆಯಬಹುದು  ಎಂಬ ಸೂಚನೆ ಇದ್ದರೂ ಗೊಂದಲಗಳಿಂದ ಅಂಗಡಿ ಬಾಗಿಲು ತೆರೆದಿಲ್ಲ. ಗ್ರಾಮೀಣ ಭಾಗದಲ್ಲೂ ಇದೇ ಗೊಂದಲ ಇದೆ. ಹೀಗಾಗಿ ಗ್ರಾಮೀಣ ಭಾಗದ ಜನರಿಗೂ ಗೊಂದಲ.

ಪೇಟೆಯಲ್ಲಿ ಅನಗತ್ಯವಾಗಿ ತಿರುಗಾಡುವುದು  ಹಾಗೂ ಅಂಗಡಿಗಳಲ್ಲಿ  ಜನಸಂದಣಿ ಸೇರುವುದು ಕಂಡುಬರುತ್ತಿದೆ. ಹೀಗಾಗಿ ಬಂದ್ ಮಾಡುವುದು  ಅನಿವಾರ್ಯವಾಗಿದೆ. ಜನರೇ ಸ್ವಯಂ ನಿಯಂತ್ರಣ ಮಾಡಿಕೊಂಡು ಕನಿಷ್ಟ ಅಂತರ ಕಾಪಾಡಿಕೊಂಡರೆ ಈ ಸಮಸ್ಯೆ ಉಲ್ಬಣಿಸದು. ಆದರೆ ಕೊರೊನಾ ವೈರಸ್ ಹರಡುವುದು ತಡೆಗೆ ಅಗತ್ಯವಾಗಿ ಆಡಳಿತದ ಜೊತೆ ಕೈಜೋಡಿಸಬೇಕಿದೆ.

ಮನೆಯಿಂದ ಹೊರಬರಬೇಡಿ – ದಿನಸಿ ಖರೀದಿಗೆ ಅವಕಾಶ ಇದೆ  : ತಹಶೀಲ್ದಾರ್ ಮನವಿ 

ಕೊರೊನಾ ವೈರಸ್ ಹರಡುವುದು  ತಡೆಗೆ ಜನರು ಜಾಗೃತರಾಗಿ ಮಾ.31 ರವರೆಗೆ ತುರ್ತು ಅವಶ್ಯಕತೆ ಹೊರತುಪಡಿಸಿ  ಸಾಧ್ಯವಾದಷ್ಟು ಮನೆಯಿಂದ ಹೊರಬರಬೇಡಿ ಎಂದು ತಹಶೀಲ್ದಾರ್ ಅನಂತ ಶಂಕರ್ ಮನವಿ ಮಾಡಿದ್ದಾರೆ. ದಿನಸಿ ಖರೀದಿಗೆ ಅವಕಾಶ ಇದೆ. ಯಾವುದೇ ಜನರು ಆತಂಕಕ್ಕೆ ಒಳಗಾಗಬೇಕಾಗಿಲ್ಲ. ದಾಸ್ತಾನು ಖಾಲಿಯಾದರೆ ವರ್ತಕರು ತರಿಸಿಕೊಳ್ಳಬಹುದು. ಬೆಳಗ್ಗೆ 6 ಗಂಟೆಯಿಂದ 12 ಗಂಟೆಯವರೆಗೆ ದಿನಸಿ ಅಂಗಡಿಗಳು ತೆರಯಬಹುದು ಎಂದು ಅನಂತ ಶಂಕರ್ ಹೇಳಿದ್ದಾರೆ. ಆದರೆ ಜನ ಸಂದಣಿ ಕಡಿಮೆ ಮಾಡಬೇಕು , ಎಲ್ಲೂ ಸೇರಬಾರದು ಎಂದು ತಿಳಿಸಿದ್ದಾರೆ.

Advertisement

ಗ್ರಾಮೀಣ ಭಾಗದಲ್ಲಿ ಬಂದ್… ಬಂದ್…

ಕೊರೊನಾ ವೈರಸ್ ಹರಡುವುದು  ತಡೆಗೆ ಗ್ರಾಮಿಣ ಭಾಗದ ಜನರು ಉತ್ತಮ ರೀತಿಯಲ್ಲಿ ಸ್ಪಂದನೆ ನೀಡಿದ್ದಾರೆ. ಸುಳ್ಯ ತಾಲೂಕಿನ ಬಹುತೇಕ ಎಲ್ಲಾ ಗ್ರಾಮೀಣ ಭಾಗಗಳೂ ಬಂದ್ ಆಗಿವೆ. ತುರ್ತಾಗಿ ದಿನಸಿ ಅಂಗಡಿಗಳಿಗೆ ತೆರಳುವುದೇ ಈಗ ಗ್ರಾಮೀಣ ಭಾಗದ ಜನರಿಗೆ ತಲೆ ನೋವಾಗಿದೆ.

ಮಾ.31 ರವೆರೆಗ ನಿಗದಿ ಪಡಿಸಿದ ಸಮಯದಲ್ಲಿ  ದಿನಸಿ ಖರೀದಿಗೆ ಅವಕಾಶ ಇದೆ:

 ಮಾ.31 ರವರೆಗೆ ನಿಗದಿ ಪಡಿಸಿದ ಸಮಯದಲ್ಲಿ  ದಿನಸಿ, ಹಾಲು , ತರಕಾರಿ ಖರೀದಿಗೆ ಅವಕಾಶ ಇದೆ. ಈ ಸಮಯ ಹೊರತುಪಡಿಸಿ ಉಳಿದ ಸಮಯದಲ್ಲಿ ಅನಗತ್ಯ ತಿರುಗಾಟ ಕಂಡುಬಂದರೆ ಕೇಸು ದಾಖಲಿಸಲಾಗುವುದು  ಎಂದು ಸಿಐ ನವೀನ್ ಚಂದ್ರ ಜೋಗಿ ಎಚ್ಚರಿಸಿದ್ದಾರೆ.

ಬೆಳ್ಳಾರೆಯಲ್ಲಿ  ಲಾಠಿ ಬೀಸಿದ ಪೊಲೀಸರು :

Advertisement

ಬೆಳ್ಳಾರೆಯಲ್ಲಿ  ಪೇಟೆಯಲ್ಲಿ ಅನಗತ್ಯವಾಗಿ ಓಡಾಟ ಮಾಡುತ್ತಿದ್ದವರನ್ನು  ಪೊಲೀಸರು ಲಾಠಿ ಬೀಸಿ ಓಡಿಸಿದ್ದಾರೆ. ಮಾ.31 ರವರೆಗೆ ಈ ಕ್ರಮಗಳು ಅನಿವಾರ್ಯವಾಗಿದೆ. ಇದೀಗ ಠಾಣಾ ವ್ಯಾಪ್ತಿಯಲ್ಲಿ  ಧ್ವನಿ ವರ್ಧಕದ ಮೂಲಕ ಮಾಹಿತಿ ತಿಳಿಸಲಾಗುತ್ತಿದೆ.

ಜಿಲ್ಲಾ ಗಡಿಭಾಗದಲ್ಲಿ ತಪಾಸಣೆ:

ಕೊರೊನಾ ವೈರಸ್ ಕೊಡಗು ಹಾಗೂ ಕಾಸರಗೋಡು ಕಡೆಯಲ್ಲಿ  ಹರಡಿರುವ ಕಾರಣದಿಂದ ಬೇರೆ ಜಿಲ್ಲೆಗಳಿಂದ ಜಿಲ್ಲೆಗೆ ಆಗಮಿಸುವ ಜನರನ್ನು ತಪಾಸಣೆಗೆ ಒಳಪಡಿಸಿಯೇ ಬಿಡಲಾಗುತ್ತಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ನಕಲಿ, ಕಳಪೆ ಗುಣಮಟ್ಟದ ರಸಗೊಬ್ಬರ ಪೂರೈಕೆ | ಕಠಿಣ ಕ್ರಮಕ್ಕೆ  ರಾಜ್ಯ ಸರ್ಕಾರಕ್ಕೆ ಕೇಂದ್ರದಿಂದ ನಿರ್ದೇಶನ
July 17, 2025
10:13 PM
by: The Rural Mirror ಸುದ್ದಿಜಾಲ
ಮಂಡ್ಯದಲ್ಲಿ  ಸ್ವಸಹಾಯ ಸಂಘದ ಮಹಿಳೆಯರಿಗೆ ಮೇಕೆ, ಕುರಿ, ಕೋಳಿ ಸಾಕಾಣಿಕೆ ಅವಕಾಶ
July 17, 2025
10:01 PM
by: The Rural Mirror ಸುದ್ದಿಜಾಲ
ಇಂಧನ ಆಮದು ದೇಶಗಳ ಗುಂಪು ವಿಸ್ತರಿಸಿದ ಭಾರತ – 2 ಲಕ್ಷ ಚ.ಕಿ.ಮೀ. ಪ್ರದೇಶದಲ್ಲಿ ಹೈಡ್ರೋಕಾರ್ಬನ್ ಪರಿಶೋಧನೆ
July 17, 2025
9:51 PM
by: The Rural Mirror ಸುದ್ದಿಜಾಲ
ಮುಳ್ಳಯ್ಯನಗಿರಿಗೆ 600 ವಾಹನಗಳಿಗೆ ಪ್ರವೇಶ | ವಾಹನಗಳ ದಟ್ಟಣೆ ನಿಯಂತ್ರಿಸಲು ಕ್ರಮ
July 17, 2025
9:46 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group